ಪ್ರಸ್ತುತ ದಿನ ಮಾನದಲ್ಲಿ ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದು ಅಂತರ್ಜಾಲದ ಸಾಮಾಜಿಕ ಜಾಲತಾಣಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಸುದ್ದಿ ಮಾಧ್ಯಮಕ್ಕೂ ಪ್ರಾಮುಖ್ಯತೆ ಹೆಚ್ಚಾಗಿದ್ದು ಮೊಬೈಲ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಅಂಗೈಯಗಲದ ಎಲೆಕ್ಟ್ರಾನಿಕ್ ವಸ್ತುವಿನಲ್ಲಿ ಪ್ರಪಂಚದ ಆಗುಹೋಗುಗಳನ್ನು ಸುಲಭವಾಗಿ ವೀಕ್ಷಿಸುವ ಸೌಲಭ್ಯವು ದೊರೆತಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್, ಟ್ವಿಟರ್, ಟೆಲಿಗ್ರಾಂ, ಗೂಗಲ್, ಯು ಟ್ಯೂಬ್ ಮೊದಲಾದವುಗಳ ಮೂಲಕ ಹೆಚ್ಚು ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಪ್ರತಿಯೊಬ್ಬರಿಗೂ ನಿಖರವಾದ ಸುದ್ದಿಯನ್ನು ಮುಟ್ಟಿಸುವ ಪ್ರಯತ್ನವನ್ನು ಆರಂಭಿಸಿದ್ದೇವೆ.
ಹತ್ತು, ಹಲವು ವರ್ಷಗಳ ಕಾಲ ವಿದ್ಯುನ್ಮಾನ ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳ ಅನುಭವ ಒರೆಗೆ ಹಚ್ಚಿ ನಾವು ಹೊಸದಾಗಿ ಪ್ರಾರಂಭ ಮಾಡಲಿದ್ದೇವೆ . ಅದೇ ಇ- ಕನ್ನಡ ಡಾಟ್ ಇನ್ ನ್ಯೂಸ್. ಸತ್ಯ ಶೋಧ ನಿರ್ಭೀತ ಎಂಬ ಘೋಷವಾಕ್ಯದೊಂದಿಗೆ,

ನಮ್ಮ ಇ- ಕನ್ನಡ.ಇನ್ ನ್ಯೂಸ್ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮ ಪ್ರಾರಂಭಿಸಿದ್ದೇವೆ.
ನಮ್ಮ ಸುದ್ದಿ ಮಾಧ್ಯಮವು ಯಾವುದೇ ರೀತಿಯ ಸೈದ್ಧಾಂತಿಕ ವಿಚಾರ, ಸಿದ್ಧಾಂತಕ್ಕೆ ಅಥವಾ ಯಾರ ಪರ ಅಥವಾ ವಿರುದ್ಧದ ನಿಲುವು ಹೊಂದಿಲ್ಲ.
ನಿಷ್ಪಕ್ಷವಾದ ಸುದ್ದಿಯನ್ನು ನಿಮ್ಮ ಮುಂದೆ ಇಡುವುದರ ಜೊತೆಗೆ ಎಲ್ಲಾ ರೀತಿಯ ಕ್ಷೇತ್ರಕ್ಕೂ ತಮ್ಮ ಅಭಿಪ್ರಾಯ ವಿಚಾರಗಳನ್ನು ಮಂಡಿಸುವ ಮುಕ್ತವಾದ ವೇದಿಕೆ ಹಾಗೂ ಅವಕಾಶವನ್ನು ನಾವು ನಮ್ಮ ಮಾಧ್ಯಮ ಮುಖಾಂತರ ನೀಡಲಿದ್ದೇವೆ.

ನಮ್ಮ ಮಾಧ್ಯಮದ ಮುಖ್ಯ ಗುರಿ ಹಾಗೂ ಉದ್ದೇಶ ಸಮಾಜ ಮುಖಿಯಾಗಿರುವುದು. ವಸ್ತು ನಿಷ್ಠ ವರದಿಯನ್ನ ಮಾತ್ರ ಬಿತ್ತರಿಸುವುದು.
ನಿಮ್ಮ ಇ-ಕನ್ನಡ ನ್ಯೂಸ್ ಗೆ ಓದುಗರಾದ ನಿಮ್ಮ ಬೆಂಬಲ, ನಿಮ್ಮ ಸಹಕಾರ, ನಿಮ್ಮ ಪ್ರೋತ್ಸಾಹವೇ ನಮಗೆ ಅತಿ ಅಮೂಲ್ಯವಾದದು



