ಮಹಿಳೆಯರ 3,500 ಅಶ್ಲೀಲ ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದ ಎಕ್ಸ್

ಎಐ-ರಚಿತ ವಿಷಯದ ದುರುಪಯೋಗವನ್ನು ತಡೆಗಟ್ಟಲು, ಕಟ್ಟುನಿಟ್ಟಾದ ಬಳಕೆದಾರ ನೀತಿಗಳನ್ನು ಜಾರಿಗೊಳಿಸಲು ಮತ್ತು ಉಲ್ಲಂಘಿಸುವವರನ್ನು ಅಮಾನತುಗೊಳಿಸಲು ಅಥವಾ ಅಂತ್ಯಗೊಳಿಸಲು ಎಕ್ಸ್ ತನ್ನ ತಾಂತ್ರಿಕ ಮತ್ತು ಆಡಳಿತ ಚೌಕಟ್ಟುಗಳನ್ನು ಪರಿಶೀಲಿಸುವಂತೆಯೂ ನೋಟಿಸ್ ನಿರ್ದೇಶಿಸಿದೆ. “ಈ ನಡವಳಿಕೆಯು ಪ್ಲಾಟ್‌ಫಾರ್ಮ್-ಮಟ್ಟದ ಸುರಕ್ಷತಾ ಕ್ರಮಗಳು ಮತ್ತು ಜಾರಿ ಕಾರ್ಯವಿಧಾನಗಳ ಗಂಭೀರ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸಿ AI ತಂತ್ರಜ್ಞಾನಗಳ ಸಂಪೂರ್ಣ ದುರುಪಯೋಗಕ್ಕೆ ಸಮನಾಗಿರುತ್ತದೆ” ಎಂದು ಸಚಿವಾಲಯ ಹೇಳಿದೆ.

Continue Reading

ಮಂಗಳೂರು | ದ್ವೇಷಭಾಷಣ ಮಸೂದೆ;ರಾಜ್ಯಪಾಲರು ವಾಪಸ್ ಕಳಿಸಿಲ್ಲ: ಸಿಎಂ

ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಹಿಂದೆ ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ನಾವು ಪಾದಯಾತ್ರೆ ಮಾಡಿದೆವು. ಈಗ ಬಿಜೆಪಿಯವರು ಏಕೆ ಪಾದಯಾತ್ರೆ ಮಾಡಬೇಕು? ಎಂದು ಪ್ರಶ್ನಿಸಿದರು.* ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ […]

Continue Reading

ಗದಗ | ಲಕ್ಕುಂಡಿಯಲ್ಲಿ ಮನೆಯ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆ

ಇಲಾಖೆಯಿಂದ ಪಂಚನಾಮೆ ಕ್ರಮ ಜರುಗಿಸಿ, ದೊರೆತ ಬಂಗಾರದ ಆಭರಣಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ತಾಯಿ-ಮಗನ ಈ ಪ್ರಾಮಾಣಿಕ ಕಾರ್ಯವನ್ನು ಗುರುತಿಸಿ, ಜಿಲ್ಲಾ ಆಡಳಿತದ ವತಿಯಿಂದ ಅವರನ್ನು ಸನ್ಮಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಅಬಕಾರಿ ಜಿಲ್ಲಾಧಿಕಾರಿ ದುರ್ಗೇಶ್ ಅವರು ಪ್ರಜ್ವಲ್‌ಗೆ ಶಾಲು ಹಾಕಿ ಗೌರವಿಸಿದ್ದು, ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ಗ್ರಾಮ ಪಂಚಾಯತ್ ಸದಸ್ಯೆ ರಜಿಯಾ ಬೇಗಂ ಅವರಿಗೂ ಸನ್ಮಾನ ಮಾಡಲಾಗಿದೆ.

Continue Reading

ಮನೆಯಲ್ಲಿ ಕಲಹ ; ಊರಹೊರಗೆ ಬಂದು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾದ ಬಿಜೆಪಿ ಮುಖಂಡ

ಮಾಜಿ ಕಾರ್ಪೋರೇಟರ್ ಆಗಿರುವ ಸಂಕೋಳ್ ಚಂದ್ರಶೇಖರ್ ಸಾಲ ಮಾಡಿಕೊಂಡಿದ್ದರು. ಸಾಲ ಹೊರೆ ಹೆಚ್ಚಾಗುತ್ತಿದ್ದ ಕಾರಣ ಮನೆಗೆ ಸಾಲಗಾರರು ಆಗಮಿಸಲು ಆರಂಭಿಸಿದ್ದರು. ಇದರಿಂದ ಸಂಕೋಳ್ ಚಂದ್ರಶೇಖರ ಅವರ ಇಬ್ಬರು ಮಕ್ಕಳಾದ 20 ವರ್ಷದ ನರೇಶ ಹಾಗೂ 23 ವರ್ಷದ ಪವಿತ್ರಾಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಎಲ್ಲೇ ಹೋದರೂ ಸಾಲದ ವಿಚಾರವಾಗಿ ಜನರು ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಆಕ್ರೋಶಗೊಂಡಿದ್ದ ಮಕ್ಕಳು ನಿನ್ನೆ (ಜ.10) ಸಂಕೋಳ್ ಚಂದ್ರಶೇಖರ ಮನೆಗೆ ಆಗಮಿಸುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡಿದ್ದರು. ಇದು ಮುಂದವರದರೆ ನಾವು ಸಾಯಬೇಕಾಗುತ್ತದೆ ಎಂದು ಮಕ್ಕಳು ಎಚ್ಚರಿಕೆ […]

Continue Reading

ಶಿವಮೊಗ್ಗ | ಹಿಟ್ ಅಂಡ್ ರನ್ ; ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

ಘಟನೆಯ ಮಾಹಿತಿ ಪಡೆದ ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸೈ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

ಬೆಂಗಳೂರು | ಯುವತಿ ಕೊಲ್ಲಲು ಗನ್ ಹಿಡಿದು ಓಡಾಡುತ್ತಿದ್ದ ಪ್ರೇಮಿ ಸೆರೆ

ಬಂಧಿತ ಯುವಕ ಬಿಹಾರ ಮೂಲದವನು ಎಂದು ತಿಳಿದುಬಂದಿದೆ. ಗನ್ ಹಿಡಿದು ಯುವಕ ಓಡಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

Continue Reading

ಮಲಯಾಳಂ ಬಲವಂತದ ಹೇರಿಕೆ ಇಲ್ಲ: ಕೇರಳ ಸಿಎಂ

ಕೇರಳದ ಪ್ರಗತಿ ಯಾವಾಗಲೂ ಸಮಾನತೆ ಮತ್ತು ಸಹೋದರತ್ವದಲ್ಲಿ ನೆಲೆಗೊಂಡಿರುವ ಸಮಗ್ರ ಅಭಿವೃದ್ಧಿಯಲ್ಲಿ ಬೇರೂರಿದೆ. ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಮ್ಮ ಸರ್ಕಾರ ದೃಢವಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.

Continue Reading

ಮಂಗಳೂರು | ಮನ್ರೇಗಾ ಉಳಿಸಿ ; ಜ. 26ರಿಂದ ಕಾಂಗ್ರೆಸ್ ಪಾದಯಾತ್ರೆ : ಡಿಸಿಎಂ ಡಿಕೆಶಿ ಹೇಳಿಕೆ

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 26 ರಿಂದ ಫೆಬ್ರವರಿ 2 ರವರೆಗೆ ಪಾದಯಾತ್ರೆಗಳನ್ನು ನಡೆಸಲಾಗುವುದು. ಪ್ರತಿ ಪಾದಯಾತ್ರೆಯು ಐದರಿಂದ 10 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಮತ್ತು ಪಂಚಾಯತ್ ಸದಸ್ಯರು ಹಾಗೂ ಕಾರ್ಮಿಕರನ್ನು ಒಳಗೊಂಡಿರುತ್ತದೆ ಎಂದರು.“ಈಗ, ಅವರು ಯೋಜನೆಯನ್ನು ಈ ಸಂಪೂರ್ಣ ಕೊಲ್ಲಲು ಬಯಸಿದ್ದಾರೆ. ಆದ್ದರಿಂದ ನಾವು ಎಲ್ಲಾ ಪಾಲುದಾರರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ನಾವು ಅವರನ್ನು ಕರೆಯುತ್ತೇವೆ, ಅವರಿಗೆ ಮಾಹಿತಿ ನೀಡುತ್ತೇವೆ. ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

Continue Reading

ಟಾಕ್ಸಿಕ್ ಟೀಸರ್‌ನಲ್ಲಿ ವಿಪರೀತ ಅಶ್ಲೀಲ ; ಸೆನ್ಸಾರ್ ಮಂಡಳಿಗೆ ದೂರು

ಟಾಕ್ಸಿಕ್ ಟ್ರೈಲರ್ ವಿಪರೀತ ವೈರಲ್ ಆಗಿದ್ದು, ಕೆಜೆಎಫ್‌ ದಾಖಲೆಯನ್ನು ಮುರಿದು ಮುಂದೆ ಸಾಗಿದೆ. ಈ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ನಲ್ಲಿರುವ ದೃಶ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ, ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ.

Continue Reading