ಶಿವಮೊಗ್ಗ, ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದಾಗ್ಯೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ 2025-26 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲವಾಗಿ 1250.30 ಕೋಟಿ ರೂ. ನೀಡಿದೆ. ಸಾಲ ವಸೂಲಾತಿ ಶೇ 99.02 ರಷ್ಟಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಹೇಳಿದರು.ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಮಾವಧಿ ಕೃಷಿ ಸಾಲ ಪ್ರಸಕ್ತ ದಿನಾಂಕದವರೆಗೆ 627 ರೈತರಿಗೆ ರೂ.15.21 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ.
ಸ್ವ-ಸಹಾಯ ಸಂಘಗಳಿಗೆ 3488 ರೂ.157.22 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಶೇ.98.00 ಇದೆ ಎಂದರು.
ಬ್ಯಾಂಕಿನ ಶಾಖೆಗಳ ಮೂಲಕ 17937 ವ್ಯಕ್ತಿಗಳಗೆ ಕೃಷಿಯೇತರ ಸಾಲ ೬೪೩ ಕೋ. ರೂ. ನೀಡಲಾಗಿದ್ದು, ಒಟ್ಟಾರೆ ಸಾಲ ನೀಡಿಕೆ ರೂ.1800.00 ಕೋಟಿ ಆಗಿದೆ. 2025-26 ನೇ ಸಾಲಿನಲ್ಲಿ ಬ್ಯಾಂಕಿನಿಂದ 16626 ರೈತರಿಂದ ರೂ.6.75 ಕೋಟಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಲಾಗಿದ್ದು, ನವೆಂಬರ್-2025 ರ ಮಾಹೆಯಲ್ಲಿ ಬ್ಯಾಂಕಿನಿಂದ ವಿಮೆ ಪಾವತಿಸಿದವರ ಪೈಕಿ 11921 ರೈತರಿಗೆ ರೂ.11.53 ಕೋಟಿ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಿದೆ ಎಂದರು.
ಷೇರು ಬಂಡವಾಳ ರೂ.15534 ಕೋಟಿ ಹಾಗೂ ನಿಧಿಗಳು ರೂ. 2523.86 ಕೋಟ, ನೆಟ್‌ವರ್ಕ್ ಪ್ರಮಾಣ ಶೇ.0.88, ಒಟ್ಟಾರೆ ಬ್ಯಾಂಕಿನ ವ್ಯವಹಾರವು ವಾರ್ಷಿಕ ರೂ.3700.00 ಕೋಟಿ ತಲುಪಿದ್ದು, ನಬಾರ್ಡ್ ರೂ.215.94 ಕೋಟಿ, ಸಿಆರ್‌ಎಆರ್ ಶೇ.12.38. ನಿವ್ವಳ ಎನ್.ಪಿ.ಎ ಪರಿವೀಕ್ಷಣಾ ವರದಿಯಲ್ಲಿ “ಎ” ದರ್ಜೆ ಪಡೆದಿರುತ್ತದೆ.ರೂ.1720.88 ಕೋಟಿ ಠೇವಣಿ ಸಂಗ್ರಹಣಿಯಾಗಿದೆ ಎಂದರು.
45 ಕೋಟಿ ರೂ. ಲಾಭ > 2025-26 ನೇ ಸಾಲಿನಲ್ಲಿ ರೂ.1900.00 ಕೋಟಿ ಠೇವಣಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಮಾರ್ಚ್-2026 ರ ಅಂತ್ಯಕ್ಕೆ ರೂ.45.00 ಕೋಟಿ ನಿವ್ವಳ ಲಾಭಗಿಸುವ ಯೋಜನೆಯನ್ನು ಹೊಂದಲಾಗಿದೆ.ಬ್ಯಾಂಕಿನಿಂದ ಸದ್ಯದಲ್ಲಿಯೇ ಐ.ಎಂ.ಪಿ.ಎಸ್ ಹಾಗೂ ಯು.ಪಿ.ಐ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದು ಅಧ್ಯಕ್ಷರಾದ ಮಂಜುನಾಥ ಗೌಡ, ತಿಳಿಸಿದರು.



