ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವೂ ಇನ್ನು 5 ಭಾಗ : ಮಹಾನಗರಕ್ಕಿನ್ನು ಐವರು ಕಮಿಷನರ್, ಒಬ್ಬ ಮುಖ್ಯಸ್ಥ!
ಅಲ್ಲದೆ, ಹೊಸ ಸಂಚಾರ ಪೊಲೀಸ್ ಠಾಣೆಗಳ ಸ್ಥಾಪನೆಗೂ ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ. ಹೆಚ್ಚುತ್ತಿರುವ ನಗರದ ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಸುಗಮಗೊಳಿಸುವ ಸಲುವಾಗಿ ಐದು ಪೊಲೀಸ್ ಕಮಿಷನರೇಟ್ ವಿಭಜಿಸುವ ಪ್ರಸ್ತಾಪ ಮಂಡಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಶ್ರೇಣಿಯ ಅಧಿಕಾರಿಯು ಮುಖ್ಯ ಪೊಲೀಸ್ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜನೆಯಾಗಲಿದ್ದು, ಐವರು ಪೊಲೀಸ್ ಕಮಿಷನರ್‌ಗಳು ಅವರ ಅಧೀನದಲ್ಲಿರಲಿದ್ದಾರೆ. ಐಜಿಪಿ ಅಥವಾ ಡಿಐಜಿಪಿ ರಾರಯಂಕ್‌ನ ಅಧಿಕಾರಿಗಳು ಕಮಿಷನರ್‌ಗಳಾಗಲಿದ್ದು, ಅವರ ಅಧೀನದಲ್ಲಿಡಿಸಿಪಿ, ಸಂಚಾರ ಡಿಸಿಪಿಗಳಿರಲಿದ್ದಾರೆ. […]
Continue Reading






