ಶಿವಮೊಗ್ಗ | ದುರ್ಗಿಗುಡಿಯಲ್ಲಿ ಸಂಚಾರಿ ಪೊಲೀಸರಿಂದ ಸುಗಮ ಸಂಚಾರಕ್ಕೆ ಕ್ರಮ

ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ತಳ್ಳುವ ಗಾಡಿಗಳಿಗೆ ಶಾಶ್ವತವಾಗಿ ನಿಲ್ಲಲು ಅವಕಾಶವಿಲ್ಲ ಎಂದು ಟ್ರಾಫಿಕ್ ನಿರೀಕ್ಷಕರು ತಿಳಿಸಿದ್ದಾರೆ. ಅಲ್ಲದೆ ಆಟೋ ಚಾಲಕರು ಕೂಡ ಮನಬಂದಂತೆ ಆಟೋಗಳನ್ನು ನಿಲ್ಲಿಸುತ್ತಿದ್ದು ಅವರು ನಿಗದಿತ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ವ್ಯಾಪಾರಸ್ಥರು ಕೂಡ ಅದನ್ನು ಪಾಲಿಸಬೇಕು. ಅಲ್ಲದೆ ಕನ್ಸರ್ವನ್ಸಿಗಳನ್ನು ತಮ್ಮ ದ್ವಿಚಕ್ರ ವಾಹನಗಳು ನಿಲುಗಡೆಗೆ ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಟ್ರಾಫಿಕ್ ಪೊಲೀಸ್ ಇಲಾಖೆಯ ಇಬ್ಬಗೆಯ ನೀತಿ : KSRTC ಅವರಿಗೆ ಒಂದು ನ್ಯಾಯ ; ವಾಹನ ಸವಾರರಿಗೆ ಒಂದು ನ್ಯಾಯ

ಇನ್ನು ಮುಂದುವರೆದು ಶಿವಮೊಗ್ಗ ಭದ್ರಾವತಿ ಮಾರ್ಗ ಮಾಚೇನಹಳ್ಳಿಯಲ್ಲಿ ಕಾಮಗಾರಿ ಆಗುತ್ತಿರುವ ಕಾರಣ ಭೂ ಕುಸಿತ ಉಂಟಾದ ಕಾರಣ ಜಿಲ್ಲಾಧಿಕಾರಿ ಅವರು ಈ ಸ್ಥಳದಲ್ಲಿ ಭಾರಿ ವಾಹನ ನಿಶಿದ್ದ ಎಂದು ಆದೇಶ ಮಾಡಿದ್ದಾರೆ. ಹಾಗೂ ನಗರದ ಎಂ ಆರ್ ಎಸ್ ಬಳಿ ಪೊಲೀಸ್ ಬ್ಯಾರಿಕೆಡ್ ಸಹ ಅಳವಡಿಸಿದ್ದಾರೆ ಪೊಲೀಸ್ ಇಲಾಖೆ ಆದರೂ ಸಹ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದರೆ. KSRTC ಅವರಿಂದ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತ ಅದೇ ರಸ್ತೆಯಲ್ಲಿ ಸಂಚಾರ ಮಾಡುವುದು ಮುಂದುವರೆದಿದೆ. ಶಿವಮೊಗ್ಗ ನಗರದಲ್ಲಿ KSRTC […]

Continue Reading

ಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು

ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ. ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.

Continue Reading

ಶಿವಮೊಗ್ಗ | ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ; ನಾವು ನಗರದಲ್ಲೇ ಸಂಚರಿಸುತ್ತೇವೆ KSRTC Bus

ಆದರೆ ಶಿವಮೊಗ್ಗದಿಂದ ಚಿತ್ರದುರ್ಗ ಹಾಗೂ ಹರಿಹರ, ಹೊಸಪೇಟೆ ಅಥವಾ ದಾವಣಗೆರೆ ಹೋಗುವ KSRTC ಬಸ್ ನವರು ಮಾತ್ರ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ನಯಾ ಪೈಸೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ದಿನ ನಿತ್ಯ ನಗರೊದೊಳಗೆ ಬರುವ KSRTC ಬಸ್ ಗಳನ್ನು ಪುನಃ ನಗರದೊಳಗೆ ಬರಬೇಡಿ ಎಂದು ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ಕೆಲಸ ಜೊತೆಗೆ ಮತ್ತೊಂದು ಈ ಕೆಲಸವಾಗಿದೆ. ಬಿಸಿಲೋ ಮಳೆಯೋ ಚಳಿಯೋ ಟ್ರಾಫಿಕ್ ಪೊಲೀಸರು ನಗರದೊಳಗೆ ಕೆಲಸ ಮಾಡುತ್ತಾರೆ. […]

Continue Reading