ಶಿವಮೊಗ್ಗದ ಜಯಪ್ರಕಾಶ್ ನಾರಾಯಣ ಪದವಿ ಪೂರ್ವ ಕಾಲೇಜಿನಲ್ಲಿ 2025 -26 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸುಧೀರ್ ಜಿ.ಎನ್ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು ಕ್ರಿಯಾಶೀಲ ಕೆಲಸವನ್ನು ಮಾಡಿದಾಗ, ಕ್ರೀಡೆಗಳಲ್ಲಿ ಹಾಗೂ ಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಈ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಪ್ರಕಾಶ್ ಎನ್.ಜೆ ಮಾತನಾಡಿ ದೀಪವನ್ನು ಜ್ಞಾನಕ್ಕೆ ಹೋಲಿಸುತ್ತಾ, ಜೀವನ ಹಂತಗಳನ್ನು ರೂಪಿಸಿಕೊಳ್ಳುವಲ್ಲಿ ಪ್ರೌಢ ಮತ್ತು ವಯಸ್ಕ ಹಂತ ಸೂಕ್ತವಾದ ಕಾಲಘಟ್ಟವಾಗಿದೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಒಳ್ಳೆಯ ಆಯ್ಕೆಗಳು ನಮ್ಮದಾಗಿರಬೇಕು ಅಂದಾಗ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ರಿಯಾಜ್ ಮಾತನಾಡಿ ತಮ್ಮ ಬಾಲ್ಯದ ಜೀವನದಲ್ಲಿ ಹಣ್ಣು ಮಾರುವ ಮೂಲಕ ಅತ್ಯಂತ ಕಷ್ಟದಲ್ಲಿ ವಿದ್ಯಭ್ಯಾಸ ಮಾಡಿ ಇಂದು ಅಮೇರಿಕಾದ ಕಂಪನಿ ಒಂದರಲ್ಲಿ ಕರ್ತವ್ಯ ಮಾಡುತ್ತ ಅವರ ಕೈ ಕೆಳಗೆ 50 ಸಹದ್ಯೋಗಿಗಳು ಇರುವುದನ್ನು ನೆನೆಯುತ್ತ ವಿದ್ಯೆ ಎಂದಿಗೂ ಗೌರವ ತಂದುಕೊಡತ್ತೆ ಹೀಗಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ನಿರ್ಲಕ್ಷ ಮಾಡಬೇಡಿ ಉನ್ನತ ಸ್ಥಾನ ಬರುವುದಕ್ಕೆ ವಿದ್ಯೆ ಅಮೂಲ್ಯವೆಂಬುದನ್ನು ತಿಳಿಸಿದರು.

ಹಳೆಯ ವಿದ್ಯಾರ್ಥಿ ಮಸ್ತಾನ್ ಮಾತನಾಡಿ ಗೆಲುವು ಎಲ್ಲರಿಗೂ ಸಿಗುವುದಿಲ್ಲ ಆದರೆ ಗೆಲ್ಲುವ ಶಕ್ತಿ ಎಲ್ಲರಲ್ಲೂ ಇರುತ್ತದೆ.ಬಾಬಾ ಸಾಹೇಬ್ ಅಂಬೇಡ್ಕರವರ ವಿಚಾರ ತಿಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಪಣೆ ನೀಡಿದರು, ಮುಂದುವರೆದು ಮಾತನಾಡಿ ಪೋಷಕರು ಹಾಗೂ ಶಿಕ್ಷಕರಿಗೆ ಗೌರವ ನೀಡಿ, ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಜವಾಬ್ದಾರಿಯುತ ಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಬರಲು ವಿದ್ಯೆಗೆ ಬೆಲೆ ನೀಡಿ ಗೌರವ ನೀಡಿ, ನಿಮ್ಮ ಮುಂದಿನ ಜೀವನದಲ್ಲಿ ಯಶಸ್ಸು ದೊರೆಯಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ದಿಲೀಪ್ ಕುಮಾರ್ ಪಾಂಡೆ ಎಸ್ ಹಾಗೂ ಅತಿಥಿಗಳಾಗಿ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶ್ರೀ ರಿಯಾಜ್ ಅಹಮ್ಮದ್ ಮತ್ತು ಶ್ರೀ ಮಸ್ತಾನ್ ಆಗಮಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಜೆಪಿಎನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಇಮ್ತಿಯಾಜ್ ಅಹ್ಮದ್ ಇ – ಕನ್ನಡ ಮಾಧ್ಯಮ ಸಂಪಾದಕರಾದ ಶ್ರೀ ರಾಘವೇಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಕುಮಾರಿ ರೂಪ ಹಾಗೂ ತಂಡ ಸ್ವಾಗತವನ್ನು ಮಾಡಿದರು. ಕು, ಕೀರ್ತನ ವಂದನಾರ್ಪಣೆಯನ್ನು ಮಾಡಿದರು. ಕು, ನರಸಿಂಹಮೂರ್ತಿ ನಿರೂಪಣೆಯನ್ನು ನಡೆಸಿಕೊಟ್ಟರು ಮತ್ತು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.



