ಶಿವಮೊಗ್ಗದ ಸೇಲ್ಸ್‌ಮನ್‌ಗೆ 53 ಲಕ್ಷ ರೂ. ಸೈಬರ್ ವಂಚನೆ

ತೆರಿಗೆ ಹಾಗೂ ಪೆನಾಲ್ಟಿ ಹೆಸರಿನಲ್ಲಿ ಮತ್ತೆ ಹಣ ಹಾಕಿಸಿಕೊಂಡ ಆರೋಪಿಗಳು ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಇತ್ತ ಸೇಲ್ಸ್‌ಮನ್ ಹಣ ವಾಪಸ್ ಬರಬಹುದು ಎಂದು ಕಾಯುತ್ತಿದ್ದರೂ ಬಾರದಿದ್ದಾಗ ತಾನು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದಿದೆ. ಘಟನೆ ಸಂಬಂಧ ಸೆಲ್ಸ್‌ಮನ್ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Continue Reading

ಶಿವಮೊಗ್ಗದ ಕಾರ್ಖಾನೆಗೆ ಲಕ್ಷಗಟ್ಟಲೆ ಸೈಬರ್ ವಂಚನೆ

ಇದನ್ನು ನಂಬಿದ ಶಿವಮೊಗ್ಗದ ಕಾರ್ಖಾನೆ ಮ್ಯಾನೇಜರ್, ಜನವರಿ 28 ರಂದು ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.ನಂತರ ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗಳು ಪೂರೈಕೆದಾರ ಕಂಪನಿಯ ಇಮೇಲ್ ಐಡಿಯನ್ನು ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ವಂಚಕರು ನಕಲಿ ಬ್ಯಾಂಕ್ ವಿವರಗಳನ್ನು ನೀಡಿ ಕಾರ್ಖಾನೆಯ ಹಣ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ ; ವಂಚಕರಿಂದ ಜಾಗರೂಕರಾಗಿರಿ

ಒಂದು ವೇಳೆ ಇಂತಹ ನಕಲಿ ವಾಟ್ಸಾಪ್ ಸಂಖ್ಯೆಗಳಿಂದ ಹಣದ ಬೇಡಿಕೆ ಬಂದಲ್ಲಿ ಅಥವಾ ಯಾವುದಾದರೂ ಸಹಾಯ ಕೋರಿ ಸಂದೇಶಗಳು ಸ್ವೀಕೃತವಾದಲ್ಲಿ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಮತ್ತು ಕೂಡಲೇ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Continue Reading

ಶಿವಮೊಗ್ಗ | ಗಿಫ್ಟ್ ಆಸೆಗೆ 2.80 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

ಈ ಹಂತದಲ್ಲಿ ದೂರುದಾರರಿಗೆ ಅನುಮಾನ ಬಂದಿದ್ದು, ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಹಿಂದೆ ಶಿವಮೊಗ್ಗದ ಶ್ರೀರಾಮಪುರದ ಮಹಿಳೆಯೊಬ್ಬರಿಗೂ ಇದೇ ರೀತಿ ಗಿಫ್ಟ್ ಆಸೆ ತೋರಿಸಿ 2.35 ಲಕ್ಷ ರೂ. ವಂಚಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Continue Reading

ಶಿವಮೊಗ್ಗ | ವ್ಯಕ್ತಿಗೆ 4.90 ಲಕ್ಷ ರೂ. ಸೈಬರ್ ವಂಚನೆ

ಹಣ ಹೂಡಿಕೆ ಮಾಡಿದ ನಂತರ ಅದನ್ನು ಹಿಂಪಡೆಯಲು ಹೋದಾಗ ವಂಚಕರ ಅಸಲಿ ಬಣ್ಣ ಬಯಲಾಗಿದೆ. ಹಣವು ಸೆಬಿಯ ನಿಯಂತ್ರಣದಲ್ಲಿದೆ, ಟ್ಯಾಕ್ಸ್ ಪಾವತಿಸಿ, ಆರ್.ಡಿ ಅಕೌಂಟ್‌ನಲ್ಲಿದೆ ಅಥವಾ ಬ್ರೋಕರ್ ಚಾರ್ಜ್ ಪಾವತಿಸಿ ಎಂದು ಬೇರೆ ಬೇರೆ ನೆಪಗಳನ್ನು ಹೇಳಿ ಹಣ ನೀಡದೆ ಸತಾಯಿಸಿದ್ದಾರೆ. ಕೊನೆಗೆ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ಮತ್ತು ಪರಿಚಿತರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಸಂತ್ರಸ್ತರಿಗೆ ಅರಿವಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸೈಬರ್ ವಂಚನೆಯಲ್ಲಿ 8 ಕೋಟಿ ಕಳೆದುಕೊಂಡ ಮಾಜಿ ಐಪಿಎಸ್ ಅಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಯತ್ನ

ಹೆಚ್ಚಿನ ವಿವರಗಳು ಹೊರಬಂದಿದ್ದು ಸಂಪತ್ತು ನಿರ್ವಹಣಾ ಸಲಹೆಗಾರರಂತೆ ನಟಿಸಿ ಸೈಬರ್ ವಂಚಕರು 8.10 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಚಾಹಲ್ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅವರು ಪ್ರಮುಖ ಆರ್ಥಿಕ ವಂಚನೆಗೆ ಬಲಿಯಾಗಿದ್ದಾರೆ ಎಂದು ಸೂಚಿಸುವ ಪತ್ರವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.DBS ಬ್ಯಾಂಕ್ ಮತ್ತು ಅದರ CEO ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಷೇರು ವ್ಯಾಪಾರ, IPO ಹಂಚಿಕೆಗಳು, OTC ವಹಿವಾಟುಗಳು ಮತ್ತು ಪರಿಮಾಣಾತ್ಮಕ ನಿಧಿಗಳು ಎಂದು […]

Continue Reading

ಶಿವಮೊಗ್ಗ | ಮಹಿಳೆಗೆ 2.35 ಲಕ್ಷ ರೂ. ಸೈಬರ್ ವಂಚನೆ

ವಂಚಕರ ಮಾತನ್ನು ನಂಬಿದ ಮಹಿಳೆಯು, ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಕಳೆದ ಡಿಸೆಂಬರ್ 10 ರಿಂದ ಡಿಸೆಂಬರ್ 12 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 2,35,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರವೂ ಪಾರ್ಸಲ್ ಬಾರದೇ ಇದ್ದಾಗ ಮತ್ತು ಕರೆ ಮಾಡಿದವರು ಸಂಪರ್ಕಕ್ಕೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಗೊತ್ತಾಗಿದೆ. ತಮಗೆ ವಂಚಿಸಿದವರನ್ನು ಪತ್ತೆ ಹಚ್ಚಿ, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಬೇಕೆಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ […]

Continue Reading

ಶಿವಮೊಗ್ಗ | ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ; ₹82 ಸಾವಿರ ಸೈಬರ್ ವಂಚನೆಗೆ ತುತ್ತಾದ ವ್ಯಕ್ತಿ

ನವೆಂಬರ್ 30, 2025 ರಂದು ಮಧ್ಯಾಹ್ನ 12:30 ಕ್ಕೆ ಡೆಮೊ ತರಗತಿ ತೆಗೆದುಕೊಳ್ಳಲು ಪ್ರೊಸೆಸಿಂಗ್ ಫೀಜ್ ಪಾವತಿಸಬೇಕು ಎಂದು ವಂಚಕರು ತಿಳಿಸಿದ್ದು, ಅದಕ್ಕಾಗಿ ನೀಡಿದ QR ಕೋಡ್‌ಗೆ ದೂರುದಾರರು 5,000 ಹಣವನ್ನು ಹಾಕಿರುತ್ತಾರೆ. ತದನಂತರ, ಅಪರಿಚಿತ ಮೊಬೈಲ್ ನಂಬರ್‌ನಿಂದ ಅವರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ತರಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.ಆದರೆ, ತರಗತಿಗಳು ಇಷ್ಟವಾಗದ ಕಾರಣ ದೂರುದಾರರು ಕಂಪನಿಯ ಕಸ್ಟಮರ್ Gmail ಹಾಗೂ ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣವನ್ನು ವಾಪಸ್ಸು ನೀಡಬೇಕೆಂದು ಕೇಳಿದ್ದಾರೆ. ಆದರೆ ಅವರಿಗೆ […]

Continue Reading

ಶಿವಮೊಗ್ಗ | ಯುವತಿಗೆ 67 ಲಕ್ಷ ರೂ. ಸೈಬರ್ ವಂಚನೆ

ಇದನ್ನು ನಂಬಿದ ಯುವತಿ ಜೂನ್ 9 ರಿಂದ ನವೆಂಬರ್ 26ರ ನಡುವೆ ಒಟ್ಟು 559 ಹಂತಗಳಲ್ಲಿ 67,78,100 ರೂ. ಗಳನ್ನು ಕಂಪನಿಗೆ ವರ್ಗಾವಣೆ ಮಾಡಿದ್ದರು. ಹೂಡಿಕೆ ಮಾಡಿದ ಹಣ ವಾಪಸ್ ಬರದಿದ್ದಾಗ ಯುವತಿಗೆ ಅನುಮಾನ ಬಂದಿದೆ. ಆಕೆಯ ಐಡಿಯಲ್ಲಿ ಡೆಪಾಸಿಟ್ ಹಾಗೂ ವಿತ್ ಡ್ರಾ ಆಯ್ಕೆಗಳು ಸಹ ಬ್ಲಾಕ್ ಆಗಿದ್ದವು. ಈ ಬಗ್ಗೆ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading