ಚಿಕ್ಕಮಗಳೂರು | ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿ 15 ಜನರಿಗೆ ಗಡಿಪಾರು ನೋಟೀಸ್

ಪೊಲೀಸ್ ಇಲಾಖೆಯ ಶಿಫಾರಸ್ಸಿನ ಪ್ರಕಾರ, ಸಂತೋಷ್ ಕೋಟ್ಯಾನ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದಾಗಿ ಪರಿಗಣಿಸಿ ಗಡಿಪಾರು ಕ್ರಮಕ್ಕೆ ಮನವಿ ಮಾಡಲಾಗಿದೆ.ಒಟ್ಟಾರೆ 15 ಮಂದಿಯಲ್ಲಿ 10 ಮಂದಿ ಮುಸ್ಲಿಂ ಸಮುದಾಯದವರು ಹಾಗೂ 5 ಮಂದಿ ಹಿಂದೂ ಸಮುದಾಯದವರಾಗಿದ್ದು, ಅಹಮದ್, ಫಾರೂಕ್, ಇಬ್ರಾಹಿಂ ಅಲಿಯಾಸ್ ಇಬ್ಬು ಇಮ್ರಾನ್, ಚಾಂದ್ ಪಾಷಾ, ಜೋಹಾರ್ ಅಂಜುಮ್, ಮೊಹಮ್ಮದ್ ಇದ್ರಿಶ್, ಫಾಜಿಲ್ ಅಹಮದ್‌, ಜಾವೀದ್ […]

Continue Reading

ಸಂಚಾರಿ ನಿಯಮ ಉಲ್ಲಂಘನೆ ; ಸರ್ಕಲ್ ನಲ್ಲಿ ಸಂಚಾರ ಜಾಗೃತಿ ಬೋರ್ಡ್ ಹಿಡಿದು ನಿಲ್ಲುವಂತೆ ನ್ಯಾಯಾಲಯ ಆದೇಶ

ಈತ ಈ ಹಿಂದೆ ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ರಂಜಿತ್ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರಿಂದ, ನ್ಯಾಯಾಧೀಶರು ಆತನಿಗೆ ವಿಭಿನ್ನವಾದ ಶಿಕ್ಷೆಯನ್ನು ವಿಧಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ, ರಂಜಿತ್ ಮಾರ್ಚ್ 17 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡೂರು ಪಟ್ಟಣದ ಪ್ರಮುಖ ವೃತ್ತವಾದ ಮರವಂಜಿ ಸರ್ಕಲ್‌ನಲ್ಲಿ ಸಂಚಾರ ಜಾಗೃತಿಯ ಬೋರ್ಡ್ ಹಿಡಿದು ನಿಲ್ಲಬೇಕಾಯಿತು. […]

Continue Reading

ಚಿಕ್ಕಮಗಳೂರು | ಹೆಣ್ಣುಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

ತಂಗಿ ಹಾಗೂ ಭಾವನ ಜೊತೆ ಸೇರಿ ತಂದೆಯ ಅಂತಿಮ ಧಾರ್ಮಿಕ ವಿಧಿ, ವಿಧಾನಗಳನ್ನು ಪೂರೈಸಿದ್ದಾರೆ.ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು. ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಕುಟುಂಬದ ಹಿರಿಯರು ಹೆಣ್ಣುಮಕ್ಕಳ ನಿರ್ಧಾರಕ್ಕೆ ಬೆಂಬಲ ನೀಡಿದ್ದು, ಸಮಾಜದವರು ಮತ್ತು ಸ್ನೇಹಿತರು ಯುವತಿಯರ ಧೈರ್ಯಶಾಲಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

ಚಿಕ್ಕಮಗಳೂರು | ಪೊಲೀಸರ ಎದುರೇ ಕತ್ತು ಕುಯ್ದುಕೊಂಡ ಯುವಕ ; ಆಸ್ಪತ್ರೆಯಲ್ಲಿ ಹೊಲಿಗೆ ಹಾಕುತ್ತಿದ್ದಂತೆ ಪರಾರಿ

ಇದೆ ವಿಚಾರ ಸಂಬಂಧ ಅತ್ತೆ ಬಳಿ ಹಣ ಕೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಅತ್ತೆ ಹಣ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಪೊಲೀಸರ ಬಳಿ ನ್ಯಾಯ ಕೇಳಲು ಬಂದ ಯುವಕ ಬ್ಲೆಡ್ ನಿಂದ ಕತ್ತು ಕುಯ್ದುಕೊಂಡಿದ್ದಾನೆ. ಈ ವೇಳೆ ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ದಾಖಲೀಸಲಾಗಿದೆ.ಹಾಗೂ ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನರ್ಸ್ ಗಳು ಹೊಲಿಗೆ ಹಾಕುತ್ತಿದ್ದಂತೆ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಬಳಿ ಈ ಒಂದು ಘಟನೆ ನಡೆದಿದೆ

Continue Reading

15 ವರ್ಷಗಳಿಂದ ಪರಿಹಾರ ನೀಡದೆ ವಿಳಂಬ ; KSRTC Bus ಜಪ್ತಿ ಮಾಡಿದ ನ್ಯಾಯಾಲಯ

ಈ ಬಗ್ಗೆ ಇಲಾಖೆಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ಪರಿಹಾರ ನೀಡದೇ ಕಾಲಹರಣ ಮಾಡುತ್ತಿದ್ದುದರಿಂದ ಬಸ್ ಜಪ್ತಿ ಮಾಡುವಂತೆ ಚನ್ನರಾಯಪಟ್ಟಣ ನ್ಯಾಯಾಲಯ ಆದೇಶ ಹೊರಡಿಸಿತ್ತು. ಅದರಂತೆ ಬೇಲಿಫ್‌ಗಳ ಸಹಾಯದಿಂದ ಚಿಕ್ಕಮಗಳೂರು ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಅನ್ನು ಜಪ್ತಿ ಮಾಡಲಾಗಿದೆ.

Continue Reading

ಚಿಕ್ಕಮಗಳೂರು | ಅಪಘಾತದಲ್ಲಿ ಮೃತನಾದ ಪತಿಯ ಅಂಗಾಂಗ ದಾನ ಮಾಡಿದ ಪತ್ನಿ ; ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ನಿ

ಕುಟುಂಬದಿಂದ ಮಹತ್ವದ ನಿರ್ಧಾರ: ಮಂಜುನಾಥ್ ಸಾವಿನ ಬಳಿಕ ಅವರ ಕುಟುಂಬದ ಸದಸ್ಯರು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ನಿನ್ನೆ ದಿವಸ (ಗುರುವಾರ) ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನಕ್ಕೆ ಅವರ ಪತ್ನಿ ಮುಂದಾದರು. ಈ ಮೊದಲು ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿ ಫೀಸ್ ಫ್ರೀ ಮಾಡಿಕೊಡ್ತೀವಿ ಎಂದಿದ್ದರಂತೆ. ಆದರೆ, ಪತಿ ತೀರಿಕೊಂಡ ದುಃಖದಲ್ಲಿದ್ದ ಪತ್ನಿಗೆ ಅದಕ್ಕೆ ಮನಸ್ಸು ಒಪ್ಪಿರಲಿಲ್ಲ. ಆಗ ಹಣ ನೀಡಿ ಪತಿಯ ಶವವನ್ನು ಪಡೆದುಕೊಂಡು ಮನೆಗೆ ಬಂದಿದ್ದರು.ಆದರೆ, ಆ […]

Continue Reading

ಚಿಕ್ಕಮಗಳೂರು | ಬಿಇಒ ಮಾತಿನಿಂದ ಅವಮಾನ ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಈಗಾಗಲೇ ಪರೀಕ್ಷೆಯಲ್ಲಿ ಫೇಲ್ ಆಗಿರುವ ಒತ್ತಡದ ಜೊತೆಗೆ, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಫೇಲ್ ಆಗಿಬಿಡುವೆನೋ ಎಂಬ ಭಯ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದೆ ಎನ್ನಲಾಗಿದೆ.

Continue Reading

ಚಿಕ್ಕಮಗಳೂರು | ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೇಜ್ ಟಾರ್ಚರ್ ; ಯುವಕನ ಭೀಕರ ಕೊಲೆ

ಆದರೂ ಮಂಜುನಾಥ್ ಮೆಸೇಜ್ ಮಾಡುತ್ತಲೇ ಇದ್ದ. ಇದನ್ನು ಯುವತಿ ತನ್ನನ್ನು ಮದುವೆಯಾಗಲಿರುವ ಯುವಕ ವೇಣುಗೆ ತಿಳಿಸಿದ್ದಾಳೆ. ಈ ಹಿನ್ನೆಲೆ ಮಾತನಾಡಬೇಕು ಎಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಂಜುನಾಥ್‌ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, […]

Continue Reading

ಚಿಕ್ಕಮಗಳೂರು | ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸ ; ಪೊಲೀಸ್ ಸಿಬ್ಬಂದಿಗೆ ದಂಡ ಹಾಕಿದ ಪಿಎಸೈ ರೇಣುಕಾ..!

ತಪಾಸಣೆ ವೇಳೆಯಲ್ಲಿ ಐಡಿ ಕಾರ್ಡ್ ತೋರಿಸಿದರೂ, ನಿಯಮಾತೀತವಾಗಿ ಪೊಲೀಸ್ ಬೋರ್ಡ್ ಬಳಸಿರುವುದರಿಂದ ಬಣಕಲ್ ಪಿಎಸೈ ರೇಣುಕಾ, ನಿಯಮ ಪ್ರಕಾರ ದಂಡ ವಿಧಿಸಿ, ಬೋರ್ಡ್ ತೆಗೆಸಿದ ನಂತರವೇ ವಾಹನವನ್ನು ಮುಂದಕ್ಕೆ ಕಳಿಸಿದರು. ಪದೇ ಪದೇ ದುರುಪಯೋಗವಾಗುತ್ತಿರುವ ಪೊಲೀಸ್‌ ಬೋರ್ಡ್ ಬಳಕೆಗೆ ನಿಲ್ಲುವಂತೆ ಕ್ರಮ ಕೈಗೊಂಡ ಪಿಎಸೈ ರೇಣುಕಾ ಅವರ ನಡೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Continue Reading

ಚಿಕ್ಕಮಗಳೂರು | ಕುದುರೆಮುಖಕ್ಕೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದು ಹಲವರಿಗೆ ಗಾಯ

ಬಸ್ ನಿಯಂತ್ರಣ ತಪ್ಪಿ ಪಲ್ಟಿ ಆದುದರಿಂದ ಕೆಲವರಿಗೆ ಕೈಕಾಲುಗಳಿಗೆ ಹಾಗೂ ತಲೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

Continue Reading