ಕೇರಳ ರಾಜ್ಯದ ಪಾಲಕ ಜಿಲ್ಲೆಯ ಚಿತ್ತೂರು ಕ್ಷೇತ್ರದ ಚುನಾವಣೆಯ ಉಸ್ತುವಾರಿಗಳನ್ನಾಗಿ ಹೆಚ್ ಸಿ ಯೋಗೇಶ್ ರವರನ್ನು ನೇಮಕ ಮಾಡಿದ್ದು ಇದರ ಅಂಗವಾಗಿ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂನಲ್ಲಿ ಸಭೆ ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಭಾಗವಹಿಸಿ ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೂ ಕೇರಳದ ಚುನಾವಣೆಯ ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ಪಕ್ಷವು ನೀಡಿರುವ ಜವಾಬ್ದಾರಿಯ ವಿಚಾರವಾಗಿ ಕೇರಳ ಸಂಪೂರ್ಣ ಚುನಾವಣೆ ಮುಗಿಯುವವರೆಗೂ ಉಸ್ತುವಾರಿಯಾಗಿ ಭಾಗಿಯಾಗಲು ತೆರಳಿದ್ದು,
ಶಿವಮೊಗ್ಗ ನಗರದಲ್ಲಿನ ಅನೇಕ ಕಾರ್ಯಕ್ರಮಗಳಿಗೆ ಭಾಗಿಯಾಗದೆ ಕ್ಷಮೆ ಯಾಚಿಸುವ ಮುಖಾಂತರ, ಪಕ್ಷದ ಜವಾಬ್ದಾರಿಯ ವಿಚಾರವಾಗಿ ಕೇರಳಕ್ಕೆ ತೆರಳಿದ್ದಾರೆಂದು ತಿಳಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



