ತುಮಕೂರು | ರಿಯಲ್ ಎಸ್ಟೇಟ್ ಉದ್ಯಮಿಯಿಂದ ವ್ಯಕ್ತಿ ಕೊಲೆ

ತುಮಕೂರು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ತೋಟದಲ್ಲಿ ಮಧುವನ್ (25) ಕೊಲೆಯಾದ ಯುವಕ.

ತೋಟದಲ್ಲಿ ಮಧುವನ್ ಭೇಟಿಯಾಗಿದ್ದ ಸಂದರ್ಭದಲ್ಲಿ ಮೂರು ಕೋಟಿ ಮೌಲ್ಯದ ಎರಡು ಎಕರೆ ಜಮೀನು ಗಲಾಟೆ ನಡೆದ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಹಾಗೂ ಶಫಿಯುಲ್ಲ ಎಂಬುವವರಿಂದ ಯುವಕನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

2015 ರಲ್ಲಿ ಮಧುವನ್ ತಂದೆ ನಾರಾಯಣ ಸ್ವಾಮಿ ಅವರಿಗೆ ಅವರ ತಾಯಿಯಿಂದ ಬಂದ ತುಮಕೂರು ನಗರದ ಅಮಾನಿಕೆರೆ ಬಳಿ ಇರುವ 2.2 ಎಕರೆ ಜಮೀನು ಮಹೇಶನಿಗೆ ಮಾರಾಟ ಮಾಡಲು ಮುಂದಾಗಿದ್ದರು.

ಈ ವೇಳೆ ಜಮೀನಿನ ದಾಖಲೆ ಸಮಸ್ಯೆ ಕಾರಣ ಸರಿಪಡಿಸಿ ಮಾರಲು ಮೂರು ವರ್ಷ ತಡವಾಯಿತು.2018 ರಲ್ಲಿ ಸಮಸ್ಯೆ ಬಗೆಹರಿದ ನಂತರ ನಾರಾಯಣ ಸ್ವಾಮಿ ಅವರ ಮಧುವನ್ ಜಮೀನು ಮಾರಲು ನಿರಾಕರಿಸಿದರು.

ಹೀಗಾಗಿ ಜಮೀನು ವಿಚಾರವಾಗಿ ಕಳೆದ 7 ವರ್ಷಗಳಿಂದ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.ಈ ಸಂದರ್ಭದಲ್ಲಿ ತೋಟಕ್ಕೆ ಬಂದಿದ್ದ ಮಹೇಶ್ ಹಾಗೂ ಶಫಿ ನಡುವೆ ಮಧುವನ್ ಜೊತೆ ಮಾತಿಗೆ ಮಾತು ಬೆಳೆದು ತೋಟದಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Author