ಪರೀಕ್ಷಾ ಮೌಲ್ಯಮಾಪನವನ್ನು ಬಹಿಷ್ಕರಿಸುವಂತಹ ‘ಬ್ಲಾಕ್ ಮೇಲ್’ ತಂತ್ರಗಳನ್ನು ಸರ್ಕಾರ ಒಪ್ಪುವುದಿಲ್ಲ ; ಶಿಕ್ಷಣ ಸಚಿವರ ಸ್ಪಷ್ಟನೆ

ನಮಗೆ ನಮ್ಮ ರಾಜ್ಯದ ಲಕ್ಷಾಂತರ ಮಕ್ಕಳ ಹಿತದೃಷ್ಟಿ ಮತ್ತು ಅವರ ಭವಿಷ್ಯವೇ ಸರ್ವೋಚ್ಚ. ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ವಿನಂತಿಸುತ್ತೇನೆ ಎಂದರು.

Continue Reading

ಶಿವಮೊಗ್ಗ | ವಿಶ್ವ ಹಿಂದೂ ಪರಿಷದ್ ನಿಂದ ಮಾದಕ ವಸ್ತು ಮತ್ತು ವ್ಯಸನಿಗಳ ವಿರುದ್ದ ಸಮರ

ವಿಶೇಷವಾಗಿ ಹೆಣ್ಣುಮಕ್ಕಳ ಜೊತೆ ಅಶ್ಲೀಲವಾಗಿ ವರ್ತಿಸಿ ಭಯ ಹುಟ್ಟಿಸುವ ನೀಚ ಕೃತ್ಯಗಳು ಹೆಚ್ಚುತ್ತಿವೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಸೂಳೆಬೈಲ್‌ನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಪೊಲೀಸರು ಇದನ್ನು ಕೇವಲ ಕ್ರಿಕೆಟ್ ವಿಚಾರದ ಗಲಾಟೆ ಎಂದು ಬಿಂಬಿಸುತ್ತಿರುವುದು ತಪ್ಪು ಮಾಹಿತಿಯಾಗಿದೆ. ಇದು ಹಿಂದೂ ಬಾಲಕನನ್ನು ಗುರಿಯಾಗಿಸಿಕೊಂಡು ನಡೆದ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಸಾಗರ ತಾಲೂಕಿನಲ್ಲಿಯೂ […]

Continue Reading

ಸಾಗರ | ಮಾ. 2 ರಂದು ; ಸಿಗಂದೂರು ಸೇತುವೆಯ ಮೇಲೆ ರೈತರಿಂದ ಬೃಹತ್ ರಸ್ತೆ ತಡೆ ಚಳವಳಿ : ತೀ. ನ. ಶ್ರೀನಿವಾಸ್ ಎಚ್ಚರಿಕೆ

ಚುನಾವಣೆಗೂ ಮುನ್ನ ಮಧು ಬಂಗಾರಪ್ಪ ಅವರು ಪಾದಯಾತ್ರೆ ನಡೆಸಿದ್ದರು ಮತ್ತು ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ಗ್ವಾಲಿಯಲ್ಲಿ ನಡೆದ ಸಮಾವೇಶದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಇಂದು ಆ ಭರವಸೆಗಳು ಕೇವಲ ಘೋಷಣೆಯಾಗಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ ಸುಮ್ಮನಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಜಂಟಿಯಾಗಿ ಕುಳಿತು ಸಮಸ್ಯೆ ಬಗೆಹರಿಸುವಂತೆ ಸೂಚಿಸಿ […]

Continue Reading

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಆಧಾರ್ ಬದಲು ಬರಲಿದೆ ಸ್ಮಾರ್ಟ್ ಕಾರ್ಡ್

ಉಚಿತ ಮತ್ತು ಶುಲ್ಕ ಪಾವತಿಸುವ ಪ್ರಯಾಣಿಕರಿಗಾಗಿ ಏಕೀಕೃತ, ಸಂಪರ್ಕರಹಿತ ಮತ್ತು ಪರಸ್ಪರ ಕಾರ್ಯ ನಿರ್ವಹಿಸಬಹುದಾದ ಶುಲ್ಕ ಸಂಗ್ರಹಣ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಜ್ಯ ಸಾರಿಗೆ ಸಂಸ್ಥೆಗಳಾದ ಕ.ರಾ.ರ.ಸಾ. ನಿಗಮ, ಬೆಂ.ಮ.ಸಾ. ಸಂಸ್ಥೆ, ವಾ.ಕ.ಸಾ. ಸಂಸ್ಥೆ ಮತ್ತು ಕ.ಕ.ರ.ಸಾ. ನಿಗಮಗಳಲ್ಲಿ ಶಕ್ತಿ ಸ್ಮಾರ್ಟ್​​​ ಕಾರ್ಡ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್.ಸಿ.ಎಂ.ಸಿ) ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕಾಗಿ ವಿಶೇಷ ಉದ್ದೇಶದ ವಾಹನ (ಎಸ್.ಪಿ.ವಿ) ರಚನೆಗೆ ಅನುಮೋದಿಸಲಾಗಿದೆ.ಶಕ್ತಿ ಸ್ಮಾರ್ಟ್‌ ಕಾರ್ಡ್ ವ್ಯವಸ್ಥೆಯ ಮೌಲ್ಯಮಾಪನ, ಜಾರಿಗೊಳಿಸುವಿಕೆ ಹಾಗೂ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ, […]

Continue Reading

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಕ್ಕೆ ಸಿಕ್ತು ಸರ್ಕಾರದ ಗ್ರೀನ್​ ಸಿಗ್ನಲ್​

ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಜಿಬಿಎ ಆಯುಕ್ತ ಮಹೇಶ್ವರ್ ರಾವ್, ಗೃಹ ಇಲಾಖೆ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಆರ್‌ಸಿಬಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪಂದ್ಯ ನಡೆಸಲು ಸಹಮತ […]

Continue Reading

ಶಿವಮೊಗ್ಗ | ಸಿಇಎನ್ ಡಿಎಸ್ಪಿ ಸಹಿತ ಹಲವು ಸಿಪಿಐ ಗಳ ವರ್ಗಾವಣೆ

ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿದ್ದೇಗೌಡ ಹೆಚ್.ಎಂ.ರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ. ಸತ್ಯನಾರಾಯಣ ವೈ. ದೊಡ್ಡಪೇಟೆಗೆ ನೂತನ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಕರ್ನಾಟಕ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಯನಗರ ಪೊಲೀಸ್ ಠಾಣೆಗೆ ರವಿ ಸಂಗನಗೌಡ ಪಾಟೀಲ್ ಅವರು ವರ್ಗಾವಣೆಯಾಗಿ ಬಂದಿದ್ದಾರೆ. ಈ ಮೊದಲು ಇವರು ದೊಡ್ಡ ಪೇಟೆ ವೃತ್ತದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು. ಮಹಿಳಾ ಪೊಲೀಸ್ ಠಾಣೆಗೆ ಸುರೇಶ್​ ಇನ್ಸ್‌ಪೆಕ್ಟರ್ ಆಗಿ ಆಗಮಿಸಿದ್ದಾರೆ. ಇವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದಲ್ಲಿ (SIT) […]

Continue Reading

ಶಿವಮೊಗ್ಗ | ಶಾಲಾ ಜಮೀನುಗಳನ್ನ ಸರ್ಕಾರದ ವಶಕ್ಕೆ ಪಡೆಯಲು ಮುಂದಾಗಿರುವುದು ಅವೈಜ್ಞಾನಿಕ ಕ್ರಮ : ಕಲ್ಲೂರು ಮೇಘರಾಜ್

ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ನವರು ಉಳುವವನೇ ಹೊಲದೊಡೆಯ ಎಂಬ ಸಮಾಜವಾದಿ ಸಿದ್ಧಾಂತದಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದಲ್ಲಿ ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಅವರ ಪುತ್ರ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದಂತಹ ಮಧುಬಂಗಾರಪ್ಪ ನವರು ಕಳೆದ 6-7 ದಶಕಗಳಿಂದ ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನು ಗೇಣಿದಾರರನ್ನ ಒಕ್ಕಲೆವರಿ, ಶಾಲಾ ಜಮೀನುಗಳನ್ನು ರೈತರಿಂದ ಸರ್ಕಾರ ವಶಪಡಿಸಿಕೊಳ್ಳಲು ವಿಶೇಷ ಮಸೂದೆಯೊಂದನ್ನ ತರಲು ಮುಂದಾಗಿರುವುದು ವಿಪಾರ್ಯಾಸ ಸಂಗತಿ ಎಂದು ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು […]

Continue Reading

ಬೆಳಗಾವಿ | ನಾಳೆಯಿಂದ ಅಧಿವೇಶನ ; 12 ಸಾವಿರ ಪೊಲೀಸರಿಂದ ಬಂದೋಬಸ್ತ್

ಈ ಬಾರಿ ರೈತರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಮೀಸಲಾತಿಗಾಗಿ ಸಮುದಾಯಗಳು ಬೃಹತ್ ಪ್ರತಿಭಟನೆಗೆ ನಡೆಸಲು ಮುಂದಾಗಿದ್ದು ಹೀಗಾಗಿ ಹೆಚ್ಚಿನ ಅಲರ್ಟ್ ಮಾಡಿಕೊಳ್ಳಲಾಗಿದೆ. ದ್ವೇಷ ಭಾಷಣದ ವಿರುದ್ಧ ವಿಧೇಯಕ ಮಂಡನೆಗೆ ಸರ್ಕಾರದ ಸಿದ್ಧತೆಕರ್ನಾಟಕ ದ್ವೇಷ ಭಾಷಣ & ದ್ವೇಷ ಅಪರಾಧ ವಿಧೇಯಕ-2025 ಅನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ನಂತರ ಸಂಪುಟ ಅನುಮೋದನೆ ಪಡೆದು, ಬೆಳಗಾವಿ ಅಧಿವೇಶನದಲ್ಲಿ […]

Continue Reading