Author: News E-Kannada

ನ್ಯಾಯಾಲಯದಿಂದ ನಟ ದರ್ಶನ್ ಗೆ ಸಿಕ್ತು ಸಣ್ಣ ರಿಲೀಫ್
ಈ ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಸಬಹುದೆಂದು ಗನ್ ಲೈಸೆನ್ಸ್ ಅಮಾನತುಪಡಿಸಲಾಗಿತ್ತು. ನಟ ದರ್ಶನ್ ಅವರು ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ‘2008ರಿಂದಲೂ ದರ್ಶನ್ ಲೈಸೆನ್ಸ್ ಇರುವ ಗನ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ ಸರಂಡರ್ ಮಾಡಲಾಗಿದೆ. ದರ್ಶನ್ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತುಪಡಿಸಿದ್ದಾರೆ’ ಎಂದು ದರ್ಶನ್ ಪರ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಾಡಿದರು. ‘ಹೆಸರಿನ ಕಾರಣಕ್ಕಲ್ಲ ಆರೋಪವಿರುವ ಕಾರಣಕ್ಕೆ’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. ಆ ಬಳಿಕ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ […]
Continue Readingಹಾಸನ | ಹೆಲ್ಮೆಟ್ ಧರಿಸದೆ ಬುಲೆಟ್ ನಲ್ಲಿ ಜಾಲಿ ರೈಡ್ ; ಅಪಘಾತದಲ್ಲಿ ಯುವತಿ ದುರ್ಮರಣ
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
Continue Readingಶಿವಮೊಗ್ಗ | ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಎನ್. ಶ್ರೀನಾಗ್ ಆಯ್ಕೆ
ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಟಿ.ಆರ್. ಅಶ್ವತ್ ನಾರಾಯಣ್ ಶೆಟ್ಟಿ ಹಾಗೂ ಶಾರದಾ ಗೋಪಾಲ್ ಅವರು ಸಂಘದ ಬ್ಯಾನರ್ ಅನಾವರಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯುವಜನ ಮಹಾಸಭಾ ಬೆಂಗಳೂರು ಗಿರಿನಾಡು ವಿಭಾಗದ ಕಾರ್ಯದರ್ಶಿ ಡಿ.ಎಂ. ಅರ್ಜುನ್, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಬೆಂಗಳೂರು ನಿರ್ದೇಶಕ ನಿತಿನ್ ಕಸಲ್ ಸೇರಿದಂತೆ ಅನೇಕ ಗಣ್ಯರು, ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.
Continue Readingಬೆಂಗಳೂರು | ಶೀಘ್ರದಲ್ಲಿ ಮೆಟ್ರೋ ದರ ಏರಿಕೆ
ನಿಗದಿ ಆಗಿದ್ದ 5% ದರದಲ್ಲಿ 1% ಅಥವಾ 2% ಗೆ ದರ ನಿಗದಿ ಮಾಡಬಹುದು ಅಂತಾ ಹೇಳಲಾಗುತ್ತಿದೆ. ಅದಕ್ಕಿಂತ ಜಾಸ್ತಿ ಆಗಬಹುದು ಅಂತಾ ಕೂಡ ಚರ್ಚೆ ಇದೆ. ಆದರೆ, ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಅ ನಿಟ್ಟಿನಲ್ಲಿ ಆಡಿಟ್ ಮುಕ್ತಾಯ ಆದ ಹಿನ್ನೆಲೆ ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರವನ್ನ ಬಿಎಂಆರ್‌ಸಿಎಲ್ ಎಂಡಿ ಅವರು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. […]
Continue Readingಶಿವಮೊಗ್ಗ | ಭದ್ರಾಪುರ ಶಾಲೆಯಲ್ಲಿ ವಿಶೇಷ ದಾಖಲಾತಿ ಅಂದೋಲನ
ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಪಿ.ಕೆ ಮಾತನಾಡಿ, ‘ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್‌ಜಿ ಹಾಗೂ ಯುಕೆಜಿ ಆರಂಭವಾಗಲಿದೆ. ಜೊತೆಗೆ ಐದನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ. ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, ನೋಟ್‌ಪುಸ್ತಕಗಳು, ಸಮಗ್ರ ಶಿಕ್ಷಣ ಸೌಲಭ್ಯಗಳು ಹಾಗೂ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಪೋಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಒಂದು ಮಗುವನ್ನು ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಮೂಲಕ ದಾಖಲಾತಿ […]
Continue Readingನೇಪಾಳ | ತ್ರಿಶೂಲಿ ನದಿಗೆ ಬಿದ್ದ ಬಸ್ ; ಕನಿಷ್ಠ 18 ಸಾವು ಹಲವರು ಗಂಭೀರ
ಗಾಯಗೊಂಡ ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನ್ಯೂಜಿಲೆಂಡ್‌ನ ಪುರುಷ ಪ್ರಯಾಣಿಕರೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನಿನ ಮಹಿಳೆ ಮತ್ತು ಡಚ್ ಪ್ರಜೆಯೊಬ್ಬರು ಸೇರಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅತಿ ವೇಗದ ಚಾಲನೆಯೇ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್‌ನಲ್ಲಿ ಕೆಲವು ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 40 ರಿಂದ 45 ಪ್ರಯಾಣಿಕರಿದ್ದರು. ಬಸ್ ಪೃಥ್ವಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. […]
Continue Readingಶಿವಮೊಗ್ಗ | ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಪೊಲೀಸರು
ಪೊಲೀಸರು ಯುವಕನಿಗೆ ಮನವಿ ಮಾಡಿ, ಬುದ್ಧಿವಾದ ಹೇಳಿ, ಪೋಷಕರನ್ನು ಕರೆಸಿ ಅವರೊಂದಿಗೆ ಕಳುಹಿಸಿದ್ದಾರೆ. ನ್ಯೂ ಟೌನ್ ಪೊಲೀಸರ ಈ ಮಾನವೀಯ ಕಾರ್ಯವನ್ನು ನಿಖಿಲ್ ಬಿ.ಐಪಿಎಸ್, ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.
Continue Readingಸೊರಬ | ಸ್ವಾಭಿಮಾನ ಮತ್ತು ಸಂಘಟನೆಯ ಮೂಲಕ ಮಾದಿಗ ಸಮಾಜ ಮುಂದೆ ಬರಬೇಕು : ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಾಜಿ ಕರೆ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾಗಿ ಗುಡ್ಡಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಯಿತು, ಗೌರವಾಧ್ಯಕ್ಷರಾಗಿ ನಾಗರಾಜ ಅಣವಟ್ಟಿ, ಉಪಾಧ್ಯಕ್ಷರಾಗಿ ಲಿಂಗರಾಜ ನೀರಲಿಗಿ, ಹನುಮಂತಪ್ಪ ತಲ್ಲೂರು, ಕಾರ್ಯದರ್ಶಿಗಳಾಗಿ ರಮೇಶ್ ಗಿಣಿವಾಲ, ಅಭಿಲಾಷ್ ಎನ್. ಹುರುಳಿ ಕೊಪ್ಪ ಅವರನ್ನು ಆಯ್ಕೆಮಾಡಿ ಅಭಿನಂದಿಸಲಾಯಿತು. ಲೋಕೇಶ್ ತಿಮ್ಲಾಪುರ, ಹೊಳಿಯಪ್ಪ ಗಾಮಾ, ಮಂಜಣ್ಣ ಬೀರನಕರೆ, ನಾಗರಾಜ ಹುರುಳಿ ಕೊಪ್ಪ ಸೇರಿದಂತೆ ತಾಲೂಕು ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಸಮಾಜ ಬಾಂಧವರು ಸೇರಿದ್ದರು. ಪ್ರಸ್ತಾವಿಕವಾಗಿ ನಾಗಪ್ಪ ಮಾಸ್ತರ್ ಮಾತನಾಡಿದರು. ಅಭಿಲಾಷ್ ಹುರುಳಿಕೊಪ್ಪ ಸ್ವಾಗತಿಸಿದರು. ನಾಗರಾಜ ಹುರುಳಿಕೊಪ್ಪ […]
Continue Reading

