ಆಟವಾಡುತ್ತಾ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ ; ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಆಪದ್ಬಾಂಧವ

ಗಾಬರಿಯಿಂದ ಮನೆಯೊಳಗೆಲ್ಲಾ ಹುಡುಕಿದರೂ ಮಗು ಸಿಗಲಿಲ್ಲ. ಕೊನೆಗೆ ಅನುಮಾನಗೊಂಡು ಮನೆಯ ಹಿಂದಿನ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ, ಬಾವಿಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಪುಟ್ಟ ಭುವಿ ಬಾವಿಯಲ್ಲಿದ್ದ ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀರಿನ ಮೇಲೆ ಒದ್ದಾಡುತ್ತಾ ಅಳುತ್ತಿದ್ದಳು.ಅಜ್ಜಿಯ ಕೂಗಾಟ ಕೇಳಿ ತಕ್ಷಣವೇ ಅಕ್ಕಪಕ್ಕದವರು ಓಡಿಬಂದಿದ್ದಾರೆ. ಈ ಆತಂಕದ ಸುದ್ದಿ ಹತ್ತಿರದಲ್ಲೇ ವಾಸವಿದ್ದ ಪಯ್ಯು ಚೌಟಿ ಅವರಿಗೂ ತಲುಪಿದೆ. ಆಗಷ್ಟೇ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಅವರು, ವಿಷಯ ತಿಳಿದ ಕೂಡಲೇ ಒಂದು […]

Continue Reading

ವೈದ್ಯಕೀಯ ಸ್ನಾತಕೋತ್ತರ ಪದವಿ ; ಡಾ. ವಿಶಾಖ ಹೆಗಡೆಗೆ 6ನೇ ರ‌್ಯಾಂಕ್

ಸದ್ಯ ಡಾ. ವಿಶಾಖ ಅವರು ಬೆಳಗಾವಿಯ ಜವಾಹರ್‌ಲಾಲ್ ನೆಹರು ವೈದ್ಯಕೀಯ ಕಾಲೇಜು ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನೆಲೆಸಿರುವ ಶಿರಸಿಯ ಗಾಳಿಮನೆ ಗ್ರಾಮದ ಡಾ. ಜಿ.ಎಸ್. ಮಂಜುನಾಥ್ ಹೆಗಡೆ ಹಾಗೂ ನಿರುಪಮ ಮಂಜುನಾಥ್ ದಂಪತಿಯ ಪುತ್ರಿ .

Continue Reading

ಶಿರಸಿ | ಉಪನ್ಯಾಸಕನ ಮಹತ್ವದ ಸಾಧನೆ ; 1.25 ಕೋಟಿ ರೂ. ಅನುದಾನದ ಸಂಶೋಧನಾ ಯೋಜನೆಗೆ, ರಾಜ್ಯ ಸರ್ಕಾರ ಒಪ್ಪಿಗೆ

ವೆಂಕಟೇಶ್ ಬಡಿಗೇರ ಅವರು ‘ಫೋಟೋನಿಕ್ಸ್ ಸೆನ್ಸಾರ್’ (Photonics Sensor) ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದರು. ಇವರು ರೂಪಿಸಿದ ತಂತ್ರಜ್ಞಾನದಿಂದ ಮಲೇರಿಯಾ ರೋಗಕ್ಕೆ ಕಾರಣವಾಗುವ ‘ಪ್ಲಾಸ್ಮೋಡಿಯಂ ಪ್ಯಾರಾಸೈಟ್’ ಹಾಗೂ ಅಪಾಯಕಾರಿ ‘ಕ್ಯಾನ್ಸರ್ ಕೋಶ’ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ರಾಜ್ಯ ಮಟ್ಟದ ಗುರುತಿಸುವಿಕೆ: ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಡಿಯಲ್ಲಿ ಬರುವ ‘ಕರ್ನಾಟಕ ಇನ್ನೋವೇಶನ್ ಆಂಡ್ ಸೊಸೈಟಿ’ (KITS), ಈ ಯೋಜನೆಯ ಮಹತ್ವವನ್ನು ಅರಿತು ಇದನ್ನು ‘ಇನ್ನೋವೇಶನ್ ಲ್ಯಾಬ್’ ಎಂದು ಪರಿಗಣಿಸಿದೆ. ಅಲ್ಲದೆ, ಈ ಸಂಶೋಧನೆಗೆ […]

Continue Reading

ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ ; ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಮಂದಿ ಪೊಲೀಸ್ ವಶಕ್ಕೆ

ಇದೇ ವಿಚಾರವಾಗಿ ಮಹೇಶ್ ನಾಯ್ಕ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದ ಕಾರಣ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರನಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್‌ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್‌ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಉತ್ತರ ಕನ್ನಡ […]

Continue Reading