ಶಿವಮೊಗ್ಗ | ಡಿ. 20ರಂದು ಶರಣ ಸಂಗಮ-307 ; ಶಾರದಾ ಎಚ್. ಎಂ. ಚಂದ್ರಶೇಖರಪ್ಪ ದತ್ತಿ ಉಪನ್ಯಾಸ

ಶಿವಮೊಗ್ಗ

ಶಿವಮೊಗ್ಗ, ಹುಣಸಘಟ್ಟದ ಶರಣ ಎಚ್. ಎಂ. ಮಲ್ಲಿಕಾರ್ಜುನಪ್ಪ ಮಾಜಿ ಶಾಸಕರು ಶರಣಿ ಅಂಗಮ್ಮ ಮಲ್ಲಕಾರ್ಜುನಪ್ಪ ಶರಣೆ ಶಾರದಾ ಎಚ್. ಎಂ.ಚಂದ್ರಶೇಖರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವು 20 ಡಿಸೆಂಬರ್ 2025, ಶನಿವಾರ ಸಂಜೆ 6.30 ಕ್ಕೆ ಕುವೆಂಪು ರಂಗಮಂದಿರದಲ್ಲಿ‌ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಎಚ್ ಎಂ ಚಂದ್ರಶೇಖರಪ್ಪ, ಕಾರ್ಯಕ್ರಮದಲ್ಲಿ ನಿಡಸೋಸಿ ದುರದುಂಡೇಶ್ವರ ಮಠದ ನಿಜಲಿಂಗೇಶ್ವರ ಮಹಾ ಸ್ವಾಮೀಜಿ ಮತ್ತು ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ವಹಿಸುವುವರು.

ಉಪನ್ಯಾಸ ವನ್ನು ಇಸ್ರೋದ ಹಿರಿಯ ವಿಜ್ಞಾನಿ ರೂಪಾ ಎಂ. ಬಿ. ನೀಡುವರು ಎಂದರು.2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಣಂದೂರು ಲಿಂಗಪ್ಪ, ಪ್ರೊ. ರಾಜೇಂದ್ರ ಚೆನ್ನಿ ಮತ್ತು ಬಿ. ಟಾಕಪ್ಪ ಕಣ್ಣೂರು ಅವರನ್ನು ಗೌರವಿಸಲಾಗುವುದು ಎಂದರು.

ಅಧ್ಯಕ್ಷತೆಯನ್ನು ಬಸವ ಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ವಹಿಸುವರು. ಈ ಸಂದರ್ಭದಲ್ಲಿ ವಚನ ಗಾಯನವನ್ನು ಅಕ್ಕನ ಬಳಗ, ಶಿವಮೊಗ್ಗಇವರ ನೇತೃತ್ವದಲ್ಲಿ ಶರಣಿ ನಾಗರತ್ನ ಸುರೇಶ್ ಮಾರ್ಗದರ್ಶನದಲ್ಲಿ 108 ಜನರಿಂದ ಗುರುಕರುಣ ತ್ರಿವಿಧಿ ಪಾರಾಯಣ ನಡೆಯಲಿದೆ ಎಂದರು.

Author