ಶಿವಮೊಗ್ಗ | ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣವೇ ನನ್ನ ಏಕೈಕ ಪ್ರಮುಖ ಗುರಿ : ಸಚಿವ ಮಧು ಬಂಗಾರಪ್ಪ

ಬೇಸಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು. ಅಲ್ಲದೆ, ರಾಜ್ಯದಲ್ಲಿ ಇಂಧನ ಅಥವಾ ಅನಿಲದ ಕೊರತೆಯಿದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲದೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದರು. […]

Continue Reading

ಕೆ.ಪಿ.ಎಸ್.ಸಿ ಅಕ್ರಮ ಕೂಲಂಕುಷ ತನಿಖೆ ನಡೆಸಬೇಕು : ಡಾ ಧನಂಜಯ ಸರ್ಜಿ ಒತ್ತಾಯ

ನಾಳೆ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕಾದ ರಾಜ್ಯದ ಜನರ ಭವಿಷ್ಯವನ್ನು ನಿರ್ಧರಿಸಬಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿಯನ್ನು ಮರೆತ ಕೆ.ಪಿ.ಎಸ್.ಸಿ ಒಂದೆಡೆಯಾದರೇ, ಕೆ.ಪಿಎಸ್.ಸಿ.ಯನ್ನು ಶುದ್ಧಿಕರಿಸುವಲ್ಲಿ ಸರ್ಕಾರದ ಬದ್ಧತೆ ಇಲ್ಲದಿರುವುದು ಎದ್ದು ಕಾಣುತ್ತಿದೆ. ಮುಖ್ಯ ಪರೀಕ್ಷೆಯ ಫಲಿತಾಂಶವು ನೈಜವಾಗಿದ್ದಲ್ಲಿ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಮತ್ತು ಅವರ ಪರೀಕ್ಷಾ ಮಾಧ್ಯಮ ಬಹಿರಂಗ ಮಾಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳು ಮತ್ತು ಅಕಾಂಕ್ಷಿಗಳಿಂದ ವ್ಯಕ್ತವಾಗಿದೆ. ಹಲವಾರು ಭ್ರಷ್ಟಚಾರದ ಮಸಿ ಮೆತ್ತಿಕೊಂಡಿರುವ ಕೆ.ಪಿ.ಎಸ್.ಸಿಗೆ ಮತ್ತೊಂದು ಅಕ್ರಮದ ಆರೋಪ […]

Continue Reading

ಸರ್ಕಾರಿ ಜಮೀನು ಕಾಂಗ್ರೆಸ್ ಕಚೇರಿಗಳಿಗೆ? : ಡಿ.ಎಸ್. ಅರುಣ್ ಗಂಭೀರ ಆರೋಪ

ಜನರ ಆಸ್ತಿಯನ್ನು ಪಕ್ಷದ ಹಿತಾಸಕ್ತಿಗಾಗಿ ಬಳಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಹಣಕಾಸು ಇಲಾಖೆಯ ಅಭಿಪ್ರಾಯ ಪಡೆಯದೇ ಮುಂದುವರಿದಿರುವುದು ಗಂಭೀರ ಆಡಳಿತಾತ್ಮಕ ನಿರ್ಲಕ್ಷ್ಯವಾಗಿದೆ ಎಂದು ಡಿ.ಎಸ್. ಅರುಣ್ ಅವರು ಹೇಳಿದರು. ಸರ್ಕಾರದಲ್ಲೇ ಇರುವ ವ್ಯಕ್ತಿಗಳು ಕಾಂಗ್ರೆಸ್ ಟ್ರಸ್ಟ್‌ನಲ್ಲೂ ಇದ್ದು, ಅದೇ ಸರ್ಕಾರದ ಸಚಿವ ಸಂಪುಟದಲ್ಲಿ ಜಮೀನು ಮಂಜೂರಾತಿಗೆ ಅನುಮೋದನೆ ಪಡೆಯುತ್ತಿರುವುದು ಸಚಿವ ಸಂಪುಟದ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು. ಇದಲ್ಲದೆ, ಇಂತಹ ಮಂಜೂರಾತಿಗೆ ಮುನ್ನ ಯಾವುದೇ ಸಾರ್ವಜನಿಕ ಟೆಂಡರ್ ಅಥವಾ ಮುಕ್ತ […]

Continue Reading

ರಾಜ್ಯದ ಜನರ ಆರೋಗ್ಯದ ಜತೆಗೆ ಸರ್ಕಾರ ಚೆಲ್ಲಾಟ : ಡಾ.ಧನಂಜಯ ಸರ್ಜಿ ಆರೋಪ

ಔಷಧಗಳನ್ನು ಪೂರೈಸಬೇಕಾದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಸಂಪೂರ್ಣವಾಗಿ ಹಳಿ ತಪ್ಪಿದೆ. ನಾಳೆಯಿಂದ ಎಲ್ಲಾ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ ಈ ರೀತಿ ಜನರ ಆರೋಗ್ಯದ ಜತೆಗೆ ಸರ್ಕಾರ ಆಟವಾಡುತ್ತಿರುವುದು ಎಷ್ಟು ಸರಿ ಎಂದು ಕೇಳಿದರು. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 14 ಕೋಟಿ ಓ.ಪಿ.ಡಿ ಮತ್ತು ಐ.ಪಿ.ಡಿ ರೋಗಿಗಳ ತಪಾಸಣೆ ಆಗಿದೆ, 2024-25ರಲ್ಲಿ 15 ಕೋಟಿ ರೋಗಿಗಳ ತಪಾಸಣೆ ಆಗಿದೆ , 2025-26 ರಲ್ಲಿ 15 ರಿಂದ 16 ಕೋಟಿ ಅಂದಾಜಿಸಲಾಗಿದೆ, ಹಿಂದಿನ ವರ್ಷ ಮತ್ತು […]

Continue Reading

ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದಿಂದ LPG ಸಿಲಿಂಡರ್ ದರ ಏರಿಕೆಯ ಉಡುಗೊರೆ : ಡಿಕೆಶಿ ವ್ಯಂಗ್ಯ

ಕೇಂದ್ರ ಸರ್ಕಾರಕ್ಕೆ ಈ ದೇಶದ ‘ಸಹೋದರಿಯರ’ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಈ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Continue Reading

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ; ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ, ಸಚಿವ ಮಧು ಬಂಗಾರಪ್ಪ ಸೇರಿ 31 ಮಂದಿಗೆ ಜವಾಬ್ದಾರಿ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ವೈಎಸ್ ಮೇಟಿ ನಿಧನದ ಬಳಿಕ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ತೆರವಾಗಿದ್ದವು. ಮುಂದಿನ 2-3 ತಿಂಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆ ಉಸ್ತುವಾರಿ ಸಮಿತಿ ನೇಮಕ ಮಾಡಲಾಗಿದೆ. ಈ ಸಮಿತಿಯು ಅಭ್ಯರ್ಥಿಗಳ ಆಯ್ಕೆ, ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರ ರೂಪಿಸುವ ಬೇಕಿದೆ.ಈ ಬಗ್ಗೆ ಆದೇಶ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ” ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, […]

Continue Reading

ಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಪರಮ ಗುರಿ ; ಬಿಜೆಪಿ ಟ್ವೀಟ್

ಅಂತೆಯೇ ‘ರಾಜ್ಯದ ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡ ಶಿಕ್ಷಕರಿಗೆ ನೀಡುವ ಒಂದು ಸಾವಿರ ನೀಡಲೂ ಸರ್ಕಾರದ ಬಳಿ ಹಣವಿಲ್ಲವೇ? ಕಳೆದ 5 ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರ ಜೀವನ ಬೀದಿಗೆ ಬಂದಿದೆ. ಹಬ್ಬ-ಹರಿದಿನಗಳು ಸಾಲದ ಸುಳಿಯಲ್ಲಿ ಕಳೆದುಹೋಗಿವೆ. ವರ್ಗಾವಣೆ, ಕಮಿಷನ್ ದಂಧೆಯಲ್ಲಿ ಮುಳುಗಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಿಎಂ ಅವರೇ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ […]

Continue Reading

ಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ : ಡಾ. ಧನಂಜಯ ಸರ್ಜಿ

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲ ಪಡೆಯುವ ಅವಕಾಶವಿದ್ದರೂ, ಮಿತವ್ಯಯ ಮತ್ತು ಜವಾಬ್ದಾರಿಯುತ ಬಜೆಟ್ ಮಂಡಿಸುವ ಮೂಲಕ ಹಣಕಾಸು ಶಿಸ್ತು ಕಾಪಾಡಲಾಗಿತ್ತು, 2026–27ರ ಬಜೆಟ್‌ನಲ್ಲಿ ₹22,957 ಕೋಟಿ ಆದಾಯ ಕೊರತೆ ಇದೆ. ದಿನನಿತ್ಯದ ಖರ್ಚಿಗೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು. ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ₹51,034 ಕೋಟಿ ಮೀಸಲಿಡಲಾಗಿದ್ದು, ರಾಜ್ಯದ ಒಟ್ಟು ಕಂದಾಯ ಸ್ವೀಕೃತಿಯ 17% ಹಣ ಕೇವಲ ಈ ಯೋಜನೆಗಳಿಗೆ […]

Continue Reading

ದೇಶದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ್ದು ವಜುಬಾಯಿ ವಾಲಾ ; ಸಿಎಂ ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪೈಕಿ ಗುಜರಾತ್‌ನ ಮಾಜಿ ಹಣಕಾಸು ಸಚಿವ (ಕರ್ನಾಟಕದ ಮಾಜಿ ರಾಜ್ಯಪಾಲ) ವಜುಭಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 17 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ಸಿದ್ದರಾಮಯ್ಯನವರದ್ದೇ ಅತಿ ದೊಡ್ಡ ದಾಖಲೆಯಾಗಿದೆ. ಕೆ ರೋಸಯ್ಯ: 16 ಬಜೆಟ್‌ಗಳು – ಅವಿಭಜಿತ […]

Continue Reading