ಇಸ್ಲಾಮಾಬಾದ್ ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ

ಮೊಹಮ್ಮದ್ ಬಘೇರ್ ಖಲಿಬಾಫ್ ನಿಯೋಗದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಅಕ್ಬರ್ ಅಹ್ಮದಿಯಾನ್, ಇರಾನ್ ಕೇಂದ್ರೀಯ ಬ್ಯಾಂಕ್ ಗವರ್ನರ್ (ಆರ್ಥಿಕ ನಿರ್ಬಂಧಗಳ ಚರ್ಚೆಗಾಗಿ) ಅಬ್ದೋಲ್ನಾಸರ್ ಹೆಮ್ಮತಿ, ಹಿರಿಯ ರಾಜತಾಂತ್ರಿಕ ಮಜಿದ್ ತಖ್ತ್ ರಾವಂಚಿ ಮತ್ತು ಮಾಜಿ ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಬಘೇರ್ ಜೊಲ್ಘಾದರ್ ಇರಲಿದ್ದಾರೆ. ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನದ ಪರವಾಗಿ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಜೊತೆ ವಿದೇಶಾಂಗ ಸಚಿವ ಇಶಾಕ್ ದಾರ್, ಸೇನಾ ಮುಖ್ಯಸ್ಥ (ಭದ್ರತೆ […]

Continue Reading

ಸೋಲಾರ್ ಸಿಸಿಕ್ಯಾಮೆರಾ ಬಳಸಿ ಭಾರತ ಸೇನೆಯ ಚಲನವಲನದ ಮೇಲೆ ಪಾಕ್‌ ದುಷ್ಟ ಹುನ್ನಾರ ; ಆರೋಪಿಗಳು ವಶಕ್ಕೆ

ಆರೋಪಿಗಳು ಪಂಜಾಬ್, ರಾಜಸ್ಥಾನ, ಹರ್ಯಾಣ, ಕಾಶ್ಮೀರದ ಗಡಿಯಲ್ಲಿನ ಸೂಕ್ಷ ಮಿಲಿಟರಿ ನೆಲೆಗಳ ಸಮೀಪ ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸುವ ಮೂಲಕ ಪಾಕಿಸ್ತಾನಕ್ಕೆ ರಿಯಲ್ ಟೈಮ್‌ನಲ್ಲಿ ಸೇನಾ ಪಡೆಗಳ ಓಡಾಟದ ಮಾಹಿತಿ ರವಾನಿಸುತ್ತಿದ್ದರು. ಈ ಬಂಧನದಿಂದ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪಡೆ ಮೊದಲು ಪಂಜಾಬ್ ಮತ್ತು ದೆಹಲಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಸಿಸಿಟೀವಿ ಕ್ಯಾಮೆರಾ, ನಾಲ್ಕು ಪಿಸ್ತೂಲ್‌ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ […]

Continue Reading

ಮದುವೆಯಲ್ಲಿ ಗ್ಯಾಸ್ ಸಿಲಿಂಡರ್ ಗಿಫ್ಟ್ ; ನವದಂಪತಿಗೆ ಬಂತು ನೋಟೀಸ್

ಭಟ್ಕಳದ ವಿವೇಕ್ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ಸಂಬಂಧಿಕರೊಬ್ಬರು ಎಲ್‌ಪಿಜಿ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಭಿನ್ನ ಉಡುಗೊರೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ತಾಲೂಕು ಆಡಳಿತ, ವರನಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ. ಆಡಳಿತ ಆಕ್ಷೇಪ ಈ ಕುರಿತು ಪ್ರತಿಕ್ರಿಯಿಸಿರುವ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು, ಮದುವೆಯಲ್ಲಿ ಗ್ಯಾಸ್ ಸಿಲಿಂಡರ್ ಉಡುಗೊರೆ ನೀಡುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ. ನಿಯಮಗಳ ಪ್ರಕಾರ ಸಿಲಿಂಡರ್ ಅನ್ನು […]

Continue Reading

ಶಿವಮೊಗ್ಗ | ನಗರ ವಿಕಾಸ ಯೋಜನೆ ಕಾಮಗಾರಿ ಅನುಷ್ಟಾನದಲ್ಲಿ ಶಿಷ್ಟಾಚಾರ ಉಲ್ಲಂಘನೆ :ಎಚ್. ಸಿ. ಯೋಗೇಶ್ ಆರೋಪ

ಶಿಷ್ಟಾಚಾರದ ರೀತಿಯಲ್ಲಿ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ ಕೈಯಲ್ಲಿ ಉದ್ಘಾಟನೆ ನೆರವೇರಿಸಿ ಶಿವಮೊಗ್ಗ ನಗರ ಜನತೆಗೆ ಅನುಕೂಲವಾಗುವ ಈ ಯೋಜನೆಗಳಿಗೆ ಚಾಲನೆ ಕೊಡಿಸಬೇಕೆಂದು ಮನವಿ ಮಾಡಿದರು. ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ಹಾಗೂ ಮಾಜಿ ಮಹಾ ನಗರ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಮುನ್ನಾ, ಯೂತ್ ಕಾಂಗ್ರೆಸ್ ಅಧ್ಯಕ್ಷ ಚರಣ್ ಶೆಟ್ಟಿ, ರಮೇಶ್, ರಾಜಣ್ಣ, ಗಂಗಾಧರ್, ನವೀನ್, ಮಧು, ಪವನ್, ಶರತ್ ಎಸ್.ಕೆ. ಉಪಸ್ಥಿತರಿದ್ದರು.

Continue Reading

ಝಾಂಬಿ ಡ್ರಗ್ಸ್ ; ಸುಳ್ಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು,ಆತಂಕ ಸೃಷ್ಟಿಸಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿ

ವೈದ್ಯಕೀಯ ವರದಿಯ ಪ್ರಕಾರ ಆ ವ್ಯಕ್ತಿ ಯಾವುದೇ ಮಾದಕವಸ್ತು ಸೇವಿಸಿರಲಿಲ್ಲ. ಅನಾರೋಗ್ಯವೇ ಕಾರಣ: ಆ ವ್ಯಕ್ತಿಗೆ ತೀವ್ರವಾದ ಸಂಧಿವಾತ (ಆರ್ಥೈಟಿಸ್) ಇರುವುದು ದೃಢಪಟ್ಟಿದೆ. ಮಿಶ್ರ ಪ್ರತಿಕ್ರಿಯೆ: ಸಂಧಿವಾತಕ್ಕೆ ವೈದ್ಯರು ನೀಡಿದ್ದ ನೋವು ನಿವಾರಕ ಮಾತ್ರೆಗಳ ಜೊತೆಗೆ ಆತ ಮದ್ಯ ಸೇವಿಸಿದ್ದರಿಂದ ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಪೊಲೀಸ್ ಆಯುಕ್ತರ ಎಚ್ಚರಿಕೆ: ಪ್ರಕರಣದ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಆಧಾರರಹಿತ ಮಾಹಿತಿ ಅಥವಾ ವಿಡಿಯೋಗಳನ್ನು ಸಾರ್ವಜನಿಕರು ಹಂಚಿಕೊಳ್ಳಬಾರದು. ಈ […]

Continue Reading

ಹುಲಿಕಲ್ ಬಾಳೆಬರೆ ಘಾಟಿ ಮಣ್ಣು ಕುಸಿತ ದುರ್ಘಟನೆ ಸ್ಥಳಕ್ಕೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಂದ ಭೇಟಿ-ಪರಿಶೀಲನೆ

ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಸಾಗರ ಉಪವಿಭಾಗದ ಎಸಿ ವೀರೇಶ್, ಹೊಸನಗರ ತಹಶೀಲ್ದಾರ್ ಭರತ್ ಕುಮಾರ್, ಪಿಡಬ್ಲುö್ಯಡಿ ಮುಖ್ಯ ಅಭಿಯಂತರರು, ಎಇಇ ಇತರೆ ಅಧಿಕಾರಿಗಳು ಹಾಜರಿದ್ದರು.

Continue Reading

ಮೊನಾಲಿಸಾ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲು

ಮದುವೆಯ ಸಮಯದಲ್ಲಿ ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಕೇರಳದ ದೇವಸ್ಥಾನವೊಂದರಲ್ಲಿ ನಡೆದ ಇವರ ಮದುವೆಯು ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.ಈ ಮೊದಲು ಈ ಮದುವೆಯನ್ನು ವಿರೋಧಿಸಿದ್ದ ನಿರ್ದೇಶಕರೊಬ್ಬರ ಮೇಲೆ ಮೊನಾಲಿಸಾ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈಗ ಅಧಿಕೃತ ತನಿಖೆಯಿಂದ ಆಕೆ ‘ಮೈನರ್’ ಎಂಬುದು ಸಾಬೀತಾಗಿರುವುದು ಪ್ರಕರಣಕ್ಕೆ ಹೊಸ ತಿರುವು […]

Continue Reading

ದ್ವಿತೀಯ ಪಿಯು ಫಲಿತಾಂಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಎಡವಟ್ಟಿನಿಂದ ವಿದ್ಯಾರ್ಥಿಗಳಿಗೆ 600ಕ್ಕೆ 630, 680 ಅಂಕ

ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಫಲಿತಾಂಶ ಪ್ರಕಟಿಸುವಾಗ ಅಧಿಕಾರಿಗಳ ಗಮನ ಎಲ್ಲಿತ್ತು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ದೋಷವನ್ನು ಒಪ್ಪಿಕೊಂಡು, ತಾಂತ್ರಿಕ ಸಮಸ್ಯೆಯಿಂದ ವ್ಯತ್ಯಯ ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದು, ತಪ್ಪಾಗಿ ಮುದ್ರಿತವಾಗಿರುವ ಅಂಕಪಟ್ಟಿಗಳಿಗೆ ಪರಿಷ್ಕೃತ ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಏಪ್ರಿಲ್ 9ರಂದು ಪ್ರಕಟವಾದ 2026ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ […]

Continue Reading

ಮಗಳೊಂದಿಗೆ ಅಮ್ಮನು ಪಿಯುಸಿ ಪಾಸ್..!

ಪತಿಯ ಪ್ರೋತ್ಸಾಹ, ಕಾಲೇಜಿನ ಉಪನ್ಯಾಸಕರ ಬೆಂಬಲದಿಂದ ತಾಯಿ, ಮಗಳು ಇಬ್ಬರೂ ಪರೀಕ್ಷೆಗೆ ಕುಳಿತರು. ಹಾಲ್ ಟಿಕೆಟ್​ ಬಂದಾಗ ಪರೀಕ್ಷಾ ಕೇಂದ್ರ ಮೊಂಟೆಪದವು ನೇತ್ರಾವತಿ ಅವರಿಗೆ ದೊರಕಿತು. ಸರ್ಕಾರಿ ಪದವಿಪೂರ್ವ ಕಾಲೇಜು ಮೊಂಟೆಪದವು ಮೂಲಕ ಪರೀಕ್ಷೆಗೆ ಹಾಜರಾಗಿದ್ದ ಇವರು ತನ್ನ ಪ್ರಥಮ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದು, 257 ಅಂಕಗಳನ್ನು ಪಡೆದಿರುತ್ತಾರೆ. ಮಗಳು ಹೇಮಶ್ರೀ ಆರ್​, ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರಥಮ […]

Continue Reading