ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಎರಡನೇ ಬಾರಿ ಸಿದ್ದರಾಮಯ್ಯ ಸಿ ಎಂ, ಆದ ನಂತರ ಟ್ಯಾಕ್ಸ್ ಟೆರರಿಸಮ್ ಪ್ರಾರಂಭವಾಗಿದೆ ಎಂದು ಗುಡುಗಿದರು.ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ 60 ಸಾವಿರ ಕೋಟಿ ಹೊಸ ತೆರಿಗೆ ಜನರ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದರು.
ವಿದ್ಯುಚಕ್ತಿ,ಸ್ಟ್ಯಾಂಪ್ ಡ್ಯೂಟಿ, ಲ್ಯಾಂಡ್ ವ್ಯಾಲ್ಯೂಷನ್, ಎಲ್ಲದರ ಟ್ಯಾಕ್ಸ್ ಹೆಚ್ಚಾಗಿದೆ ಎಂದರು.5 ಲಕ್ಷ ಕೋಟಿ ಸಾಲ ಮಾಡಿರುವ ದಾಖಲೆಯ ಸಾಲಗಾರ ಎಂಬುದು ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ ಎಂದು ಆರೋಪಿಸಿದರು.
ಇದೊಂದು ಭ್ರಷ್ಟ ಸರ್ಕಾರ, ಇಂತಹ ಭ್ರಷ್ಟ ಸರ್ಕಾರ ನೋಡೇ ಇಲ್ಲವೆಂದರು. ಯಾವದೇ ಕಚೇರಿಗೆ ಹೋದರು ಅದು ಬೆಂಗಳೂರಿಗೆ ಭ್ರಷ್ಟಾಚಾರದ ದುಡ್ಡು ಮುಟ್ಟಬೇಕು ಎಂದರು. ಇನ್ನು ಇವರು ನೀಡುವ ಅಕ್ಕಿಯಲ್ಲೂ ಭ್ರಷ್ಟಾಚಾರ ನಡೀತಿದೆ. ರೇಷನ್ ಅಂಗಡಿ ಅಸೋಶಿಯೇಷನ್ ಅವರು ಸಹ ದೂರು ನೀಡಿದ್ದಾರೆ.
ಆಸ್ಪತ್ರೆ ಔಷಧಿ ಖರೀದಿಯಲ್ಲೂ ಭ್ರಷ್ಟಾಚಾರ ನಡೀತಿದೆ. ವರ್ಗಾವಣೆ ದಂಧೆ ಅನ್ನುವುದು ದೊಡ್ಡ ಇಂಡಸ್ಟ್ರಿಯಾಗಿ ಪರಿಣಮಿಸಿದೆ ಎಂದು ವಾಗ್ದಾಳಿ ನಡೆಸಿದರು. ಜನರ ಮೇಲೆ ಭ್ರಷ್ಟಾಚಾರದ ಹೊರೆ ಹಾಕುತ್ತಿದ್ದಾರೆ. ಇಲೆಕ್ಟ್ರಾನಿಕ್ ಮೀಟರ್ ನಲ್ಲಿ ಆರು ಸಾವಿರ ಕೋಟಿ ಭ್ರಷ್ಟಾಚಾರವಾಗಿದೆ, ಭ್ರಷ್ಟಾಚಾರದಿಂದ ಸರ್ಕಾರ ತುಂಬಿ ತುಳಿಕಿದೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಕಚೇರಿಯಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದರು. ಸಿದ್ದರಾಮಯ್ಯ ದುರಾಡಳಿತ ಮನೆ ಮನೆಗೆ ತಲುಪಿದೆ. ಜನ ಚುನಾವಣೆಯಲ್ಲಿ ಉತ್ತರಿಸಲು ಕಾಯುತ್ತಿದ್ದಾರೆ.
ದುಷ್ಟ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುವವರೆಗೆ ವಿಶ್ರಮಿಸುವುದಿಲ್ಲ ಎಂದ ಬಸವರಾಜ್ ಬೊಮ್ಮಾಯಿ.
ಈ ಚುನಾವಣೆ ಫಲಿತಾಂಶ ಕಾಂಗ್ರೆಸ್ ಅಧಪತನದ ಮೊದಲನೇ ಹೆಜ್ಜೆ ಆಗತ್ತೆ ಎಂದು ಭವಿಷ್ಯ ನುಡಿದರು.



