ಶಿವಮೊಗ್ಗ | ಬಿಜೆಪಿ ಮಾಧ್ಯಮ ವಿಭಾಗದಿಂದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ

ಶಿವಮೊಗ್ಗ

ಶಿವಮೊಗ್ಗ, ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಶಾಖೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವೈದ್ಯನಾಥ್ ಹೆಚ್. ಯು. ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಯುತ ಹಾಲಸ್ವಾಮಿ ಅವರನ್ನು ದಿನಾಂಕ 20.12.2025 ರಂದು ನಡೆದ ಪದಗ್ರಹಣ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಮಾಧ್ಯಮ ವಿಭಾಗದಿಂದ ಅಭಿನಂದಿಸಲಾಯಿತು.

ಶ್ರೀಯುತ ವೈದ್ಯನಾಥ ಅವರು ಕೇವಲ ಪತ್ರಕರ್ತರಲ್ಲದೆ ಹಲವು ಕ್ಷೇತ್ರಗಳಲ್ಲಿ ವಿಶೇಷವಾಗಿ ರಂಗಭೂಮಿಯಲ್ಲಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ ಆಸಕ್ತಿಯನ್ನು ಹೊಂದಿರುವ ಶ್ರೀಯುತರ ಕಾರ್ಯ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತ್ಯುನ್ನತವಾದ ಸಾಧನೆಯನ್ನು ಮಾಡಲಿ ಎಂದು ಆಶಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಮ್ಮ ಟಿವಿ ಶಿವಮೊಗ್ಗದ ಶ್ರೀ ಜಗದೀಶ್ ಅವರು ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ಚಂದ್ರಶೇಖರ್.ಎಸ್ ಹಾಗೂ ಸಹ ಸಂಚಾಲಕರಾದ ಶ್ರೀಯುತ ಮಂಜುನಾಥ್.ಎನ್ ಅವರು ಉಪಸ್ಥಿತರಿದ್ದರು

Author