Author: News E-Kannada

ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಮತ್ತು ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆ ಉಲ್ಲಂಘಿಸಿದ ಎನ್ಈಪಿ-2020 : ಸುಖದೇವ್ ಥೋರಟ್
ಮಾಹಿತಿ ಮತ್ತು ಪ್ರಸಾರ ಭಾರತಿ ಸಚಿವಾಲಯದ ಮಾಜಿ ಕಾರ್ಯದರ್ಶಿಗಳಾದ, ಮಾಜಿ ಸಂಸದ ಶ್ರೀ ಜವಾಹರ್ ಸರ್ಕಾರ್ ಮಾತನಾಡಿ, ಸರ್ಕಾರಿ ಆಡಳಿತಗಳಲ್ಲಿನ ತಮ್ಮ ಸುದೀರ್ಘ ಅನುಭವವನ್ನು ಉಲ್ಲೇಖಿಸುತ್ತಾ ಒಂದು ಗಂಭೀರ ಎಚ್ಚರಿಕೆಯನ್ನು ನೀಡಿದರು. ಪ್ರಸ್ತುತ ನಡೆಯುತ್ತಿರುವ ಈ ಚಳವಳಿಯು ಅತ್ಯಂತ ಬಲಿಷ್ಠ ಮತ್ತು ವ್ಯವಸ್ಥಿತ ಶಕ್ತಿಯ ವಿರುದ್ಧ ಹೋರಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಅವರು ಶಿಕ್ಷಣದಲ್ಲಿ ಕೇಂದ್ರೀಕರಣ, ಕಾರ್ಪೊರೇಟೀಕರಣ, ಕೋಮುವಾದ ಮತ್ತು ಖಾಸಗೀಕರಣ ಎಂಬ ನಾಲ್ಕು ಪ್ರಮುಖ ಉದ್ದೇಶಗಳನ್ನು ಜಾರಿಗೆ ತರಲು ವಿನ್ಯಾಸಗೊಳಿಸಲಾದ ಒಂದು ಅಧಿಕಾರಶಾಹಿ ಸಾಧನ […]
Continue Readingಶಿವಮೊಗ್ಗ | ಹಾಲಪ್ಪ 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಿ ಎದುರಿಸಲು ಸಿದ್ಧ : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ
ಸಿಗಂದೂರು ದೇವಸ್ಥಾನದ ವಿಚಾರವಾಗಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ. ದೇವಿಯ ಸನ್ನಿಧಿಗೆ ನಮ್ಮ ಕುಟುಂಬ ತಲೆ ತಲಾಂತರಿಂದ ನಡೆದುಕೊಳ್ಳುತ್ತಿದೆ. ನಾನು ಸಿಗಂದೂರು ದೇವಿಯ ಭಕ್ತನಾಗಿದ್ದೇನೆ. ನಾನು ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಅಥವಾ ಪೂಜೆ ಮಾಡುವಂತ ಭಟ್ಟರ ಪರವಾಗಿ ಇಲ್ಲ. ನಾನು ಸಿಗಂದೂರು ದೇವಸ್ಥಾನದ ಪರವಾಗಿ ನಿಂತಿದ್ದೇನೆ. ವಿನಾಕಾರಣ ಸಾಕ್ಷ್ಯಾಧಾರಗಳಿಲ್ಲದೇ ನನ್ನ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂಬುದಾಗಿ ಬಹಿರಂಗವಾಗಿ ಹೇಳುವುದು ಎಷ್ಟು ಸರಿ? 5 ಕೋಟಿಯಲ್ಲ 25 ಕೋಟಿ ಹಾಕಲಿ ನಾನು ಹೆದರೋದಿಲ್ಲ. […]
Continue Readingಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು
ಮುರಳಿ ಕೃಷ್ಣ ಅವರು ಮುಂಜಾನೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Continue Readingಶಿವಮೊಗ್ಗ | ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಲ್ಲಿ ಸುಮೋಟೊ ಪ್ರಕರಣ ದಾಖಲು
ಈ ಸಂಬಂಧ ಮಹಾನಗರ ಪಾಲಿಕೆಯು ರಾಜ ಕಾಲವೇ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಸುದ್ದಿಯನ್ನು ಇ-ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ ಸುದ್ದಿಯನ್ನು ಬಿತ್ತರಿಸಿತ್ತು. ಲೋಕಾಯುಕ್ತದಲ್ಲಿ ಸುಮೋಟೋ ಪ್ರಕರಣ ಲೋಕಾಯುಕ್ತ ನ್ಯಾಯಮೂರ್ತಿಗಳು ಸಾರ್ವಜನಿಕ ಹಿತಾಸಕ್ತಿಯ ಸುದ್ದಿ ಹಾಗೂ ಸಾರ್ವಜನಿಕರ ಅಹವಾಲನ್ನು ಗಮನಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಶ್ರೀಮತಿ ಜ್ಯೋತಿ ಎಇಇ ಹಾಗೂ ಜೆಇ ವಸಂತ್ ಕುಮಾರ್ ವಿರುದ್ದ ಸುಮೋಟೊ ಪ್ರಕರಣ […]
Continue Readingಶಿವಮೊಗ್ಗ | ಹೊಸ ಜಿಲ್ಲಾಸ್ಪತ್ರೆ, ಕುವೆಂಪು ವಿವಿಯಲ್ಲಿ ಪರಿಶಿಷ್ಟರಿಗೆ ಹಾಸ್ಟೆಲ್ ಕಲ್ಪಿಸಿ : ಡಿಎಸ್ಸೆಸ್ ನಾಯಕ ಗುರುಮೂರ್ತಿ ಆಗ್ರಹ
ಈಗಾಗಲೇ ಶಿವಮೊಗ್ಗ ನಗರಕ್ಕೆ ಹೊಸದಾಗಿ ೫ ಖಾಸಗಿ ಆಸ್ಪತ್ರೆಗಳು ಬರುತ್ತಿವೆ. ಪೋರ್ಟಿಸ್ ಆಸ್ಪತ್ರೆಯೂ ಬರುತ್ತಿದೆ. ಈ ರೀತಿ ಖಾಸಗಿ ಆಸ್ಪತ್ರೆಗಳು ಜಾಸ್ತಿ ಆದರೆ ಬಡವರು ಹಣವನ್ನು ಎಲ್ಲಿಂದ ತಂದುಕೊಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ಪರಿಶೀಲಿಸಿ ಶಿವಮೊಗ್ಗ ನಗರಕ್ಕೆ ಹತ್ತು ಎಕರ ಜಾಗದಲ್ಲಿ ೫೦೦ ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಬೇಕೆಂದು ಅವರು ಆಗ್ರಹಿಸಿದರು.
Continue Reading‘ರಾಜ್ಯಪಾಲ ಹಠಾವೋ ; ಕರ್ನಾಟಕ ಬಚಾವೋ’ ; ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ಆಕ್ರೋಶ
ರಾಜ್ಯಪಾಲರು ಸದನದ ಗಾಂಭೀರ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಆದರೆ ಅವರ ಅಸಂವಿಧಾನಿಕ ನಡೆ ಸದನದಲ್ಲಿ ಗದ್ದಲ ಮತ್ತು ಅಸ್ಥಿರತೆಗೆ ಕಾರಣವಾಗಿದೆ. ಇಂತಹ ರಾಜ್ಯಪಾಲರು ಕರ್ನಾಟಕಕ್ಕೆ ಅಗತ್ಯವಿಲ್ಲ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕೂಡಲೇ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹೋಟ್ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ, ಮಹಾನಗರ ಪಾಲಿಕೆ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಘೋಷಣೆಗಳೊಂದಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳದಿದ್ದಲ್ಲಿ ಯುವ […]
Continue Reading

