ಶಿವಮೊಗ್ಗ | ರಾಜ್ಯ ಸರ್ಕಾರದ ವಿರುದ್ದ ಬಂಜಾರ ಸಂಘದಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಭಾರಿ ಪ್ರತಿಭಟನೆ

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುವೆಂಪು ರಂಗಮಂದಿರದಲ್ಲಿ ಸೇವಾಲಾಲ್ ಜಯಂತಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದು ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದಾರೆ.

Continue Reading

ಶಿವಮೊಗ್ಗ | ಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ; ರೈತರಿಗೆ ಸಚಿವ ಮಧು ಬಂಗಾರಪ್ಪ ಅಭಯ

ಈ ಕುರಿತು ಸಂಬಂಧಪಟ್ಟ ಸಮಿತಿಗಳು ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ. ಸಂಬಂಧಪಟ್ಟ ಸಮಿತಿಗಳ ಮೂಲಕ ಈ ಅರ್ಜಿಗಳ ಮರುಪರಿಶೀಲನೆ ಮತ್ತು ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ಸರ್ಕಾರವು ರೈತರ ಮತ್ತು ಸಂತ್ರಸ್ತರ ಹಿತ ಕಾಯಲು ಸಂಪೂರ್ಣವಾಗಿ ಬದ್ಧವಾಗಿದ್ದು, ಯಡಮನೆ ಗ್ರಾಮದ ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

Continue Reading

ಶಿವಮೊಗ್ಗ | ವಿಶೇಷ ಭೂಸ್ವಾಧಿನಾಧಿಕಾರಿ ಸಿದ್ದಲಿಂಗಾರೆಡ್ಡಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಶೇಖರ್.ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ನಿರೀಕ್ಷಕರಾದ ಕೆ.ಪಿ.ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿ ಯೋಗೇಶ್.ಜಿ.ಸಿ, ಟೀಕಪ್ಪ, ಸುರೇಂದ್ರ.ಹೆಚ್.ಸಿ, ಬಿ.ಟಿ.ಚನ್ನೇಶ್, ದೇವರಾಜ್, ಅರುಣ್ ಕುಮಾರ್.ಯು.ಬಿ, ಪ್ರಕಾಶ್ ಬಾರಿಮರದ್, ಆದರ್ಶ್, ಚಂದ್ರಿಬಾಯಿ, ಪ್ರದೀಪ್, ಗೋಪಿ, ಚೇತನ್ ಮತ್ತು ಆನಂದ್ ಪಾಲ್ಗೊಂಡಿದ್ದರು.

Continue Reading

3.5 ಕೋಟಿ ರೂ. ಮೌಲ್ಯದ ಗ್ರಾಹಕರ ಚಿನ್ನವನ್ನು ಅಡಮಾನ ಇಟ್ಟಿದ್ದ ಬ್ಯಾಂಕ್ ಅಧಿಕಾರಿ ಬಂಧನ

ತನಿಖೆಯ ಸಮಯದಲ್ಲಿ ಆರೋಪಿಗಳು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣವನ್ನು ಖರ್ಚು ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಆರೋಪಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಅನ್ನು ಬಂಧಿಸಲಾಗಿದೆ. ನಾವು ಚಿನ್ನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 700 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಲೋಕೇಶ್ ಬಿ ಜಗಲಾಸರ್ ಹೇಳಿದರು. ಇದೇ ವೇಳೆ, ಗ್ರಾಹಕರಿಗೆ ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಲಾಗಿರುವ ತಮ್ಮ ಆಭರಣಗಳ ಸುರಕ್ಷತೆ ಮತ್ತು ಸ್ಥಿತಿಯನ್ನು ಪರಿಶೀಲಿಸುವಂತೆ ಪೊಲೀಸರು ಸಲಹೆ ನೀಡಿದರು.

Continue Reading

ಬೆಳಗ್ಗೆ ಸಾಫ್ಟ್‌ವೇರ್, ರಾತ್ರಿ ಹಾರ್ಡ್‌ವೇರ್ ; BMW ಕಾರ್‌, ವಿದೇಶ ಪ್ರವಾಸಕ್ಕಾಗಿ ಕಳ್ಳನಾಗಿ ಬದಲಾದ ಟೆಕ್ಕಿ

ಆಂಧ್ರಪ್ರದೇಶದಲ್ಲಿಯೂ 60ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಬಿಎಂಡಬ್ಲ್ಯು ಕಾರ್‌ಗಾಗಿಯೇ ಕಳ್ಳತನ ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ (27) ಬಂಧಿತ ಟೆಕ್ಕಿ. ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನೀಯರ್‌ನಾಗಿ ಕೆಲಸ ಮಾಡಿಕೊಂಡಿದ್ದ ಅಚ್ಚಿ ಮಹೇಶ್‌ ರೆಡ್ಡಿಗೆ ಐಷಾರಾಮಿ ಜೀವನಶೈಲಿ ನಡೆಸುವ ಆಸೆ ಇತ್ತು. ತನಗೆ ಬರುತ್ತಿದ್ದ ಸಂಬಳದಲ್ಲಿ ಕನಸುಗಳು ಈಡೇರದ ಹಿನ್ನೆಲೆ ಕಳ್ಳತನಕ್ಕೆ ಇಳಿದಿದ್ದನು. ಬಿಎಂಡಬ್ಲ್ಯು ಕಾರ್‌ಗಾಗಿಯೇ ಅಚ್ಚಿ ಕಳ್ಳತನ ಮಾಡ್ತಿದ್ದ ಎಂದು ವಿಶಾಖಪಟ್ಟಣ ಪೊಲೀಸರು ಮಾಹಿತಿ ನೀಡಿದ್ದಾರೆ.35ಹೈದರಾಬಾದ್‌ನ ಐಟಿ ಕಂಪನಿಯಲ್ಲಿ ಕೆಲಸ ಸ್ನಾತಕೋತ್ತರ ಪದವೀಧರನಾಗಿರುವ […]

Continue Reading

ದಾವಣಗೆರೆ ದಕ್ಷಿಣ ; ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ; ಸರತಿ ಸಾಲಿನಲ್ಲಿ ಮುಸಲ್ಮಾನ್ ಆಕಾಂಕ್ಷಿಗಳು

ಆದರೆ ‘ನನ್ನ ನಂತರದಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಗಲು ಅವಕಾಶ ಇದೆ’ ಎಂದು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಹೇಳಿಕೆ ನೀಡಿದ್ದರು ಎಂಬುವುದು ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳ ವಾದವಾಗಿದೆ. ಹಾಗಾಗಿ ಟಿಕೆಟ್ ನೀಡುವಾಗ ಇದನ್ನು ಪರಿಗಣಿಸಬೇಕು ಎಂಬುವುದು ಬೇಡಿಕೆಯಾಗಿದೆ. ಚರ್ಚೆಗೆ ಎಡೆಮಾಡಿಕೊಡುತ್ತಿರು ಅಂಕಿ- ಅಂಶಗಳುದಾವಣಗೆರೆ ದಕ್ಷಿಣ (ಕ್ಷೇತ್ರ ನಂ. 107) ವಿಧಾನಸಭಾ ಕ್ಷೇತ್ರದ ಮತದಾರರ ಅಂಕಿಅಂಶಗಳು ಮತ್ತು ಜನಸಂಖ್ಯಾ ವಿವರಗಳನ್ನು ಗಮನಿಸಿದರೆ, 2025ರ ಆರಂಭದ ಮಾಹಿತಿಯಮತೆ , ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ […]

Continue Reading

ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆ ; ಪ್ರಾಬಲ್ಯ ಮೆರೆದ ಕಾಂಗ್ರೆಸ್, ಬಲ ಕಳೆದುಕೊಂಡ ಬಿಆರ್‌ಎಸ್‌

ಬಿಜೆಪಿ 336 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಎಐಎಂಐಎಂ 66 ಮತ್ತು ಸಿಪಿಐ(ಎಂ) 13 ವಾರ್ಡ್‌ಗಳಲ್ಲಿ ಜಯಗಳಿಸಿವೆ.ಸುಮಾರು 30 ಪುರಸಭೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಫಲಿತಾಂಶ ಬಂದಿದೆ. ಇಲ್ಲಿ ಪಕ್ಷೇತರರು ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲ ನಿರ್ಣಾಯಕವಾಗಲಿದೆ.ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಸ್ವಕ್ಷೇತ್ರ ಖಮ್ಮಂ ಜಿಲ್ಲೆಯ ಮಧಿರ ಪುರಸಭೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷವಾದ ಟಿಡಿಪಿ ಒಟ್ಟು 21 ವಾರ್ಡ್‌ಗಳಲ್ಲಿ […]

Continue Reading

ಸಾಗರ | ಮಾ. 2 ರಂದು ; ಸಿಗಂದೂರು ಸೇತುವೆಯ ಮೇಲೆ ರೈತರಿಂದ ಬೃಹತ್ ರಸ್ತೆ ತಡೆ ಚಳವಳಿ : ತೀ. ನ. ಶ್ರೀನಿವಾಸ್ ಎಚ್ಚರಿಕೆ

ಚುನಾವಣೆಗೂ ಮುನ್ನ ಮಧು ಬಂಗಾರಪ್ಪ ಅವರು ಪಾದಯಾತ್ರೆ ನಡೆಸಿದ್ದರು ಮತ್ತು ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ಗ್ವಾಲಿಯಲ್ಲಿ ನಡೆದ ಸಮಾವೇಶದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಇಂದು ಆ ಭರವಸೆಗಳು ಕೇವಲ ಘೋಷಣೆಯಾಗಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ ಸುಮ್ಮನಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಜಂಟಿಯಾಗಿ ಕುಳಿತು ಸಮಸ್ಯೆ ಬಗೆಹರಿಸುವಂತೆ ಸೂಚಿಸಿ […]

Continue Reading

ಶಿವಮೊಗ್ಗ | ಹೊಂಕೇರಿ ಗ್ರಾಮದಲ್ಲಿ ಹಾಡುಹಗಲೇ ಕಳ್ಳತನ ; ಗ್ರಾಮಸ್ಥರಿಂದ ಕಳ್ಳನ ಸೆರೆ

ಹೊಂಕೇರಿ ಗ್ರಾಮದ ರೈತರೊಬ್ಬರು ತಾವು ಬೆಳೆದ ಬೆಲ್ಲವನ್ನು ಮಾರಾಟ ಮಾಡಿ ಬಂದ 50,000/- ರೂಪಾಯಿ ನಗದು ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಇದಲ್ಲದೆ, ಮನೆಯಲ್ಲಿ ಚಿನ್ನಾಭರಣಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳೂ ಇದ್ದವು. ಹಾಡುಹಗಲೇ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಕಳ್ಳರು ಬಳಸಿಕೊಂಡಿದ್ದಾರೆ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ಒಡೆದು ನಗದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಗ್ರಾಮಸ್ಥರ ಸಮಯಪ್ರಜ್ಞೆ: ಕಳ್ಳತನ ನಡೆಯುತ್ತಿದ್ದಾಗ, ಮನೆಯ ಸುತ್ತಮುತ್ತಲಿನ ಗ್ರಾಮಸ್ಥರು ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದಾರೆ. […]

Continue Reading