ಶಿವಮೊಗ್ಗ ನಗರದ ಮಿಳ್ಘಟ್ಟದ ಅಣ್ಣ ನಗರ 4ನೆ ತಿರುವುನಲ್ಲಿ ವಾಣಿಜ್ಯ ಮಳಿಗೆ ತಲೆಯೇತ್ತ್ತುತ್ತಿದೆ ಈ ವಾಣಿಜ್ಯ ಕಟ್ಟಡವು ಬೆಜ್ಜವಳ್ಳಿಯ ಖ್ಯಾತ ಸಂತೋಷ್ ಗುರೂಜಿ ಅವರದಾಗಿದ್ದು ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದಾಗಿ ಸ್ಥಳೀಯರ ಆರೋಪದ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿಯವರೆಗೆ ಯಾವದೇ ಕ್ರಮ ಜರುಗಿಸದೆ ನಿರ್ಲಕ್ಷ ತೋರಿಸುತ್ತಿರುವ ಕಾರಣ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಒಬಿಸಿ ಘಟಕ ಕಾರ್ಯದರ್ಶಿ ಮತ್ತು ಗ್ಯಾರಂಟಿ ಸಮಿತಿ ಸದಸ್ಯರಾದ ಅರ್ಚನ ನಿರಂಜನ್ ಅವರು ಈ ಕುರಿತು ನಾಳೆ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ಈ ಕುರಿತಂತೆ ತತ್ಕ್ಷಣ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಮೂಲಕ ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಕಾನೂನು ಉಲ್ಲಂಘನೆ ಮೂಲಕ ಕಟ್ಟಡ ನಿರ್ಮಿಸುತ್ತಿರುವವರ ಮೇಲೆ ಕ್ರಮ ಜರುಗಿಸಬೇಕೆಂದು ಆಯುಕ್ತರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ನಮ್ಮ ಇ-ಕನ್ನಡ ಮಾಧ್ಯಮ ಮುಖೇಣ ತಿಳಿಸಿರುತ್ತಾರೆ.



