ಶಿವಮೊಗ್ಗ | ಡಿಎಸ್ಪಿ ಬಾಬು ಅಂಜನಪ್ಪ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಪತ್ರಕರ್ತ ಚಿತ್ರಪ್ಪ

ನಗರದಲ್ಲಿ ಇಸ್ಪೀಟ್ ಜೂಜು ನಡೆಸುವ ಇಂತಃ ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಇಲಾಖೆಯ ಅಧಿಕಾರಿ ಮೇಲೆ ನೇರವಾಗಿ ಆರೋಪ ಬಂದಿದೆ. ಮುಂದುವರೆದು ನಗರದಲ್ಲಿ ಪೊಲೀಸ್ ಇಲಾಖೆ ಮೇಲೆ ಪುಡಿ ರೌಡಿಗಳಿಗೆ, ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಭಯವಿಲ್ಲದಾಗಿದೆ. ಡಿವೈಎಸ್ಪಿ ಕಚೇರಿಗಳಲ್ಲೇ ಈ ರೀತಿಯ ಸಮಾಜಘಾತುಕ ಶಕ್ತಿಗಳು ಕಾಣಸಿಗುತ್ತಿದ್ದಾರೆ ಎಂಬುದು ವಿಷಾದನೀಯದ ಸಂಗತಿಯಾಗಿದೆ! ಈ ಹಿಂದೆ ಡಿವೈಎಸ್ಪಿ ಆಗಿದ್ದ ಬಾಲರಾಜ್ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಕ್ರೈಂ ಕಡಿವಾಣ ಹಾಕಲು ಯಶಸ್ವಿಯಾಗಿದ್ದರು. ಪ್ರಸ್ತುತ ಇಂದಿನ ಪರಿಸ್ಥಿತಿ […]

Continue Reading

ಶಿವಮೊಗ್ಗ | ಯುವಕನ ಭೀಕರ ಕೊಲೆ

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆ ಮುಂದುವರಿದಂತೆ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಡ್ರಗ್ಸ್ ದಂಧೆ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ವಾಗ್ದಾಳಿ

ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ತಿಳಿಸಿದ್ದಾರೆ.

Continue Reading

ಸಚಿವ ಝಮೀರ್ ಅಹ್ಮದ್ ಆಪ್ತ ಅನ್ವರ್ ಪಾಷ, ಡ್ರಗ್ಸ್ ಪ್ರಕರಣದಲ್ಲಿ ಬಂಧನ

ವೇದಮೂರ್ತಿ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತ ಎಂದು ತಿಳಿದುಬಂದಿದೆ. ಬಂಧಿತರಿಂದ 90 ಗ್ರಾಂ ಎಂಡಿಎಂ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಆಪ್ತ ಅನ್ವರ್ ಬಾಷಾ ಸೇರಿ ಹಲವರನ್ನು ಬಂಧಿಸಲಾಗಿದೆ. ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ಸಚಿವರುಗಳ ಆಪ್ತರೇ ಭಾಗಿಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ.

Continue Reading

ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣ ವತಿಯಿಂದ ಸಾಮಾಜಿಕ ಬಹಿಷ್ಕಾರ ವಿರುದ್ಧ ಪ್ರತಿಭಟನೆ

ಈ ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕುರಣ್ ಕುಮಾರ್, ಉಪಾಧ್ಯಕ್ಷರಾದ ಮುಜೀಬ್, ಜನರಲ್ ಸೆಕ್ರೆಟರಿ ಮೊಹಮ್ಮದ್ ಶಫಿ, ವಿಜಯ ಕುಮಾರ್, ಜೀವನ್, ಸಾಧಿಕ್ ಮೊದಲಾದವರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ರೈಲು ಪ್ರಯಾಣ ದರ ಏರಿಕೆ ಖಂಡಿಸಿ,ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್

ರೈಲು ಸಂಚಾರವು ಈ ದೇಶದ ಜನರ ಜೀವನಾಡಿಯಾಗಿದೆ. ಪ್ರತಿದಿನ ಕೋಟ್ಯಂತರ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ರೈಲು ವ್ಯವಸ್ಥೆ ಭಾರತದ್ದಾಗಿದ್ದು, ರೈಲು ಸಂಚಾರದಿಂದ ಸರ್ಕಾರಕ್ಕೆ ನಷ್ಟವೇನೂ ಆಗುತ್ತಿಲ್ಲ. ಆದರೆ, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ರೈಲು ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಮೂಲಕ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಒಂದು ವರ್ಷದಲ್ಲಿ ಇದು ಎರಡನೇ ಬಾರಿ ರೈಲು ಪ್ರಯಾಣದರ […]

Continue Reading

ಶಿವಮೊಗ್ಗ | ಎಸ್ ವಿ ತಿಮ್ಮಯ್ಯರವರ 12 ನೆ ಪುಣ್ಯ ಸ್ಮರಣೆ ಕಾರ್ಯಕ್ರಮ

ವೇದಿಕೆಯ ಮೇಲಿದ್ದಂತ ಅತಿಥಿಗಳು ಎಸ್ ವಿ ತಿಮ್ಮಯ್ಯ ಅವರ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಂತ ಸಾಧನೆಗಳು ಹಾಗೂ ಅವರು ನಡೆದು ಬಂದಂತಃ ಹಾದಿಯನ್ನು ಸ್ಮರಿಸಿ ಹೊಗಳಿದರು. ಈ ಒಂದು ಕಾರ್ಯಕ್ರಮದಲ್ಲಿ ಮಾಜಿ MLC ರುದ್ರೇಗೌಡರು, NES ನ ಅಧ್ಯಕ್ಷರಾದ GS ನಾರಾಯಣರಾವ್ NES ನ ನಿರ್ದೇಶಕರಾದ ಅನಂತದತ್ತ, NES ನ ಮಾಜಿ ನಿರ್ದೇಶಕರಾದ ಶ್ರೀಮತಿ ರುಕ್ಮಿಣಿ ವೇದವ್ಯಾಸ್ , ಡಾ. ಅರವಿಂದ್ ತಿಮ್ಮಯ್ಯ ಅವರ ಪತ್ನಿ ಐಶ್ವರ್ಯ, NES ನ ಹಾಲಿ, ಮಾಜಿ ಉದ್ಯೋಗಿಗಳು, ವಿವಿಧ ಸಂಘಸಂಸ್ಥೆ ಗಳ […]

Continue Reading

ಶಿವಮೊಗ್ಗ | ಭೀಕರ ಅಪಘಾತದಲ್ಲಿ ಬೈಕ್ ಸವಾರ ದುರ್ಮರಣ

ನಗರದ ವಿದ್ಯಾನಗರ ಫ್ಲೈಓವರ್ ಬಳಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ನಾಗರಿಕರು ಹಾಗೂ ಕರವೇ ಸ್ವಾಭಿಮಾನಿ ಬಣ ಬಹಳ ಹಿಂದೆಯೇ ಒತ್ತಾಯ ಮಾಡಿದ್ದರು, ಇಲ್ಲಿವರೆಗೂ ಇಲ್ಲಿಗೆ ಸಿಗ್ನಲ್ ಲೈಟ್ ಅಳವಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ನಿರಂತರವಾಗಿ ಇಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಫ್ಲೈಓವರ್ ಕೆಳಗೆ ನಿಂತು ವಾಹನಗಳಿಗೆ ದಂಡ ವಿಧಿಸುತ್ತಿರುತ್ತಾರೆ. ಪೊಲೀಸರಿಗೆ ಹೆದರಿ ಬಹಳಷ್ಟು ವಾಹನಸವಾರರು ರಸ್ತೆಯ ವಿರುದ್ದ ದಿಕ್ಕಿನಲ್ಲಿ ಬೈಕ್ ಹಾಗೂ ಇನ್ನಿತರೆ ವಾಹನ ಸವಾರರು ಚಾಲನೆ ಮಾಡುತ್ತಾರೆ. ಇದರಿಂದ ಕೂಡ ಅಪಘಾತಗಳು ಸಂಭವಿಸುವ ಸಾಧ್ಯತೆ […]

Continue Reading