ಶಿವಮೊಗ್ಗದಲ್ಲಿ ರಿಕ್ರಿಯೆಷನ್ಸ್ ಕ್ಲಬ್‍ಗಳ ಹೆಸರಿನಲ್ಲಿ ಜೂಜು ಅಡ್ಡೆಗಳು ತಲೆ ಎತ್ತುತ್ತಿದ್ದು, ಅವುಗಳನ್ನು ನಿಯಂತ್ರಿಸಿ ನಾಗರೀಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕಿದ್ದ ಪೊಲೀಸ್ ಇಲಾಖೆ ತಟಸ್ಥವಾಗಿದೆ ಎಂದು ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್‍ಪಿ ಬಾಬು ಅಂಜನಪ್ಪ ನೇರವಾಗಿಯೇ ಈ ಕ್ಲಬ್‍ಗಳನ್ನು ನಡೆಸುತ್ತಿರುವವರಿಂದ ಲಕ್ಷಾಂತರ ರೂಪಾಯಿಗಳ ಮಾಮೂಲಿ ಪಡೆದು ಕ್ಲಬ್ ನಡೆಸಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಚಿತ್ರಪ್ಪ ಯರಬಾಳ ಎಂಬುವವರು ಬಾಬು ಅಂಜನಪ್ಪ ವಿರುದ್ಧ ಲೋಕಾಯುಕ್ತದಲ್ಲಿ ಕೇಸು ದಾಖಲಿಸಿದ್ದಾರೆ.
ಡಿ.23ರಂದು ಕರ್ನಾಟಕ ಲೋಕಾಯುಕ್ತರಲ್ಲಿ ಇಸ್ಪೀಟ್ ಕ್ಲಬ್‍ಗಳಿಂದ ಮಾಮೂಲಿ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿರುವ ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್‍ಪಿ ಬಾಬು ಅಂಜನಪ್ಪ ಅವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕೇಸು ದಾಖಲಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಾಗುತ್ತಿದಂತೆ ಕೆಲವು ಇಸ್ಪೀಟ್ ಜೂಜು ಕ್ಲಬ್ ಗಳನ್ನು ಸಹ ಪೊಲೀಸ್ ಇಲಾಖೆ ಬಂದ್ ಮಾಡಿಸಿದ್ದಾರೆ.
ನಗರದಲ್ಲಿ ಇಸ್ಪೀಟ್ ಜೂಜು ನಡೆಸುವ ಇಂತಃ ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಇಲಾಖೆಯ ಅಧಿಕಾರಿ ಮೇಲೆ ನೇರವಾಗಿ ಆರೋಪ ಬಂದಿದೆ. ಮುಂದುವರೆದು ನಗರದಲ್ಲಿ ಪೊಲೀಸ್ ಇಲಾಖೆ ಮೇಲೆ ಪುಡಿ ರೌಡಿಗಳಿಗೆ, ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಭಯವಿಲ್ಲದಾಗಿದೆ.
ಡಿವೈಎಸ್ಪಿ ಕಚೇರಿಗಳಲ್ಲೇ ಈ ರೀತಿಯ ಸಮಾಜಘಾತುಕ ಶಕ್ತಿಗಳು ಕಾಣಸಿಗುತ್ತಿದ್ದಾರೆ ಎಂಬುದು ವಿಷಾದನೀಯದ ಸಂಗತಿಯಾಗಿದೆ!
ಈ ಹಿಂದೆ ಡಿವೈಎಸ್ಪಿ ಆಗಿದ್ದ ಬಾಲರಾಜ್ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಕ್ರೈಂ ಕಡಿವಾಣ ಹಾಕಲು ಯಶಸ್ವಿಯಾಗಿದ್ದರು.

ಪ್ರಸ್ತುತ ಇಂದಿನ ಪರಿಸ್ಥಿತಿ ನಗರದಲ್ಲಿ ಚಿತ್ರಣವೇ ಬೇರೆಯಾಗಿದೆ ಪೊಲೀಸ್ ಇಲಾಖೆ ಮೇಲೆ ಭಯವಿರದ ವಾತಾವರಣ ನಿರ್ಮಾಣವಾಗುತ್ತಿರುವುದು ನೇರವಾಗಿ ಪೊಲೀಸ್ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಖಡಕ್ ಅಧಿಕಾರಿಗಳ ಕೊರತೆಯಿಂದ ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ಹೆಚ್ಚಾಗುತ್ತಿದೆ ಎಂಬುದು ಪ್ರಜ್ಞಾವಂತ ನಾಗರೀಕರ ಮಾತಾಗಿದೆ.ಇದು ನಾಗರೀಕ ಸಮಾಜಕ್ಕೆ ಅಪಾಯಕಾರಿಯಾದ ಸಂಗತಿಯಾಗಿ ಪರಿಣಮಿಸಿದೆ.
ಡಿವೈಎಸ್ಪಿ ಕಚೇರಿಯಲ್ಲಿ ಜೂಜಾಟದ ಕುಮ್ಮಕ್ಕಿಗೆ ಪ್ರೋತ್ಸಾಹ ಸಿಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಕೆಲವು ಪತ್ರಕರ್ತರು ಇಂತಃ ಸಮಾಜಘಾತುಕ ಶಕ್ತಿಗಳ ಮಟ್ಟ ಹಾಕುವ ಬದಲು ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದೆ.
ಪೊಲೀಸ್ ಇಲಾಖೆ ಇಂತಃ ವಿಚಾರಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ನಾಗರೀಕ ಸಮಾಜ ಮೆಚ್ಚುವಂತೆ ಕರ್ತವ್ಯ ನಿರ್ವಹಿಸಬೇಕಿದೆ ಸಮಾಜಘಾತುಕ ಶಕ್ತಿಗಳನ್ನ ಬಗ್ಗು ಬಡಿಯಬೇಕಿದೆ.



