ಶಿವಮೊಗ್ಗ | ಕೋಟೆ ಸೀತಾರಾಮಾಂಜನೆಯ ತೆಪ್ಪೋತ್ಸವ ಜ.3ಕ್ಕೆ

ಶಿವಮೊಗ್ಗ

ಶಿವಮೊಗ್ಗ, ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ದ 65 ನೆಯ ವರ್ಷದ ತೆಪ್ಪೋತ್ಸವ ಸೀತಾಕಲ್ಯಾಣ ಶತಮಾನೋತ್ಸವ ಸಂದರ್ಭದಲ್ಲಿ 03-01-2026ರ ಶನಿವಾರ ರಾತ್ರಿ 7:30 ರಿಂದ ವೈಭವದ ತೆಪ್ಪೋತ್ಸವ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಪ್ಪೋತ್ಸವ ಸಮಿತಿ‌ ಅಧ್ಯಕ್ಷ , ಮೊದಲು 8-10 ವರ್ಷಗಳ ಕಾಲ ಬಿದುರು ಬೊಂಬುಗಳ ತೆಪ್ಪದಲ್ಲಿ ಭೀಮನ ಮಡುವಲ್ಲಿ ತೆಪ್ಪೋತ್ಸವ ನಡೆಯಿತು. ನಂತರ ಜೋಡಿ ದೋಣಿಯಲ್ಲಿ ಅದೇ ಜಾಗದಲ್ಲಿ 4-5 ವರ್ಷ ಕಾಲ ತೆಪ್ಪೋತ್ಸವ ಮುಂದುವರೆಯಿತು. ಮಡುವಿನ ಜಾಗ ದರ್ಶನಾಕಾಂಕ್ಷಿ ಭಕ್ತರ ಮತ್ತು ಉತ್ಸವ ಮೂರ್ತಿಯ ಸುರಕ್ಷತೆಗೆ ಸೂಕ್ತ ತಾಣವಲ್ಲ ಎಂದು ಕೋರ್ಪಲಯ್ಯ ಛತ್ರದ ಬಳಿಗೆ ಸ್ಥಳಾಂತರಿಸಲಾಯಿತು ಎಂದು ವಿವರಿಸಿದರು.

ಅಂದಿನಿಂದ ತೆಪ್ಪೋತ್ಸವದ ಸ್ವರೂಪದಲ್ಲಿ ಕಾಲಕಾಲಕ್ಕೆ ನವೀನ ರೀತಿಯಲ್ಲಿ ತೆಪ್ಪವನ್ನು ನಿರ್ಮಿಸಿ ಉತ್ಸವ ನಡೆಸಲಾಗುತ್ತಿದೆ.ಕಲ್ಯಾಣೋತ್ಸವ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದ್ದ ತೆಪ್ಪೋತ್ಸವವನ್ನು ಒಂದು ಸ್ವತಂತ್ರ ಸಮಿತಿ ರಚಿಸಿ ಅದರ ಮೇಲ್ವಿಚಾರಣೆಯಲ್ಲಿ ಮತ್ತಷ್ಟು ಅದ್ದೂರಿಯಿಂದ ವೈಭವದಿಂದ ನಡೆಸಲು ಯೋಜಿಸಲಾಯಿತು.

ಈ ಸಮಿತಿಯು ಕಳೆದ 25 ವರ್ಷಗಳಿಂದ ಅದ್ದೂರಿಯಾಗಿ, ವೈಭವದಿಂದ ತಪ್ಪೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಝಗ ಝಗಿಸುವ ವಿದ್ಯುತ್ ದೀಪಾಲಂಕಾರ, ಬಣ್ಣ-ಬಣ್ಣದ ಹೂ ಬೆಳಕನ್ನು ಹೊರಹಾಕುವ ಸಿಡಿಮದ್ದುಗಳು, ಸುಶ್ರಾವ್ಯವಾದ ಮಂಗಳವಾದ್ಯ, ಭಕ್ತಿ ಸಂಗೀತ ಹಾಗೂ ಮನಕ್ಕೆ ಮುದ ನೀಡುವ ಭಜನೆ ಇವುಗಳೆಲ್ಲದರ ಮಧ್ಯೆ ಸರ್ವಾಲಂಕಾರ ಭೂಷಿತ ಕೋದಂಡರಾಮರ ಉತ್ಸವ ಬಿಂಬ ತಪ್ಪದಲ್ಲಿ ವಿಜೃಂಭಿಸಲಿದೆ ಎಂದರು.

Author