ಶಿವಮೊಗ್ಗ, ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಅವರ 66ನೇ ಜನ್ಮದಿನದ ಅಂಗವಾಗಿ ಶಿವಮೊಗ್ಗ ನಗರ ಜೆಡಿಎಸ್ ಸಮಿತಿ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮತ್ತು ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ನಗರದ ಶ್ರೀ ಕೋಟೆ ಮಾರಿಕಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕರ್ತರು ಮತ್ತು ಮುಖಂಡರು ದೇವಿಗೆ ಪ್ರಾರ್ಥಿಸಿ, ತಮ್ಮ ನೆಚ್ಚಿನ ನಾಯಕ ಕುಮಾರಸ್ವಾಮಿ ಅವರ ಉತ್ತಮ ಆರೋಗ್ಯಕ್ಕಾಗಿ ಹಾರೈಕೆ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಬಳಿಕ ಶ್ರೀ ಶಾರದಾದೇವಿ ಅಂಧ ವಿಕಾಸ ಶಾಲೆಗೆ ಭೇಟಿ ನೀಡಿದ ಕಾರ್ಯಕರ್ತರು ಮಕ್ಕಳಿಗೆ ಉಚಿತ ಭೋಜನದ ವ್ಯವಸ್ಥೆ ಮಾಡಿದರು ಹಾಗೂ ಹಣ್ಣುಗಳು ಮತ್ತು ಹಂಪಲು ವಿತರಿಸಿದರು.
ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಕೆ.ಬಿ. ಪ್ರಸನ್ನಕುಮಾರ್ ಅವರು ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ತ್ಯಾಗರಾಜ್, ಸಂಗಯ್ಯ, ರಮೇಶ್ ನಾಯಕ್, ನಾಗೇಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಘು, ಮಹೇಶ್, ದಯಾನಂದ್ ಸಾಲಗಿ, ಲೋಹಿತ್, ನರಸಿಂಹ ಗಂಧದಮನೆ, ಉಮಾಶಂಕರ್ ಉಪಾಧ್ಯಾಯ, ಗೋಪಿ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ವಾಜೀದ್, ವೆಂಕಟೇಶ್, ದೀಕ್ಷಿತ್, ಹರೀಶ್, ಶಂಕರ್, ರಾಜಮ್ಮ, ರೇಣುಕಾ, ರಾಜಲಕ್ಷ್ಮೀ, ಸುನಿಲ್ ಗೌಡ, ಚಂದ್ರಶೇಖರ್, ಮನೋಹರ್, ಗೋವಿಂದ, ವಿನಯ್ ಸೇರಿದಂತೆ ಮತ್ತಿತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



