ಉಡುಪಿ | ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸುತಿದ್ದ ಮತ್ತೊಬ್ಬ ಆರೋಪಿ ಬಂಧನ

ಉಡುಪಿ

ಉಡುಪಿ, ಭಾರತದ ನೌಕಪಡೆಯ ರಹಸ್ಯ ಮಾಹಿತಿ ರವಾನೆ ಪ್ರಕರಣ ಸಂಬಂಧ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಉಡುಪಿಯ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಮುಖ ಇಬ್ಬರನ್ನು ಈ ಮೊದಲು ಬಂಧಿಸಲಾಗಿತ್ತು.

ಇದೀಗ ಗುಜರಾತ್ ಮೂಲದ ಆನಂದ ತಾಲೂಕಿನ ಕೈಲಾಶ್ ನಗರಿಯ ಹಿರೇಂದ್ರ (34) ಎಂಬುವನ ಬಂಧನವಾಗಿದೆ.

ಬಂಧಿತ ಆರೋಪಿ ಹಿತೇಂದ್ರ ಹಣ ಪಡೆದುಕೊಂಡು ರೋಹಿತ್ ಮತ್ತು ಸಂತ್ರಿಗೆ ಎಂಬ ಪ್ರಮುಖ ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ್ದ ಜೊತೆಗೆ, ಭಾರತದ ನೌಕಪಡೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನು ಇದೆ ಪ್ರಕರಣ ಸಂಬಂಧ ನವೆಂಬರ್ 21 ರಂದು ಉತ್ತರ ಪ್ರದೇಶ ರೋಹಿತ್ ಮತ್ತು ಸಂತ್ರಿ ಎಂಬ ಪ್ರಮುಖ ಆರೋಪಿಗಳ.ಕೊಚ್ಚಿನ್ ಶಿಪ್ ಯಾರ್ಡ್ ಅಧಿಕಾರಿಗಳಿಗೆ ಈ ಮೇಲಿನ ಆರೋಪಿಗಳ ಮೇಲೆ ಸಂಶಯ ಬಂದು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಚಾರಣೆ ವೇಳೆ ಹಡಗುಗಳ ನಂಬರ್ ಗೌಪ್ಯ ಪಟ್ಟಿ ಹಾಗೂ ನೌಕಪಡೆಯ ರಹಸ್ಯ ಮಾಹಿತಿ ರವಾನೆ ಮಾಡುತ್ತಿದ್ದು ತಿಳಿದುಬಂದಿದೆ.

ಇದೆ ವೇಳೆ ಮತ್ತೊಬ್ಬ ಆರೋಪಿ ಇರುವುದು ತಿಳಿದ ಹಿನ್ನಲೆಯಲ್ಲಿ ಪೊಲೀಸರು ಮೂರನೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Author