ಶಿವಮೊಗ್ಗ | ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ

ಜನವರಿ 1೦ರ ರಾತ್ರಿ 9ಕ್ಕೆ ಭವ್ಯ ಶಿಬಿರಾಗ್ನಿ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪ ಗೌಡ ನಡೆಸಿಕೊಡುವರು. ಜನವರಿ ೧೧ರ ಬೆಳಗ್ಗೆ ೯.೩೦ಕ್ಕೆ ಕೌಶಲ್ಯ ದರ್ಶನ ಕಾರ್ಯಕ್ರಮವನ್ನು ಎಂಎಲ್‌ಸಿ ಡಾ|| ಧನಂಜಯ ಸರ್ಜಿ ಉದ್ಘಾಟಿಸುವರು. ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮತ್ತು ತಹಸೀಲ್ದಾರ್ ಎಸ್.ವಿ.ರಾಜೀವ್ ಪಾಲ್ಗೊಳ್ಳುವರು.ಜನವರಿ 11ರಂದು ಮಧ್ಯಾಹ್ನ 2.3೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಅಧ್ಯಕ್ಷತೆ ವಹಿಸುವರು. ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತ್ […]

Continue Reading

ಶಿವಮೊಗ್ಗ | ಖಾಸಗಿ ಸಿಟಿ ಬಸ್ ಗಳಲ್ಲಿ, ಪೊಲೀಸ್ ಸಹಾಯವಾಣಿ ಅಳವಡಿಸುವಂತೆ ; ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ಮನವಿ ಸಲ್ಲಿಸಿದ ಅರ್ಚನ ನಿರಂಜನ್

ಈ ಸಂಬಂಧ ಶಿವಮೊಗ್ಗ ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್ ಟಿ.ವಿ. ಗಮನಕ್ಕೆ ಮಾಹಿತಿ ತಿಳಿಯಬಯಸುವುದು ಏನೆಂದರೆ, ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರತಿನಿತ್ಯ ಬಸ್‌ಗಳಲ್ಲಿ ಕೆಟ್ಟ ಕೆಟ್ಟ ಅಸಭ್ಯ ಹಾಡುಗಳನ್ನು ಹಾಕುವುದು. ಮಹಿಳಾ ಪ್ರಯಾಣಿಕರೊಂದಿಗೆ ಕೆಲವು ಚಾಲಕ ಹಾಗೂ ನಿರ್ವಾಹಕರು ಅಸಭ್ಯ ವರ್ತಿಸುವುದು, ಮೊಬೈಲ್ ನಂಬರ್ ಕೊಡುವಂತೆ ಪೀಡಿಸುವುದು ಹಾಗೂ ಚಿಲ್ಲರೆ ನೀಡದೆ ಸತಾಯಿಸುವುದು ಹಾಗೂ ಬಸ್ ರಶ್ ಇದ್ದ ವೇಳೆಯಲ್ಲಿ ಮಹಿಳಾ ಪ್ರಯಾಣಿಕರನ್ನು ಅಸಭ್ಯವಾಗಿ ಮುಟ್ಟುವುದು ಈ ರೀತಿಯ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುವುದಾಗಿ ದೂರು […]

Continue Reading

ಶಿವಮೊಗ್ಗ | ಭೀಕರ ರಸ್ತೆ ಅಪಘಾತ ; ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವು

ನಯಾಜ್ ತೀರ್ಥಹಳ್ಳಿಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಬಸ್‌ಗೆ ಪಾರ್ಸಲ್ ಹಾಕಲು ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

ಶಿವಮೊಗ್ಗ | ಜ.12ಕ್ಕೆ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ಬಿಡುಗಡೆ : ಎನ್.ಮಾಲತೇಶ್

ಮುಖ್ಯ ಅತಿಥಿಗಳಾಗಿ ಕರವೇ ಜನಮನ ರಾಜ್ಯ ಸಂಘಟನೆ ರಾಜ್ಯ ಅಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಹಾಗೂ ಪದಾಧಿಕಾರಿಗಳು ಮಧುರ ಪ್ಯಾರಡೈಸ್ ಗೋಪಿನಾಥ್, ಆ.ನಾ.ವಿಜೇಂದ್ರ, ಕಾಂಗ್ರೆಸ್ ಮುಖಂಡ ಕೆ,.ದೇವೇಂದ್ರಪ್ಪ ಇನ್ನು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷರು ಶಿಕಾರಿಪುರ ಹುಲಿಗಿ ಕೃಷ್ಣ, ಉಪಾಧ್ಯಕ್ಷರು ರಾಮು ಜಿ, ತೀರ್ಥಹಳ್ಳಿ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರು ವಿನಯ್ ಕುಮಾರ್ ಎಸ್. ವಾಲಿ ತೊಗರ್ಸಿ, ಸಂಘಟನಾ ಕಾರ್ಯದರ್ಶಿ […]

Continue Reading

ಹುಬ್ಬಳ್ಳಿ ಘಟನೆ ; ಬಿಜೆಪಿ‌ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗೆ ಮನವಿ

ಹುಬ್ಬಳ್ಳಿಯ ಈ ಘಟನೆಯ ಬಗ್ಗೆ ತಟಸ್ಥ ಮತ್ತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದೆ. ಆದರೆ, ಈ ಸುಮೋಟೋ ಪ್ರಕರಣವು ಕೇವಲ ವಿಡಿಯೋ ಮಾಡಿದವರ ವಿರುದ್ಧ ಮಾತ್ರ ಸೀಮಿತವಾಗಬಾರದು. ಘಟನೆಗೆ ಪ್ರಚೋದನೆ ನೀಡಿದವರು ಮತ್ತು ಮಹಿಳೆಯ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧವೂ ಇಲಾಖೆಯು ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಕಾರ್ಪೊರೇಟರ್ ಅವರ ಒತ್ತಡಕ್ಕೆ ಮಣಿದು ಪೊಲೀಸರು […]

Continue Reading

ಶಿವಮೊಗ್ಗ | ಹೆಡ್ ಕಾನ್ಸ್ಟೆಬಲ್ ನಾಸಿರ್, ಸಹ ಸಿಬ್ಬಂದಿ ಕಿಂಡಲ್ ಮಾಡಿದ್ದಕ್ಕೆ, ಆತ್ಮಹತ್ಯೆ ಮಾಡಿಕೊಂಡರ?

ಹೆಡ್ ಕಾನ್ಸ್ ಟೇಬಲ್ ಅವರು ಒಂದು ತಿಂಗಳು ರಜೆ ಯಲ್ಲಿದ್ದು ಎರಡು ದಿನದ ಹಿಂದೆ ಡ್ಯೂಟಿಗೆ ಬಂದಿದ್ದ ಮಹಮ್ಮದ್ ಜಕ್ರೀಯಾ ಅವರು ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ಕಿಂಡಲ್ ಮಾಡುತ್ತಿದ್ದ ಎಂದು ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

ಶಿವಮೊಗ್ಗ | ‘ಮಹಿಳೆಯರು, ಹೆಣ್ಣುಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆ’

ಎಸ್ಪಿ. ಬಿ ನಿಖಿಲ್ ಮಾತನಾಡಿ, ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯ ಎಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ. ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು, ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ […]

Continue Reading

ಶಿವಮೊಗ್ಗ | ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮೂಲತಃ ತುಮಕೂರಿನ ಮಧುಗಿರಿಯವನಾದ ಸಂದೀಪ್ ರಾಜ್ ಎಂಬಿಬಿಎಸ್ ಮುಗಿಸಿ ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯಾಗಿದೆ. ಈ ಸಂಬಂಧ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Continue Reading