ಆಟವಾಡುತ್ತಾ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ ; ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಆಪದ್ಬಾಂಧವ

ಗಾಬರಿಯಿಂದ ಮನೆಯೊಳಗೆಲ್ಲಾ ಹುಡುಕಿದರೂ ಮಗು ಸಿಗಲಿಲ್ಲ. ಕೊನೆಗೆ ಅನುಮಾನಗೊಂಡು ಮನೆಯ ಹಿಂದಿನ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ, ಬಾವಿಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಪುಟ್ಟ ಭುವಿ ಬಾವಿಯಲ್ಲಿದ್ದ ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀರಿನ ಮೇಲೆ ಒದ್ದಾಡುತ್ತಾ ಅಳುತ್ತಿದ್ದಳು.ಅಜ್ಜಿಯ ಕೂಗಾಟ ಕೇಳಿ ತಕ್ಷಣವೇ ಅಕ್ಕಪಕ್ಕದವರು ಓಡಿಬಂದಿದ್ದಾರೆ. ಈ ಆತಂಕದ ಸುದ್ದಿ ಹತ್ತಿರದಲ್ಲೇ ವಾಸವಿದ್ದ ಪಯ್ಯು ಚೌಟಿ ಅವರಿಗೂ ತಲುಪಿದೆ. ಆಗಷ್ಟೇ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಅವರು, ವಿಷಯ ತಿಳಿದ ಕೂಡಲೇ ಒಂದು […]

Continue Reading

ಮಗನ ಬೈಕ್ ಕ್ರೇಜ್, ಪಾಲಕರಿಗೆ ಶಾಕ್ ; ₹54 ಸಾವಿರ ದಂಡದ ಬಿಸಿ

“ನಮಗೆ ಲೈಸೆನ್ಸ್ ಇಲ್ಲ ಸರ್” ಎಂಬ ಆ ಬಾಲಕರ ಮುಗ್ಧ ಮಾತುಗಳು ಅವರ ಪೋಷಕರ ಪಾಲಿಗೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದವು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೈಕ್ ಮಾಲೀಕರನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತಂದರು. ನ್ಯಾಯಾಲಯದ ವಿಚಾರಣೆಯ ವೇಳೆ ಪೋಷಕರ ವಾದಗಳು ಫಲ ನೀಡಲಿಲ್ಲ. ಅಪ್ರಾಪ್ತರಿಗೆ ವಾಹನ ನೀಡಿದ ಇಬ್ಬರು ಪೋಷಕರಿಗೆ ಕ್ರಮವಾಗಿ 25,500 ರೂ. ಹಾಗೂ 28,500 ರೂ. ದಂಡ ವಿಧಿಸಿ ಜೆ.ಎಂ.ಎಫ್.ಸಿ ನ್ಯಾಯಾಲಯ ಕಠಿಣ ಆದೇಶ […]

Continue Reading

ವೈದ್ಯಕೀಯ ಸ್ನಾತಕೋತ್ತರ ಪದವಿ ; ಡಾ. ವಿಶಾಖ ಹೆಗಡೆಗೆ 6ನೇ ರ‌್ಯಾಂಕ್

ಸದ್ಯ ಡಾ. ವಿಶಾಖ ಅವರು ಬೆಳಗಾವಿಯ ಜವಾಹರ್‌ಲಾಲ್ ನೆಹರು ವೈದ್ಯಕೀಯ ಕಾಲೇಜು ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನೆಲೆಸಿರುವ ಶಿರಸಿಯ ಗಾಳಿಮನೆ ಗ್ರಾಮದ ಡಾ. ಜಿ.ಎಸ್. ಮಂಜುನಾಥ್ ಹೆಗಡೆ ಹಾಗೂ ನಿರುಪಮ ಮಂಜುನಾಥ್ ದಂಪತಿಯ ಪುತ್ರಿ .

Continue Reading

ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

ಒಟ್ಟು 20 ಬೋಗಿಗಳು (1 ಪ್ರಥಮ ದರ್ಜೆ/AC 2-ಟೈರ್, 2 AC 3-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದರ್ಜೆ ಮತ್ತು 2 ಎಸ್‌ಎಲ್‌ಆರ್) ಇರಲಿದೆ. ಈಗಾಗಲೇ ಇರುವ ಇರುವ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಇನ್ನು ಮಾರ್ಚ್​​ ಒಂದರಿಂದ ರೈಲು ಸಂಖ್ಯೆ 16581 ಮಧ್ಯರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 09:00ಕ್ಕೆ ತಾಳಗುಪ್ಪ ತಲುಪಲಿದೆ. ಇನ್ನು ಅದೇ ದಿನ ಅಂದರೆ ಮಾರ್ಚ್ 1 ರಂದು ರೈಲು ಸಂಖ್ಯೆ 16582 ( ರಾತ್ರಿ 10:00ಕ್ಕೆ ತಾಳಗುಪ್ಪದಿಂದ ಹೊರಟು […]

Continue Reading

ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಕೇಂದ್ರ ಅರಣ್ಯ ಮಂತ್ರಾಲಯ ಒಪ್ಪಿಗೆ ನೀಡಿಲ್ಲ : ಕೇಂದ್ರ ಅರಣ್ಯ-ಪರಿಸರ ಸಚಿವ ಯಾದವ್ ಸ್ಪಷ್ಟನೆ

ಈ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರು “ಫೆಡರಲ್ ವ್ಯವಸ್ಥೆಯಲ್ಲಿ ಕೇಂಧ್ರ-ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಪಶ್ಚಿಮ ಘಟ್ಟದ ನದೀ ಕಣಿವೆಗಳ ಉಳಿವಿಗೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಬಾರದು. ಭಾರೀ ಭೂಕುಸಿತ, ಜಲ ಸಂಕಷ್ಟದ ಇಂದಿನ ಸಂದರ್ಭದಲ್ಲಿ. ಸಹ್ಯಾದ್ರಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಶರಾವತಿ, ಕಾವೇರಿ, ಬೇಡ್ತಿ-ಅಘನಾಶಿನಿ, ಕಾಳಿ ಕಣಿವೆಗಳ ಅರಣ್ಯ, ಜೀವವೈವಿಧ್ಯ ಅತಿ ಅಮೂಲ್ಯ. ಎಂದು ಅಭಿಪ್ರಾಯ ಪಟ್ಟರು. ಪಶ್ಚಿಮ ಘಟ್ಟ ಉಳಿಸಿ ನಿಯೋಗದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕಾ ಸಚಿವ ಮಂಕಾಳು […]

Continue Reading

ಶಿರಸಿ | ಉಪನ್ಯಾಸಕನ ಮಹತ್ವದ ಸಾಧನೆ ; 1.25 ಕೋಟಿ ರೂ. ಅನುದಾನದ ಸಂಶೋಧನಾ ಯೋಜನೆಗೆ, ರಾಜ್ಯ ಸರ್ಕಾರ ಒಪ್ಪಿಗೆ

ವೆಂಕಟೇಶ್ ಬಡಿಗೇರ ಅವರು ‘ಫೋಟೋನಿಕ್ಸ್ ಸೆನ್ಸಾರ್’ (Photonics Sensor) ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದರು. ಇವರು ರೂಪಿಸಿದ ತಂತ್ರಜ್ಞಾನದಿಂದ ಮಲೇರಿಯಾ ರೋಗಕ್ಕೆ ಕಾರಣವಾಗುವ ‘ಪ್ಲಾಸ್ಮೋಡಿಯಂ ಪ್ಯಾರಾಸೈಟ್’ ಹಾಗೂ ಅಪಾಯಕಾರಿ ‘ಕ್ಯಾನ್ಸರ್ ಕೋಶ’ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ರಾಜ್ಯ ಮಟ್ಟದ ಗುರುತಿಸುವಿಕೆ: ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಡಿಯಲ್ಲಿ ಬರುವ ‘ಕರ್ನಾಟಕ ಇನ್ನೋವೇಶನ್ ಆಂಡ್ ಸೊಸೈಟಿ’ (KITS), ಈ ಯೋಜನೆಯ ಮಹತ್ವವನ್ನು ಅರಿತು ಇದನ್ನು ‘ಇನ್ನೋವೇಶನ್ ಲ್ಯಾಬ್’ ಎಂದು ಪರಿಗಣಿಸಿದೆ. ಅಲ್ಲದೆ, ಈ ಸಂಶೋಧನೆಗೆ […]

Continue Reading

ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ ; ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಮಂದಿ ಪೊಲೀಸ್ ವಶಕ್ಕೆ

ಇದೇ ವಿಚಾರವಾಗಿ ಮಹೇಶ್ ನಾಯ್ಕ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದ ಕಾರಣ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರನಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್‌ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್‌ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಉತ್ತರ ಕನ್ನಡ […]

Continue Reading

ಕಾರವಾರ | ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು

ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಬದುಕನ್ನು […]

Continue Reading