ಸಾಗರ | ಯುದ್ಧ ನಿಂತು ಜಗತ್ತಿನಲ್ಲಿ ಶಾಂತಿ ನೆಲೆಸಲಿ : ಶಾಸಕ ಗೋಪಾಲಕೃಷ್ಣ ಬೇಳೂರು

ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಇತಿಹಾಸ ಪ್ರಸಿದ್ದವಾದ ಗಣಪತಿ ರಥೋತ್ಸವ ಯಶಸ್ವಿಯಾಗಿ ನಡೆದಿದೆ. ಜಾತ್ರೆ ಯಶಸ್ಸಿಗೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದಾರೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ಜಾತ್ರೋತ್ಸವಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು. ಪ್ರಪಂಚದಲ್ಲಿ ಯುದ್ದದ ವಾತಾವರಣ ಕವಿದಿದ್ದು, ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವಿನ ಯುದ್ದ ಜಾಗತಿಕ ಶಾಂತಿಗೆ ಧಕ್ಕೆಯುಂಟು ಮಾಡಿದೆ. […]

Continue Reading

ಸಾಗರ | ಬಸ್ ನಿಲ್ದಾಣ ನಿರ್ಮಿಸಿ ; ಎಬಿವಿಪಿ ಮನವಿ

ಈ ಹಿಂದೆ ಕಾಲೇಜಿನ ಎದುರು ಸುಸಜ್ಜಿತ ಬಸ್ ನಿಲ್ದಾಣವಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಬಸ್ ನಿಲ್ದಾಣವನ್ನು ಕೆಡವಲಾಗಿದೆ. ಇದರಿಂದ ವಿದ್ಯಾರ್ಥಿಗಳು ಬಿಸಿಲು ಮತ್ತು ಮಳೆಗಾಲದಲ್ಲಿ ಬಸ್‌ಗಾಗಿ ಕಾಯಲು ಸೂಕ್ತ ವ್ಯವಸ್ಥೆ ಇಲ್ಲ. ತಕ್ಷಣ ಎಲ್.ಬಿ.ಕಾಲೇಜಿನ ಎದುರು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಎಬಿವಿಪಿ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಮೋಹನ್ ಎಚ್.ಜಿ., ಸುಜಿತ್ ಡಿ., ಪ್ರಜ್ವಲ್, ನಿತಿನ್ ಕುಮಾರ್ ಇನ್ನಿತರರು ಹಾಜರಿದ್ದರು.

Continue Reading

ಕಾಗೋಡು ತಿಮ್ಮಪ್ಪ ಅವರಿಂದ ಜನ್ಮದಿನದ ಆಶೀರ್ವಾದ ಪಡೆದ ಮಧು ಬಂಗಾರಪ್ಪ

ಈಗಾಗಲೆ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ. ಶರಾವತಿ, ಚಕ್ರ, ವರಾಹಿ ಎಲ್ಲರಿಗೂ ನ್ಯಾಯ ಸಿಗುತ್ತದೆ. ಈಗ ಭಾಷಣ ಹೊಡೆಯುವವರು ಹಿಂದೆ ಅಧಿಕಾರದಲ್ಲಿದ್ದಾಗ ಪರಿಭಾವಿತ ಅರಣ್ಯ ಕಾಯ್ದೆ ಜಾರಿಗೆ ತಂದಿದ್ದರು. ಡೀಮ್ಡ್ ಫಾರೆಸ್ಟ್ ಕಾಯ್ದೆ ತಿದ್ದುಪಡಿಗೆ ಸಹ ಅವಕಾಶ ಸಿಕ್ಕಿದೆ. ನ್ಯಾಯಾಲಯ ಆದೇಶ ಹೊರತುಪಡಿಸಿ ಇತರೆ ಸಂದರ್ಭದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು. ಈ ಸಂದರ್ಭದಲ್ಲಿ ದೀಪಾ ಕಾಗೋಡು, ಅನಿತಾ […]

Continue Reading

ಶಿವಮೊಗ್ಗ | ಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ; ರೈತರಿಗೆ ಸಚಿವ ಮಧು ಬಂಗಾರಪ್ಪ ಅಭಯ

ಈ ಕುರಿತು ಸಂಬಂಧಪಟ್ಟ ಸಮಿತಿಗಳು ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ. ಸಂಬಂಧಪಟ್ಟ ಸಮಿತಿಗಳ ಮೂಲಕ ಈ ಅರ್ಜಿಗಳ ಮರುಪರಿಶೀಲನೆ ಮತ್ತು ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ಸರ್ಕಾರವು ರೈತರ ಮತ್ತು ಸಂತ್ರಸ್ತರ ಹಿತ ಕಾಯಲು ಸಂಪೂರ್ಣವಾಗಿ ಬದ್ಧವಾಗಿದ್ದು, ಯಡಮನೆ ಗ್ರಾಮದ ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

Continue Reading

ಶಿವಮೊಗ್ಗ | ಹೊಂಕೇರಿ ಗ್ರಾಮದಲ್ಲಿ ಹಾಡುಹಗಲೇ ಕಳ್ಳತನ ; ಗ್ರಾಮಸ್ಥರಿಂದ ಕಳ್ಳನ ಸೆರೆ

ಹೊಂಕೇರಿ ಗ್ರಾಮದ ರೈತರೊಬ್ಬರು ತಾವು ಬೆಳೆದ ಬೆಲ್ಲವನ್ನು ಮಾರಾಟ ಮಾಡಿ ಬಂದ 50,000/- ರೂಪಾಯಿ ನಗದು ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಇದಲ್ಲದೆ, ಮನೆಯಲ್ಲಿ ಚಿನ್ನಾಭರಣಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳೂ ಇದ್ದವು. ಹಾಡುಹಗಲೇ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಕಳ್ಳರು ಬಳಸಿಕೊಂಡಿದ್ದಾರೆ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ಒಡೆದು ನಗದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಗ್ರಾಮಸ್ಥರ ಸಮಯಪ್ರಜ್ಞೆ: ಕಳ್ಳತನ ನಡೆಯುತ್ತಿದ್ದಾಗ, ಮನೆಯ ಸುತ್ತಮುತ್ತಲಿನ ಗ್ರಾಮಸ್ಥರು ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದಾರೆ. […]

Continue Reading

ಸಾಗರ | KSRTC ಬಸ್ ಬಂದ ಖುಷಿಯಲ್ಲಿ ಗ್ರಾಮಸ್ಥರು ; ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಅಭಿನಂದನೆ ಸಲಿಕೆ

ತಮ್ಮೂರಿಗೆ ಬಸ್ ಬಂದ ಖುಷಿಯಲ್ಲಿ ಕೋಟೆಕೊಪ್ಪ ಸೇರಿದಂತೆ ಆ ಭಾಗದ ಎಲ್ಲಾ ಗ್ರಾಮಸ್ಥರು ಸಾಗರ ಶಾಸಕರು ಮತ್ತು ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಮಾರಿಕಾಂಬೆ ದರ್ಶನ ಪಡೆದ ನಟ ಶಿವಣ್ಣ ದಂಪತಿ

ಸುಮಾರು 1೦ಗಂಟೆ ನಿಂತು ಅಮ್ಮನವರ ದರ್ಶನಕ್ಕೆ ನೂಕುನುಗ್ಗಲು ಮಾಡಿಕೊಳ್ಳದಂತೆ ವ್ಯವಸ್ಥೆ ಮಾಡಿದ್ದೇನೆ. ಅದೇ ರೀತಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಗೀತಾ ಶಿವರಾಜ ಕುಮಾರ್, ಹುಲಿ ಕಾರ್ತಿಕ್, ಭರತ್ ಸಾಗರ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್‌ಪಿ ಡಾ. ಬೆನಕ ಪ್ರಸಾದ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ […]

Continue Reading

ಶಿವಮೊಗ್ಗ | ಅಕ್ರಮ ಮರಳು ಸಾಗಣೆ ದೂರು ನೀಡಿದ ಯುವ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

ಇದಕ್ಕಿಂತಲೂ ಹೆಚ್ಚು ಆತಂಕಕಾರಿ ಬೆಳವಣಿಗೆಯಾಗಿ, ಆರೋಪಿಗಳು ಶರತ್ ಅವರನ್ನು ಬಲವಂತವಾಗಿ ತಮ್ಮ ಸ್ಕಾರ್ಪಿಯೋ ಕಾರಿಗೆ ಹತ್ತಿಸಿಕೊಂಡು ಅಪಹರಣ ಯತ್ನ ನಡೆಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಪೊಲೀಸ್ ಠಾಣೆಗೆ ದೂರು ನೀಡಿದರೆ ಎಸ್‌ಸಿ/ಎಸ್‌ಟಿ ಹುಡುಗರಿಂದ ಸುಳ್ಳು ಪ್ರಕರಣ ದಾಖಲಿಸಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ದರ್ಶನ್, ಪ್ರವೀಣ್ , ಶಿವರಾಮ, ದಿವಾಕರ ಸೇರಿದಂತೆ ಇನ್ನಿತರ ನಾಲ್ವರು ಆರೋಪಿಗಳಾಗಿದ್ದಾರೆ.ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್.ಪಿ. ಅವರು […]

Continue Reading