ಶಿವಮೊಗ್ಗ | ಹೊಟೆಲ್, ತಿಂಡಿಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣ ಬಳಕೆ ವಿರುದ್ಧ ಕ್ರಮಕ್ಕೆ ಎನ್ ಎಸ್ ಯು ಐ ಆಗ್ರಹ

ಶಿವಮೊಗ್ಗ

ಶಿವಮೊಗ್ಗ, ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣಗಳು ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವುದರ ವಿರುದ್ಧ ಸೂಕ್ರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಎನ್ ಎಸ್ ಯುಐ ಇಂದು ಮನವಿ ಸಲ್ಲಿಸಿತು.

ಆಹಾರ ಸುರಕ್ಷತಾ ಕಾಯ್ದೆಯಂತೆ ಹೋಟೆಲ್, ತಿಂಡಿ ಅಂಗಡಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಬಣ್ಣಗಳನ್ನು ಮತ್ತು ಟೇಸ್ಟಿಂಗ್ ಪೌಡರ್ (ಅಜಿನಮೋಟೋ) ಬಳಸುವಂತಿಲ್ಲ. ಇವುಗಳನ್ನು ಬಳಕೆ ಮಾಡಿದ ಆಹಾರವನ್ನು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಮಾರಕರೋಗಗಳು ಬರುತ್ತವೆ ಎನ್ನುವ ಕಾರಣದಿಂದ ಸರ್ಕಾರ ಇವುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿದೆ.

ಆದರೆ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಹೋಟೆಲ್‌ಗಳು, ತಿಂಡಿಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಅನ್ನು ವ್ಯಾಪಕ ಬಳಕೆ ಮಾಡುತ್ತಿದ್ದು, ಇದನ್ನು ತಡೆಯಬೇಕಿರುವ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಸುಮ್ಮನಿರುವುದನ್ನು ಖಂಡಿಸಿದರು.

ಶಿವಮೊಗ್ಗ, ಪಾಲಿಕ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಾನ್‌ವೆಜ್ ಹೋಟೆಲ್‌ಗಳು, ಚಾಟ್ಸ್ ಅಂಗಡಿಗಳು ತಲೆಯೆತ್ತಿವೆ. ಫುಟ್‌ಪಾತ್‌ಗಳಲ್ಲಿಯೂ ಚಿಕ್ಕ ಚಿಕ್ಕ ಗಾಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ.

ಇಂತಹ ಅಂಗಡಿಗಳಿಗೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ತಿನಿಸುಗಳಿಗೆ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಆದರೆ, ಯಾವೊಬ್ಬ ಈ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಆರೋಪಿಸಿದರು.

Author