ಶಿವಮೊಗ್ಗ | ರಾಜಕಾಲುವೆ ಒತ್ತುವರಿ ತೆರವು ಎಂಬ ಮಾಯಾಂಗನೆ…! ಮತ್ತದರ ಬೃಹನ್ನಾಟಕ..!!
ಆದರೆ ಈ ಸಂಬಂಧ ಇಲ್ಲಿವರೆಗೂ ಮಹಾನಗರ ಪಾಲಿಕೆ ಒತ್ತುವರಿ ಆಗಿರುವ ರಾಜಕಾಲುವೆ ತೆರವುಗೊಳಿಸದೇ ವಿಳಂಬ ಪ್ರಕ್ರಿಯೆ ನೆಹರು ರಸ್ತೆಯ ವರ್ತಕರಲ್ಲಿ ಆಕ್ರೋಶ ಹೆಚ್ಚಾಗಿದೆ . ರಾಜಕಾಲುವೆಯ ಒತ್ತುವರಿ ತೆರವಾದರೆ ಕನ್ಸರ್ವನ್ಸಿ ಪಾರ್ಕಿಂಗ್ ವ್ಯವಸ್ಥೆಗೆ ಚಾಲನೆ ಸಿಗಲಿದೆ. ಕನ್ಸರ್ವೆನ್ಸಿ ಪಾರ್ಕಿಂಗ್ ಆರಂಭವಾದರೆ ರಸ್ತೆಯ ಮೇಲೆ ವಾಹನಗಳ ಪಾರ್ಕಿಂಗ್ಗೆ ಇರುವ ಒತ್ತಡ ಕಡಿಮೆಯಾಗಲಿದೆ. ನೀರು ರಸ್ತೆಯ ವರ್ತಕರ ವಾಹನಗಳು ಮತ್ತು ಕೆಲಸಗಾರರ ವಾಹನಗಳು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಿಲ್ಲಿಸಿದರೆ ಅಂಗಡಿಗಳಿಗೆ ಬರುವ ಗ್ರಾಹಕರು ವಾಹನಗಳನ್ನು ನಿಲ್ಲಿಸಿ ಸುಗಮವಾಗಿ ವ್ಯಾಪಾರ ವಹಿವಾಟು ನಡೆಸುವ […]
Continue Readingಯುದ್ಧದ ಪರಿಣಾಮ ; ನಾಗರಿಕರಿಗೆ LPG ಸಿಲಿಂಡರ್ ದರ ಏರಿಕೆಯ ಬಿಸಿ
ಜನವರಿಯಿಂದ ಅಮೆರಿಕದಿಂದ ಎಲ್‌ಪಿಜಿ ಭಾರತಕ್ಕೆ ಬರಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 2025 ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026 ರ ಒಪ್ಪಂದ ವರ್ಷಕ್ಕೆ ಯುಎಸ್ ಗಲ್ಫ್ ಕರಾವಳಿಯಿಂದ ಸುಮಾರು 2.2 MTPA ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿವೆ.
Continue Readingಶಿವಮೊಗ್ಗ | ದೊಡ್ಡ ದಾನವಂದಿ ಶಾಲೆಯಲ್ಲಿ ಮಕ್ಕಳ ಸಂತೆ-ಗಣಿತ ಕಲಿಕೆಗೆ ಹೊಸ ದಾರಿ
ಈ ರೀತಿಯ ಚಟುವಟಿಕೆಗಳು ಕಲಿಕೆಯನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ ಬದುಕಿನ ಅನುಭವದೊಂದಿಗೆ ಜೋಡಿಸುತ್ತವೆ ಎಂದು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷೆ ಮಾಲಾ ಮಾತನಾಡಿ, ಶಾಲೆಯಲ್ಲಿ ಈ ರೀತಿಯ ಸಂತೆ ಆಯೋಜಿಸಿರುವುದು ಬಹಳ ಸಂತೋಷ ತಂದಿದೆ. ಮಕ್ಕಳಿಗೆ ವಿಶೇಷವಾಗಿ ಗಣಿತ ವಿಷಯವನ್ನು ಸರಳವಾಗಿ ಮತ್ತು ಆಸಕ್ತಿಯಿಂದ ಕಲಿಯಲು ಇದು ಉತ್ತಮ ಅವಕಾಶವಾಗಿದೆ. ತಮ್ಮ ಸ್ವಂತ ಅನುಭವದ ಮೂಲಕ ಮಕ್ಕಳು ಕಲಿಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಹಿಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ನಡೆಯುತ್ತಿದ್ದ […]
Continue Readingಶಿವಮೊಗ್ಗ | ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು
ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ, ಸರಿಯಾದ ಉತ್ತರ ನೀಡಿದ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು.ಇದೇ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆ ಹೊಂದಿರುವ ಶಿಕ್ಷಕರಾದ ವಿಜಯಕುಮಾರ್ ಅವರಿಗೆ ಶಾಲಾ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ನೀಡಲಾಯಿತು. ಹಲವು ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು ಮಕ್ಕಳ ಸ್ನೇಹಿಯಾಗಿ, ಹಿರಿಯ ಅಣ್ಣನಂತೆ ನಡೆದು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಶ್ರಮಿಸಿದ್ದಾರೆ ಎಂದು ಶಿಕ್ಷಕರು ಹಾಗೂ ಪೋಷಕರು ಕೊಂಡಾಡಿದರು. ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸದಸ್ಯರಾದ […]
Continue Reading‘ನವ ಕರ್ನಾಟಕದ ನಿರ್ಮಾಣ’ಕ್ಕೆ ಹೊಸ ಶಕ್ತಿ ತುಂಬಿದ ಬಜೆಟ್ : ಸಚಿವ ಮಧು ಬಂಗಾರಪ್ಪ
ಶೈಕ್ಷಣಿಕ ಮೂಲಸೌಕರ್ಯ, ಬೋಧಕ ಸಿಬ್ಬಂದಿಯ ಬಲವರ್ಧನೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಯೋಜನೆಗಳನ್ನು ಘೋಷಿಸುವ ಮೂಲಕ ಸರ್ಕಾರವು ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ.ಅದೇ ರೀತಿ, ನನ್ನ ತವರು ಜಿಲ್ಲೆಯಾದ ಶಿವಮೊಗ್ಗದ ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಗತಿಗೆ ನೀಡಿರುವ ವಿಶೇಷ ಕೊಡುಗೆಗಳು ಹಾಗೂ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗಾಗಿ ಘೋಷಿಸಲಾಗಿರುವ ಕ್ರಾಂತಿಕಾರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನರ ಹಾಗೂ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ . […]
Continue ReadingUPSC ಪರೀಕ್ಷೆ ಫಲಿತಾಂಶ ಪ್ರಕಟ : ದೇಶಕ್ಕೇ ನಂ.1 ಅನುಜ್ ಅಗ್ನಿಹೋತ್ರಿ ; ಕಿರಣ್ಕಮಾತೆ ಕರ್ನಾಟಕಕ್ಕೆ ಫಸ್ಟ್
ಅನುಜ್ ಅಗ್ನಿಹೋತ್ರಿ ದೇಶಕ್ಕೇ ನಂ.1: ಆಲ್ ಇಂಡಿಯಾ ರ‍್ಯಾಂಕಿಂಗ್ ನಲ್ಲಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಅವರು ದೇಶಕ್ಕೇ ನಂ.1 ಸ್ಥಾನ ಪಡೆದಿದ್ದಾರೆ. ಎಂ.ರಾಜೇಶ್ವರಿ ಸುವೆ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದಿದ್ದಾರೆ.ಇನ್ನೂ, 348 ಅಭ್ಯರ್ಥಿಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇರಿಸಲಾಗಿದೆ. 1,087 ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು, ನೇಮಕಾತಿಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಸ್ಪಷ್ಟೀಕರಣ ಬೇಕಾದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಖುದ್ದಾಗಿ […]
Continue Readingಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಪರಮ ಗುರಿ ; ಬಿಜೆಪಿ ಟ್ವೀಟ್
ಅಂತೆಯೇ ‘ರಾಜ್ಯದ ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡ ಶಿಕ್ಷಕರಿಗೆ ನೀಡುವ ಒಂದು ಸಾವಿರ ನೀಡಲೂ ಸರ್ಕಾರದ ಬಳಿ ಹಣವಿಲ್ಲವೇ? ಕಳೆದ 5 ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರ ಜೀವನ ಬೀದಿಗೆ ಬಂದಿದೆ. ಹಬ್ಬ-ಹರಿದಿನಗಳು ಸಾಲದ ಸುಳಿಯಲ್ಲಿ ಕಳೆದುಹೋಗಿವೆ. ವರ್ಗಾವಣೆ, ಕಮಿಷನ್ ದಂಧೆಯಲ್ಲಿ ಮುಳುಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಿಎಂ ಅವರೇ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ […]
Continue Readingಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ : ಡಾ. ಧನಂಜಯ ಸರ್ಜಿ
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲ ಪಡೆಯುವ ಅವಕಾಶವಿದ್ದರೂ, ಮಿತವ್ಯಯ ಮತ್ತು ಜವಾಬ್ದಾರಿಯುತ ಬಜೆಟ್ ಮಂಡಿಸುವ ಮೂಲಕ ಹಣಕಾಸು ಶಿಸ್ತು ಕಾಪಾಡಲಾಗಿತ್ತು, 2026–27ರ ಬಜೆಟ್‌ನಲ್ಲಿ ₹22,957 ಕೋಟಿ ಆದಾಯ ಕೊರತೆ ಇದೆ. ದಿನನಿತ್ಯದ ಖರ್ಚಿಗೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು. ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ₹51,034 ಕೋಟಿ ಮೀಸಲಿಡಲಾಗಿದ್ದು, ರಾಜ್ಯದ ಒಟ್ಟು ಕಂದಾಯ ಸ್ವೀಕೃತಿಯ 17% ಹಣ ಕೇವಲ ಈ ಯೋಜನೆಗಳಿಗೆ […]
Continue Reading

