ಮೈಸೂರು | 50 ಕೆಜಿ ತೂಕದ ಹೆಬ್ಬಾವು ರಕ್ಷಣೆ
ಈ ಕುರಿತು ವೀರನಹೊಸಹಳ್ಳಿ ಆರ್ಎಫ್ಒ ವಿನೋದ್ ಗೌಡ ಅವರು ತಿಳಿಸಿದ ಮಾಹಿತಿಯಂತೆ, ”ಇಲ್ಲಿಯವರೆಗೂ ಈ ಭಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹಾವನ್ನು ನಾವು ಕಂಡಿರಲಿಲ್ಲ. ಹನ್ನೆರಡುವರೆ ಅಡಿ ಉದ್ದ, 50 ಕೆ.ಜಿ. ತೂಕದ ಸುಮಾರು 8-10 ವರ್ಷ ಪ್ರಾಯದ ಈ ಹೆಣ್ಣು ಹೆಬ್ಬಾವು ಆರೋಗ್ಯಯುತವಾಗಿದೆ” ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಹೆಚ್. ಡಿ. ಕೋಟೆಯ ಗಿರಿಜನ ಆಶ್ರಮ ಶಾಲೆಯ ಬಳಿಯೇ ಹೆಬ್ಬಾವೊಂದು ಕಾಣಿಸಿಕೊಂಡಿತ್ತು.
Continue Reading

