ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ವತಿಯಿಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ 66 ನೆ ಹುಟ್ಟುಹಬ್ಬದ ಪ್ರಯುಕ್ತ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುಖಂಡರಾದ ದೀಪಕ್ ಪೂರ್ಯನಾಯ್ಕ್ ಅವರ ನೇತೃತ್ವದಲ್ಲಿ ರೋಗಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತ ಸತೀಶ್ ಹಾಗೂ ಗ್ರಾಮಾಂತರ ಅಧ್ಯಕ್ಷರಾದಂತಹ ಸತೀಶ್ ಕಸಟ್ಟಿ, ಕಾರ್ಯಧ್ಯಕ್ಷರಾದಂತ ಕಾಂತರಾಜ್ ಸೋಮನಕಪ್ಪ ಹಾಗೂ ಮಹಿಳಾ ಅಧ್ಯಕ್ಷರಾದಂತ ರೇಣುಕಾ, ರೈತ ವಿಭಾಗದ ಗ್ರಾಮಾಂತರ ಅಧ್ಯಕ್ಷರಾದಂತ ಯೋಗೇಶ್ ಹೊಳಲೂರು ಹಾಗೂ ವಿಶ್ವಕಚಿಕಟ್ಟೆ, ಅನು ನಾಯಕ್, ಸತೀಶ್ ಬಿಲ್ಲಿಂಗೆರೆ, ರಾಜಶೇಖರ್, ಮತ್ತು ದುರ್ಗಿಗುಡಿಯ ಮಹೇಶ ಇನ್ನಿತರರು ಉಪಸ್ಥಿತರಿದ್ದರು.



