ರಸ್ತೆಯಲ್ಲಿ ಪಾನ್ ಉಗುಳಿದ ಭಾರತೀಯ ಮೂಲದ ಇಬ್ಬರಿಗೆ ತಲಾ 1.7 ಲಕ್ಷ ದಂಡ ವಿಧಿಸಿದ ಲಂಡನ್ ನ್ಯಾಯಾಲಯ

ಇದೇ ರೀತಿಯ ಪ್ರತ್ಯೇಕ ಪ್ರಕರಣದಲ್ಲಿ, ರುಯಿಸ್ಲಿಪ್‌ನಲ್ಲಿ ವಾಸಿ ಹಿತೇಶ್ ಪಟೇಲ್ (32) ಅವರಿಗೂ ನ್ಯಾಯಾಲಯವು 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್‌ನ ರಸ್ತೆಯೊಂದರಲ್ಲಿ ಪಾನ್ ಉಗುಳಿದ್ದರು. ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿದೆ. ಪಾನ್ ಉಗುಳುವುದರಿಂದ ಉಂಟಾಗುವ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಯೂರೋಗಳಿಗಿಂತ (32,08,920 ರೂ.) ಹೆಚ್ಚು ಖರ್ಚು ಮಾಡಲಾಗುತ್ತದೆ. ಯಂತ್ರಗಳು ಸಹ ಆ ಕಲೆಯನ್ನು ಸಂಪೂರ್ಣವಾಗಿ […]

Continue Reading

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತುಕತೆ ಯಶಸ್ವಿ ; ಹಾರ್ಮುಜ್ ಜಲಸಂಧಿ ಡಾಟಲು ಇರಾನ್ ಸಮ್ಮತಿ

ಮುಂಬೈ ತಲುಪಿದ ಹಡಗು: ಇಸ್ರೇಲ್-ಇರಾನ್ ಯುದ್ಧ ಆರಂಭವಾದ ನಂತರ, ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬೈ ಬಂದರು ತಲುಪಿದ ಮೊದಲ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ‘ಶೆನ್‌ಲಾಂಗ್ ಸೂಯೆಜ್‌ಮ್ಯಾಕ್ಸ್’ ಪಾತ್ರವಾಗಿದೆ. ಭಾರತಕ್ಕೆ ಬೇಕಾದ ಕಚ್ಚಾ ತೈಲ ಮತ್ತು ಅಡುಗೆ ಅನಿಲದ (LPG) ಸುಮಾರು ಅರ್ಧದಷ್ಟು ಪಾಲು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುವ ಮತ್ತು ಇಂಧನ ಅಭಾವ ಸೃಷ್ಟಿಯಾಗುವ ಭೀತಿಯಿತ್ತು.

Continue Reading

ಇರಾನ್​ | ಅಲಿ ಖಮೇನಿ ಪುತ್ರ ಮೊಜ್ತಬಾ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ಇಸ್ರೇಲ್ ನಿಂದ ಭೀಕರ ದಾಳಿ

ಇರಾನ್‌ನಲ್ಲಿ ಸರ್ವೋಚ್ಚ ನಾಯಕನ ಆಯ್ಕೆಯ ನಂತರ, ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಎಕ್ಸ್-ಪೋಸ್ಟ್ ಮೂಲಕ ಕಠಿಣ ಎಚ್ಚರಿಕೆ ನೀಡಿದರು. ಸರ್ವೋಚ್ಚ ನಾಯಕನ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ ‘ಹತ್ಯೆಯೇ ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಕಾಟ್ಜ್ X ನಲ್ಲಿ ಹೇಳಿಕೆ ನೀಡಿದ್ದು, ‘ಇಸ್ರೇಲ್ ಅನ್ನು ನಾಶಮಾಡಲು ಪ್ರಯತ್ನಿಸುವುದು, ಅಮೆರಿಕ ಮತ್ತು ಇತರ ದೇಶಗಳಿಗೆ ಬೆದರಿಕೆ ಒಡ್ಡುವ ಅಥವಾ ಇರಾನಿನ ಜನರನ್ನು ದಮನಿಸುವ ಕಾರ್ಯವನ್ನು ಮುಂದುವರಿಸುವ ಇರಾನ್‌ನ ಭಯೋತ್ಪಾದಕ ಸರ್ಕಾರವು ಯಾರನ್ನೇ ತನ್ನ ಮುಂದಿನ ಸರ್ವೋಚ್ಛ […]

Continue Reading

ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್ ; ತೈಲ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ

ಅಷ್ಟೇ ಅಲ್ಲದೆ, ಈ ಜಲಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಸುಟ್ಟು ಭಸ್ಮ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇರಾನ್ ಮತ್ತು ಒಮಾನ್ ದೇಶಗಳನ್ನು ಬೇರ್ಪಡಿಸುವ ಈ ಜಲಸಂಧಿಯ ಸುತ್ತ ಕನಿಷ್ಠ ಐದು ಟ್ಯಾಂಕರ್‌ಗಳು ಹಾನಿಗೊಳಗಾಗಿವೆ, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 150 ಹಡಗುಗಳು ಮಧ್ಯದಾರಿಯಲ್ಲೇ ಸಿಲುಕಿಕೊಂಡಿವೆ ಎಂದು ಅಲ್‌-ಜಝೀರಾ ವರದಿ ಮಾಡಿದೆ. ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ಮುನ್ಸೂಚನೆಯಿಂದಾಗಿ ಉಂಟಾದ ಉದ್ವಿಗ್ನತೆಯ ಮಧ್ಯೆ, ಶುಕ್ರವಾರ […]

Continue Reading

ನ್ಯೂಯಾರ್ಕ್ : ಗುಂಡಿನ ದಾಳಿಯಿಂದ ಭಾರತದ ವಿದ್ಯಾರ್ಥಿನಿ ಸವಿತಾ ಶಾನ್ ಸಾವು

ವಿದ್ಯಾರ್ಥಿನಿಯ ಸಾವನ್ನು ಟೆಕ್ಸಾಸ್ ವಿವಿಯ ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದು, ಇಮೇಲ್ ಮೂಲಕ ತಮ್ಮ ಕ್ಯಾಂಪಸ್ ಸಮುದಾಯಕ್ಕೆ ಮಾಹಿತಿ ನೀಡಿದ್ದಾರೆ. “ಆಕೆ ಜಗತ್ತಿನಲ್ಲಿ ಬದಲಾವಣೆ ತರಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ” ಎಂದು ಅವರು ಉಲ್ಲೇಖಿಸಿದ್ದಾರೆ. “ಪೋಷಕರಿಗೆ ಪ್ರೀತಿಯ ಮಗುವಾಗಿದ್ದಳು ಮತ್ತು ಹಲವರಿಗೆ ನಂಬಿಕಸ್ತ ಸ್ನೇಹಿತೆಯಾಗಿದ್ದಳು” ಎಂದು ಸ್ಮರಿಸಿದ್ದಾರೆ. “ಆಘಾತಕಾರಿ ಘಟನೆಯಿಂದ ಅತೀವ ಬೇಸರ ಉಂಟಾಗಿದೆ. ನಾವು ಆಕೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಗುಂಡಿನ ದಾಳಿಯನ್ನು ವಿವರಿಸಿದ ಆಸ್ಟಿನ್ ಪೊಲೀಸ್ ಮುಖ್ಯಸ್ಥೆ ಲಿಸಾ ಡೇವಿಸ್, “ಭಾನುವಾರ ಬೆಳಗ್ಗೆ […]

Continue Reading

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವು?

ಇಸ್ರೇಲ್ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮೇಲೆ ಅಮೆರಿಕ ವೈಮಾನಿಕ ಪಡೆಗಳು ದಾಳಿ ನಡೆಸಿದ್ದು, ಇದು ಪ್ರಮುಖ ಮಿಲಿಟರಿ ಕಾರ್ಯಾಚರಣೆಯಾಗಿದೆ. ಅಮೆರಿಕ ಸೇನಾಪಡೆ ಇರಾನ್ ಮೇಲಿನ ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ.ಇರಾನ್ ದುರಾಡಳಿತವನ್ನು ಕೊನೆಗಾಣಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಅಲ್ಲದೇ ಇರಾನ್ ನ ಮಿಸೈಲ್ ಇಂಡಸ್ಟ್ರಿ ಹಾಗೂ ಪರಮಾಣು ನೆಲೆಯನ್ನು ನಿಷ್ಕ್ರಿಯಗೊಳಿಸುವ ಉದ್ದೇಶ ಹೊಂದಿರುವುದಾಗಿ ಟ್ರಂಪ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Continue Reading

ಭಾರತ-ಇಸ್ರೇಲ್ ನಡುವೆ ಹಲವು ಒಪ್ಪಂದಗಳಿಗೆ ಸಹಿ ; ಮೋದಿ ಇಸ್ರೇಲ್ ಭೇಟಿಯಿಂದ ಭಾರತಕ್ಕೆ ವಿವಿಧ ಸ್ತರಗಳಲ್ಲಿ ಲಾಭದ ನಿರೀಕ್ಷೆ..!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹು ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಹಲವು ವಿಚಾರಗಳ ವಿನಿಮಯ ಮಾಡಿದ್ದಾರೆ. ಬಹಳ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವನ್ನೂ ಚರ್ಚಿಸಿದ್ದಾರೆ. ಈ ಭೇಟಿ ಬಳಿಕ ಇಬ್ಬರೂ ಕೂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ‘ಪರಸ್ಪರ ಲಾಭವಾಗುವಂತಹ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಕಾರ್ಯವಹಿಸುತ್ತೇವೆ’ ಎಂದಿದ್ದಾರೆ.

Continue Reading

ನೇಪಾಳ | ತ್ರಿಶೂಲಿ ನದಿಗೆ ಬಿದ್ದ ಬಸ್ ; ಕನಿಷ್ಠ 18 ಸಾವು ಹಲವರು ಗಂಭೀರ

ಗಾಯಗೊಂಡ ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನ್ಯೂಜಿಲೆಂಡ್‌ನ ಪುರುಷ ಪ್ರಯಾಣಿಕರೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನಿನ ಮಹಿಳೆ ಮತ್ತು ಡಚ್ ಪ್ರಜೆಯೊಬ್ಬರು ಸೇರಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅತಿ ವೇಗದ ಚಾಲನೆಯೇ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್‌ನಲ್ಲಿ ಕೆಲವು ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 40 ರಿಂದ 45 ಪ್ರಯಾಣಿಕರಿದ್ದರು. ಬಸ್ ಪೃಥ್ವಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. […]

Continue Reading