ಯುದ್ಧದ ನಡುವೆ ಭಾರತಕ್ಕೆ ಎಲ್‌ಪಿಜಿ ಹೊತ್ತು ತಂದ ಶಿವಾಲಿಕ್‌ ಹಡಗು

ಎಲ್‌ಪಿಜಿ ಸರಬರಾಜಲ್ಲಿ ವಿಳಂಬವಾದರೆ ಮತ್ತಷ್ಟು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಇದರ ನಡುವೆ ಶಿವಾಲಿಕ್‌ ಹಡಗು ಭಾರತ ತಲುಪಿದೆ. ಮತ್ತೊಂದು ಹಡಗು ನಂದಾ ದೇವಿ ಮಾರ್ಚ್ 17 ರಂದು ಕಾಂಡ್ಲಾ ಬಂದರಿಗೆ ಆಗಮಿಸಲಿದೆ. ಇದರಿಂದ ಗ್ಯಾಸ್‌ ಸಮಸ್ಯೆಗೆ ಕೊಂಚ ರಿಲೀಫ್‌ ಸಿಗಲಿದೆ. ಎಸ್. ಜೈಶಂಕರ್ ಮತ್ತು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆ ಬಳಿಕ ಭಾರತದ ಹಡಗುಗಳಿಗೆ ಸೀಮಿತವಾದ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿತ್ತು.

Continue Reading

ಭಯಬೇಡ ಎಂದಿನಂತೆ ನಿಮ್ಮ ಮನೆಗೆ ಗ್ಯಾಸ್​ ಸಿಲಿಂಡರ್ ಬರುತ್ತೆ ; ಕೇಂದ್ರ ಸರ್ಕಾರ ಅಭಯ

ಹಿಂದಿನಂತೆ ಎರಡೂವರೆ ದಿನಗಳಲ್ಲಿ ನಿಮ್ಮ ಮನೆಗಳಿಗೆ ಗ್ಯಾಸ್​ ಸಿಲಿಂಡರ್​ ಬರುವಂತೆ ಕ್ರಮ ವಹಿಸಲಾಗಿದೆ” ಎಂದು ತಿಳಿಸಿದರು.”ಭಾರತಕ್ಕೆ ಬರುವ ಕಚ್ಚಾ ತೈಲ ಸರಬರಾಜು ಸುರಕ್ಷಿತವಾಗಿದೆ. ಹಾರ್ಮುಜ್ ಜಲಸಂಧಿಯ ಮುಚ್ಚಿದ್ದರೂ, ಬೇರೆ ಮಾರ್ಗಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಸರ್ಕಾರವು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಿದ್ದರಿಂದ ಶೇಕಡಾ 25 ರಷ್ಟು ಏರಿಕೆಯಾಗಿದೆ” ಎಂದು ಹೇಳಿದರು. “ಹೀಗಾಗಿ, ಅಡುಗೆ ಅನಿಲ ಸಿಲಿಂಡರ್‌ಗಳನ್ನು ಭಯಭೀತರಾಗಿ ಬುಕಿಂಗ್ ಮಾಡುವ ಅಗತ್ಯವಿಲ್ಲ. ಈ ಹಿಂದೆ ವಿತರಿಸಿದಂತೆ ಎರಡೂವರೆ ದಿನಗಳಲ್ಲಿ ಗ್ಯಾಸ್​ ಸಿಲಿಂಡರ್​ ನಿಮ್ಮ ಮನೆಗಳಿಗೆ […]

Continue Reading

ಯುದ್ಧದ ಪರಿಣಾಮ ; ನಾಗರಿಕರಿಗೆ LPG ಸಿಲಿಂಡರ್ ದರ ಏರಿಕೆಯ ಬಿಸಿ

ಜನವರಿಯಿಂದ ಅಮೆರಿಕದಿಂದ ಎಲ್‌ಪಿಜಿ ಭಾರತಕ್ಕೆ ಬರಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 2025 ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026 ರ ಒಪ್ಪಂದ ವರ್ಷಕ್ಕೆ ಯುಎಸ್ ಗಲ್ಫ್ ಕರಾವಳಿಯಿಂದ ಸುಮಾರು 2.2 MTPA ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿವೆ.

Continue Reading

ಅಡುಗೆ ಎಣ್ಣೆ ಬೆಲೆ ಧಿಡೀರ್ ಏರಿಕೆ

ಹಲವಾರು ಪ್ರಮುಖ ಅಡುಗೆ ಎಣ್ಣೆ ಬ್ರಾಂಡ್‌ಗಳು ತಮ್ಮ ಬೆಲೆಗಳನ್ನು ಪರಿಷ್ಕರಿಸಿವೆ: ಚಿನ್ನ ವಿಜೇತ: ಕಳೆದ ವಾರ ಒಂದು ಲೀಟರ್ ಬೆಲೆ ₹161 ಇತ್ತು. ಈ ವಾರ ಅದು ₹165ಕ್ಕೆ ಏರಿಕೆಯಾಗಿದೆ.ಸನ್‌ಪ್ಯೂರ್: ಕಳೆದ ವಾರ ಲೀಟರ್‌ಗೆ ₹161 ರಿಂದ ಈ ವಾರ ₹165ಕ್ಕೆ ಏರಿಕೆಯಾಗಿದೆ.ಅದೃಷ್ಟ: ದರ ಲೀಟರ್‌ಗೆ ₹152 ರಿಂದ ₹157ಕ್ಕೆ ಏರಿಕೆಯಾಗಿದೆ. ಈ ಬ್ರಾಂಡ್‌ಗಳ ಹೊರತಾಗಿ, ಮಾರುಕಟ್ಟೆಯಲ್ಲಿರುವ ಇತರ ಪ್ರಮುಖ ಅಡುಗೆ ಎಣ್ಣೆ ಉತ್ಪನ್ನಗಳು ಸಹ ಲೀಟರ್‌ಗೆ ಸರಾಸರಿ ₹4 ರಿಂದ ₹5 ರಷ್ಟು ಹೆಚ್ಚಳವನ್ನು ದಾಖಲಿಸಿವೆ. […]

Continue Reading

ಆಯತೊಲ್ಲಾ ಅಲಿ ಖಮೇನಿ ಹತ್ಯೆ ; ಇರಾನ್ ಜನತೆಯಿಂದ ಸಂಭ್ರಮಾಚಾರಣೆ

https://x.com/i/status/2027883845412966527 ಇರಾನ್‌ ನ ಟೆಹ್ರಾನ್‌, ಕರಾಜ್ ಮತ್ತು ಕೇಂದ್ರ ನಗರ ಇಸ್ಫಹಾನ್‌, ಶಿರಾಜ್ ಮತ್ತು ಅಬ್ದಾನನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಬೀದಿಗಿಳಿದಿದ್ದು, ಸಂಭ್ರಮಾಚರಣೆಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಜನರೆಲ್ಲಾ ಗುಂಪಾಗಿ ಸೇರಿದ್ದು, ರಸ್ತೆ ಮಧ್ಯದಲ್ಲೇ ಜೋರಾಗಿ ಕಿರುಚಿಕೊಂಡು ನೃತ್ಯಗಳನ್ನು ಆಡುತ್ತಿದ್ದರೆ, ಇನ್ನು, ಕೆಲ ವಿಡಿಯೋಗಳಲ್ಲಿ ಜನರು ತಮ್ಮ ಕಿಟಕಿಗಳ ಬಳಿ ನಿಂತುಕೊಂಡು ʼಸ್ವತಂತ್ರ.. ಸ್ವತಂತ್ರ..ʼ ಎಂದು ಹರ್ಷೋದ್ಗಾರ ಮಾಡುತ್ತಿದ್ದಾರೆ. ಅಲ್ಲದೆ, ಜನವರಿಯಲ್ಲಿ ಇರಾನ್‌ ಪ್ರತಿಭಟನೆಗಳ ಸಮಯದಲ್ಲಿ ಸಾಮೂಹಿಕವಾಗಿ ಸಾವನ್ನಪ್ಪಿದ್ದ ಪ್ರತಿಭಟನಾಕಾರರ ಚಿತ್ರಗಳನ್ನು ಹೊತ್ತು ಮೆರವಣಿಗೆ ಮಾಡುತ್ತಿರುವ ವಿಡಿಯೋಗಳು […]

Continue Reading

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವು?

ಇಸ್ರೇಲ್ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮೇಲೆ ಅಮೆರಿಕ ವೈಮಾನಿಕ ಪಡೆಗಳು ದಾಳಿ ನಡೆಸಿದ್ದು, ಇದು ಪ್ರಮುಖ ಮಿಲಿಟರಿ ಕಾರ್ಯಾಚರಣೆಯಾಗಿದೆ. ಅಮೆರಿಕ ಸೇನಾಪಡೆ ಇರಾನ್ ಮೇಲಿನ ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ.ಇರಾನ್ ದುರಾಡಳಿತವನ್ನು ಕೊನೆಗಾಣಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಅಲ್ಲದೇ ಇರಾನ್ ನ ಮಿಸೈಲ್ ಇಂಡಸ್ಟ್ರಿ ಹಾಗೂ ಪರಮಾಣು ನೆಲೆಯನ್ನು ನಿಷ್ಕ್ರಿಯಗೊಳಿಸುವ ಉದ್ದೇಶ ಹೊಂದಿರುವುದಾಗಿ ಟ್ರಂಪ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Continue Reading