ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತುಕತೆ ಯಶಸ್ವಿ ; ಹಾರ್ಮುಜ್ ಜಲಸಂಧಿ ಡಾಟಲು ಇರಾನ್ ಸಮ್ಮತಿ

ಮುಂಬೈ ತಲುಪಿದ ಹಡಗು: ಇಸ್ರೇಲ್-ಇರಾನ್ ಯುದ್ಧ ಆರಂಭವಾದ ನಂತರ, ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬೈ ಬಂದರು ತಲುಪಿದ ಮೊದಲ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ‘ಶೆನ್‌ಲಾಂಗ್ ಸೂಯೆಜ್‌ಮ್ಯಾಕ್ಸ್’ ಪಾತ್ರವಾಗಿದೆ. ಭಾರತಕ್ಕೆ ಬೇಕಾದ ಕಚ್ಚಾ ತೈಲ ಮತ್ತು ಅಡುಗೆ ಅನಿಲದ (LPG) ಸುಮಾರು ಅರ್ಧದಷ್ಟು ಪಾಲು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುವ ಮತ್ತು ಇಂಧನ ಅಭಾವ ಸೃಷ್ಟಿಯಾಗುವ ಭೀತಿಯಿತ್ತು.

Continue Reading