ಶಿವಮೊಗ್ಗ, ಇ.ಎಸ್.ಐ ಕಾ.ರಾ.ವಿ ಚಿಕಿತ್ಸಾಲಯದ ಕೆಲಸ ಸಮಯವು ಬೆಳಗ್ಗೆ 9.00 ರಿಂದ 12.30ರ ವರೆಗೆ ಹಾಗೂ ಸಂಜೆ 4.00 ರಿಂದ 6.30ರ ವರೆಗೆ ನಿಗಧಿಪಡಿಸಿದ ಸಮಯವಾಗಿರುತ್ತದೆ. ಆದರೆ ಈ ಸಮಯದಲ್ಲಿ ಎಲ್ಲರಿಗೂ ಪ್ರಯೋಜನ ವಿಫಲವಾಗುತ್ತಿದೆ.
ಕಾರಣ ಇಲ್ಲಿಗೆ ಬರುವಂತಹ ವಿಮಾದಾರರು ಸುಮಾರು ದೂರದ ಊರುಗಳಾದ ಶಿಕಾರಿಪುರ, ಸಾಗರ, ಸೊರಬ, ಆನವಟ್ಟಿ, ಶಿರಾಳಕೊಪ್ಪ, ಆಯನೂರು, ಹೊನ್ನಾಳಿ, ತೀರ್ಥಹಳ್ಳಿ, ಚನ್ನಗಿರಿ, ಶೃಂಗೇರಿ, ಕೊಪ್ಪ ಕಡೂರುಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.
ಅವರುಗಳು ಅಲ್ಲಿಂದ ಬಂದು ಬರುವಾಗ ವಾಹನದ ಕೊರತೆ ಅಥವಾ ಬಸ್ ವಿಳಂಬದಿಂದ ಇಲ್ಲಿಗೆ ಸರಿಯಾದ ಸಮಯದಕ್ಕೆ ಬರಲಾಗುವುದಿಲ್ಲ, ಇ.ಎಸ್.ಐ ನಲ್ಲಿ ಇಲ್ಲದೆ ಇರುವ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳಲು ಮಧ್ಯಾಹ್ನ 12.30 ಗಂಟೆಯ ನಂತರ ಬಂದರೆ ಇಲ್ಲಿ 12.30 ಬೆಳಗ್ಗೆ ಸಮಯ ಮುಗಿದಿರುತ್ತದೆ.

ನಂತರ ತೆರೆಯುವ ಸಮಯ 4.00 ಗಂಟೆ ಆಗಿರುತ್ತದೆ, ಆಗ ರೆಪರನ್ಸ್ ಲೆಟರ್ ತೆಗೆದುಕೊಂಡು ತೆರಳುವಾಗ ಅಲ್ಲಿಯ ಆಸ್ಪತ್ರೆಯ ಸಮಯ ಹೊರರೋಗಿಗಳ ಸಮಯ ಮುಗಿದು ವಿಮಾದಾರರಿಗೆ ಚಿಕತ್ಸೆ ಪಡೆಯಲು ಬಹಳ ತೊಂದರೆ ಆಗುತ್ತಿದ್ದು, ಮರಳಿ ಊರುಗಳಿಗೆ ಹೊಗಲು ಬಹಳಷ್ಟು ಕಷ್ಟವಾಗುತ್ತಿದ್ದು, ರೋಗಿಗಳ, ವಿಮಾದಾರರ ಕುಟುಂಬ ದವರಿಗೆ ಬಹಳ ತೊಂದರೆ ಉಂಟಾಗುತ್ತಿದೆ.
ಹಾಗಾಗಿ ಸಮಯವನ್ನು ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆ ವರೆಗೆ ಸಮಯವನ್ನು ಬದಲಿಸಿ ರೋಗಿಗಳಿಗೆ ಬೇಗನೆ ಚಿಕಿತ್ಸೆ ಪಡೆಯುವ ಅವಕಾಶ ಆಗುತ್ತದೆ. ಕುಟುಂಬದವರಿಗೂ ರೋಗಿಗಳ ಜೊತೆ ಇದ್ದು, ಸ್ಪಂದಿಸುವ ನಿಟ್ಟಿನಲ್ಲಿ ಅವಕಾಶ ದೊರೆಯುತ್ತದೆ.
ಸುಮಾರು ಸಾವಿರ ಕುಟುಂಬಳಿಗಿಂತ ಹೆಚ್ಚು ವಿಮಾದಾರರಿಗೆ ಉತ್ತಮ ಆರೋಗ್ಯ ಸುಧಾರಣೆ ಆಗುವ ಸಾಧ್ಯತೆ ಇರುತ್ತದೆ. ಈ ಎಲ್ಲರ ಕುಟುಂಬದವರ ದೃಷ್ಟಿಯಿಂದ ಬೆಳಗ್ಗೆ 9.00 ರಿಂದ 4.00 ಗಂಟೆ ವರೆಗೆ ಸಮಯವನ್ನು ಬದಲಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ ಎಂದು ಕರವೇ ಆರ್ ಮಂಜು ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.



