ಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು

ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ. ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.

Continue Reading

ಶಿವಮೊಗ್ಗ | ಕೆ ಎಸ್ ಆರ್ ಟಿ ಸಿ ಯಿಂದ, ಪದೇ ಪದೇ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ : ಕ್ರಮಕ್ಕೆ ಮುಂದಾಗುತ್ತಾರ ಎಸ್ಪಿ ಮಿಥುನ್ ಕುಮಾರ್

ನಗರದಲ್ಲಿ ಜನಸಾಮಾನ್ಯರು ವ್ಯಾಪಾರ ವಹಿವಾಟು ನಡೆಸುವರಿಗೂ ವಾಹನ ಸವಾರರಿಗೂ ಎಲ್ಲರಿಗೂ ಅನುಕೂಲ ಮಾಡುವಲ್ಲಿ ಪ್ರತಿನಿತ್ಯ ಶ್ರಮ ವಹಿಸುತ್ತಿದ್ದಾರೆ. ಹಾಗೆಯೇ ಪಶ್ಚಿಮ ಸಂಚಾರಿ ಠಾಣೆಯ ಪಿ ಎಸ್ ಐ ಸ್ವಪ್ನ ಅವರು ಸಹ ನಗರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲಾಧಿಕಾರಿ ಆದೇಶವಿದ್ದರೂ ನಗರದಲ್ಲಿ ಸಂಚಾರ ಮಾಡುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ತಡೆದು ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಿ ನಗರದೊಳಗೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಬೇಡಿ ಇಲ್ಲವಾದರೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ […]

Continue Reading

ಬೆಜ್ಜವಳ್ಳಿ ಸಂತೋಷ್ ಗುರೂಜಿ ಅವರೇ, ನಿಮ್ಮದು ಎನ್ನಲಾಗುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಪ್ರತ್ಯೇಕ ಕಾನೂನು ಇದೆಯೇ?

ಇದಲ್ಲದೆ ಈ ಕಟ್ಟಡ ಕಾಮಗಾರಿ ಮಾಡುತ್ತಿರುವ ಮೇಸ್ತ್ರಿಯು ರಸ್ತೆಯನ್ನ, ಚರಂಡಿಯನ್ನ ಮುಚ್ಚುವಂತೆ ರಸ್ತೆ ಅಕ್ಕ ಪಕ್ಕ ಜಾಗದಲ್ಲೆಲ್ಲಾ ಮರಳು ಜೆಲ್ಲಿ ಇತ್ಯಾದಿ ಸುರಿದಿದ್ದಾರೆ, ಹಾಗೂ ಸಿಮೆಂಟ್ ಬ್ರಿಕ್ಸ್ ಗಳನ್ನು ಮುಖ್ಯ ರಸ್ತೆಯಲ್ಲಿ ಇಟ್ಟಿದ್ದಾರೆ, ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯರಿಗೆ ಇದರಿಂದ ಓಡಾಡಲು, ತೀವ್ರ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ಕುರಿತಾಗಿ ಹಲವಾರು ಬಾರಿ ಮೇಸ್ತ್ರಿ ಹಾಗೂ ಬೆಜ್ಜವಳ್ಳಿಯ ಸಂತೋಷ್ ಗುರೂಜಿ ಕಾಮಗಾರಿ ವೀಕ್ಷಿಸಲು ಬಂದಾಗ ಸ್ಥಳೀಯರು ತಿಳಿಸಿದರು ಸಹ ಯಾವದನ್ನು ಸರಿಪಡಿಸಿಕೊಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. […]

Continue Reading

ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ಆಡಿಷನ್ ಶಿವಮೊಗ್ಗದಲ್ಲಿ

ಶಿವಮೊಗ್ಗದ ಆಡಿಷ ನ್‌ನಲ್ಲಿ ಆಯ್ಕೆಯಾದ ಮಕ್ಕಳಿಗೆ ಮುಂದಿನ ಹಂತ ಗಳ ಆಡಿಷನ್ಸ್ ಮತ್ತು ಅಂತಿಮ ಆಯ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ಆಡಿಷನ್ ಸ್ಥಳದಲ್ಲಿ ನೀಡಲಾಗುವುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ ಮತ್ತು (ಮಕ್ಕಳ ಮತ್ತು ಪೋಷಕರ) ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ ಸಹಿತ ಆಡಿಷನ್‌ಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಶಿವಮೊಗ್ಗ | ಫೆ. 3ರಿಂದ ಸಾಗರ ಮಾರಿಕಾಂಬಾ ದೇವಿ ಜಾತ್ರೆ

ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್ ಮಾತನಾಡಿ, ಈಗಾಗಲೆ ಶಾಸಕರ ನೇತೃತ್ವದಲ್ಲಿ ಜಾತ್ರೆ ಸಂಬಂಧ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಬಣ್ಣ ಹೊಡೆಯುವುದು ಸೇರಿದಂತೆ ಕೆಲವು ಅಗತ್ಯ ಟೆಂಡರ್‌ಗಳನ್ನು ಕರೆದು ಜಾತ್ರೆ ಪೂರ್ವಭಾವಿ ಸಿದ್ಧತೆ ನಡೆಸಲಾಗುತ್ತಿದೆ. ಡಿ. 23ರಂದು ಮರ ಕಡಿಯುವ ಶಾಸ್ತ್ರವಿದ್ದು, ಜ. 27ರಂದು ಅಂಕೆ ಹಾಕಲಾಗುತ್ತದೆ. ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಬೇಕಾದ ವ್ಯವಸ್ಥೆ ಸಮಿತಿ ಮಾಡಿಕೊಳ್ಳುತ್ತಿದೆ. ಸರ್ವರೂ ಮಾರಿ ಕಾಂಬಾ ಜಾತ್ರೆ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗೋಪುರ ಸಮಿತಿ ಸಂಚಾಲಕ […]

Continue Reading

ಶಿವಮೊಗ್ಗ | ಭಗವದ್ಗೀತೆ ಟೀಕಿಸುವ ಸಿದ್ದರಾಮಯ್ಯ, ಮಹಾತ್ಮ ಗಾಂಧಿಯನ್ನು‌ ಮನುವಾದಿ ಎನ್ನುವರೇ, ಈಶ್ವರಪ್ಪ ಪ್ರಶ್ನೆ?

ಮಹಾಭಾರತದ ಯುದ್ಧ ಭೂಮಿಯಲ್ಲಿ ವಿಚಲಿತನಾಗಿ ಕುಳಿತ ಅರ್ಜುನನಿಗೆ ಶ್ರೀ ಕೃಷ್ಣ ಭೋದಿಸಿದ ಗೀತೆ ಮಹಾತ್ಮ ಗಾಂಧಿಯವರನ್ನೊಳಗೊಂಡು ವಿಶ್ವದ ಹಲವು ಮಹಾನ್ ನಾಯಕರುಗಳಿಗೆ ಜೀವನ ಸ್ಪೂರ್ತಿಯಾಗಿದೆ ಎಂದರು. ಈ ನಿಟ್ಟಿನಲ್ಲಿ ರಾಷ್ಟ್ರದ ಮಕ್ಕಳಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಭಗವದ್ಗೀತೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದಿರುವುದು ಒಂದು ಮಹತ್ತರ ನಡೆಯಾಗಿದೆ. ಧರ್ಮೇಂದ್ರ ಪ್ರಧಾನ್ ಅವರೂ ಸಹಾ ಕುಮಾರಸ್ವಾಮಿಯವರ ಪತ್ರವನ್ನು ಸಕಾರತ್ಮಕವಾಗಿ ಪರಿಗಣಿಸಿದ್ದು ಸಂತಸ ತಂದಿದೆ […]

Continue Reading