ಶಿವಮೊಗ್ಗ | ಅಜ್ಜಿ ರಕ್ಷಿಸಲು ಹೋಗಿ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ ಬಾಲಕ

ಅಜ್ಜಿ ಪಾರಾದರೂ, ಈ ಪ್ರಯತ್ನದಲ್ಲಿ ಹರೀಶ್ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟಿಟಿ ವಾಹನದ ಚಕ್ರಗಳು ಆತನ ಎರಡೂ ಕಾಲುಗಳ ಮೇಲೆ ಹಾದುಹೋಗಿವೆ. ಪರಿಣಾಮವಾಗಿ, ಬಾಲಕನ ಕಾಲುಗಳು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಸ್ಥಿತಿ ಗಂಭೀರವಾಗಿದೆ. ತಕ್ಷಣ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯಾಗಿದೆ.

Continue Reading

ಆಸ್ಟ್ರೇಲಿಯಾ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್​ ಮಿಡಿಯಾ​ ಬ್ಯಾನ್​

ಏನು ಹೇಳುತ್ತೆ ಹೊಸ ಕಾನೂನು: ಆಸ್ಟ್ರೇಲಿಯಾದ ಈ ಕಾನೂನಿನ ಅರ್ಥ 16 ವರ್ಷದೊಳಗಿನ ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹದಿಹರೆಯದವರ ಖಾತೆಗಳನ್ನು ಡಿಲಿಟ್​ ಮಾಡಲು ಆದೇಶಿಸಲಾಗಿದೆ. ಹಾಗೆ ಮಾಡದ ಕಂಪನಿಗಳು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಆಸ್ಟ್ರೇಲಿಯಾದ ನಿರ್ಧಾರದ ನಂತರ 16 ವರ್ಷದೊಳಗಿನ ಹದಿಹರೆಯದವರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಲಾಗುವುದು. ಯಾರಾದರೂ ಹಾಗೆ ಮಾಡುವುದು ಕಂಡುಬಂದರೆ ಸಾಮಾಜಿಕ ಮಾಧ್ಯಮ […]

Continue Reading

ಬೆಂಗಳೂರು | ಅಂತರಾಷ್ಟ್ರೀಯ ಭ್ರಷ್ಟಾಚಾರ ಮುಕ್ತ ದಿನ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಿಂದ ಸನ್ಮಾನ

ಇವರ ಜೊತೆ ಸಿ. ಆರ್. ಭಾಸ್ಕರ್, ಸಮಾಜಮುಖಿ ಕಾನೂನು ಕ್ಷೇತ್ರದಲ್ಲಿ ಹೆಸರಾಗಿರುವ ವಕೀಲರು, ಹಾಗು ಸುಬ್ರಹ್ಮಣ್ಯ ಎಸ್. ಹಂಡಿಗೆ, ಥರ್ಡ್ ಐ ನ್ಯೂಸ್ ಚಾನೆಲ್‌ನ ಸಂಪಾದಕರು ಸಹ ಪೌರ ಜಾಗೃತಿ ಹಾಗೂ ಉತ್ತರದಾಯಕ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಯಿಗಾಗಿ ಸನ್ಮಾನಿತರಾದರು. ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾದ ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರು ವಿಜಯರಾಘವ ಮರಾಟೆ, ಮತ್ತು ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಅವರು ಉಪಸ್ಥಿತರಿದ್ದರು. ನ್ಯಾಯಮೂರ್ತಿ ಹೆಗ್ಡೆ ಅವರು ಸನ್ಮಾನಿತರಿಂದ […]

Continue Reading

ಬೆಳಗಾವಿ | ನಾನೇ ನಿಜವಾದ ವಿಪಕ್ಷನಾಯಕ, ನಾನು ಅಡ್ಜಸ್ಟ್​ಮೆಂಟ್ ರಾಜಕಾರಣಿ ಅಲ್ಲ: ಯತ್ನಾಳ್ ಹೇಳಿಕೆ

ಇದೇ ವೇಳೆ, ಮಧ್ಯಪ್ರವೇಶಿಸಿದ ಬಸನಗೌಡ ಯತ್ನಾಳ್ ಉ.ಕ. ಚರ್ಚೆ ಬಗ್ಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿಯಮದಂತೆ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಿ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿದರು. ಕುರ್ಚಿ ಬದಲಾಯಿಸಿದ್ದಕ್ಕೆ ಅಸಮಾಧಾನ : ಇದೇ ವೇಳೆ ಶಾಸಕ ಯತ್ನಾಳ್, ಸದನದಲ್ಲಿ ತಮ್ಮ ಕುರ್ಚಿ ಬದಲಾಯಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಾ, ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಈ ವೇಳೆ […]

Continue Reading

ಬೆಳಗಾವಿ | ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಪರಿಸರವಾದಿಗಳಿಗೆ ಪ್ರಶಸ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಅವರು ಬೆಳೆಸಿದ ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಅವುಗಳು ಪರಿಸರಕ್ಕೆ ಮತ್ತು ಜೀವವೈವಿಧ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ತಿಮ್ಮಕ್ಕ ಅವರು ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ತಮ್ಮ ಕೊನೆಯ ಆಸೆಯನ್ನು ಪತ್ರ ಮುಖೇನ ತಿಳಿಸಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಲಿದೆ. ಗಿಡಗಳನ್ನು ಮಕ್ಕಳಂತೆ ಕಂಡು ಪೋಷಿಸಿ ಬೆಳೆಸಿದ್ದ ತಿಮ್ಮಕ್ಕ ಅವರ ಸಾಧನೆಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ ಸಂದಿದೆ. 1997ರಲ್ಲಿ ಇಂದಿರಾ […]

Continue Reading

ಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು

ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ. ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.

Continue Reading