ಬೆಂಗಳೂರು ನಗರದ ಧನಂಜಯ್ ಪ್ಯಾಲೆಸ್ನಲ್ಲಿ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ, ಜನಜಾಗೃತಿ ಹಾಗೂ ಪಾರದರ್ಶಕತೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಸಕ್ರಿಯ ಆರ್‌ಟಿಐ ತಜ್ಞ ಮಂಜುನಾಥ ಹಿರೇಚೌಟಿ ಅವರನ್ನು ಮಾಜಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಸನ್ಮಾನಿಸಿದರು.
ಭ್ರಷ್ಟಾಚಾರ ವಿರುದ್ಧದ ಹೋರಾಟ, ಸಾರ್ವಜನಿಕ ನಿಧಿಗಳ ಕಡತ ಬಹಿರಂಗಪಡಿಸುವಿಕೆ ಮತ್ತು ಜನಶಕ್ತಿಕರಣದಲ್ಲಿ ಅವರ ಪ್ರಮುಖ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.
ಮಾಹಿತಿ ಹಕ್ಕು ಕಾಯ್ದೆ ಯ ಉಪನ್ಯಾಸಕರೂ ಮತ್ತು From Denial to Disclosure Mastering RTI ಪುಸ್ತಕ ಲೇಖಕರೂ ಹೌದು.
ಇವರ ಜೊತೆ ಸಿ. ಆರ್. ಭಾಸ್ಕರ್, ಸಮಾಜಮುಖಿ ಕಾನೂನು ಕ್ಷೇತ್ರದಲ್ಲಿ ಹೆಸರಾಗಿರುವ ವಕೀಲರು, ಹಾಗು ಸುಬ್ರಹ್ಮಣ್ಯ ಎಸ್. ಹಂಡಿಗೆ, ಥರ್ಡ್ ಐ ನ್ಯೂಸ್ ಚಾನೆಲ್‌ನ ಸಂಪಾದಕರು ಸಹ ಪೌರ ಜಾಗೃತಿ ಹಾಗೂ ಉತ್ತರದಾಯಕ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಯಿಗಾಗಿ ಸನ್ಮಾನಿತರಾದರು.
ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾದ ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರು ವಿಜಯರಾಘವ ಮರಾಟೆ, ಮತ್ತು ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಅವರು ಉಪಸ್ಥಿತರಿದ್ದರು.
ನ್ಯಾಯಮೂರ್ತಿ ಹೆಗ್ಡೆ ಅವರು ಸನ್ಮಾನಿತರಿಂದ ನಡೆಯುತ್ತಿರುವ ಜನಪರ ಹೋರಾಟಗಳನ್ನು ಶ್ಲಾಘಿಸಿ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಿಸಲು ನಾಗರಿಕರ ಸಕ್ರಿಯ ಪಾಲ್ಗೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಮನುಷ್ಯ ತನ್ನ ಬಳಿ ಇರುವ ಸಂಪನ್ಮೂಲ ಗಳಲ್ಲಿಯೆ “ತೃಪ್ತಿ” ಹೊಂದಿದರೆ, ಅಲ್ಲದೆ ಸಮಾಜ ಕಳ್ಳರನ್ನು, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದವರನ್ನು ಮೆರವಣಿಗೆ ಮುಖೇನ ಕರೆತರುವ ನಡವಳಿಕೆಯನ್ನು ಉದಾಹರಿಸಿ ಭ್ರಷ್ಟಾಚಾರ ಮೂಲಬಿಂದು ಸಮಾಜದ ನಡವಳಿಕೆಯೆ ಆಗಿದೆ ಎಂದು ನೆನಪಿಸಿದರು, ಯುವಕರು ನ್ಯಾಯ ಮತ್ತು ಕಾನೂನಿನಡಿ ಯಾವುದೇ ದುರಾಸೆ ಇಲ್ಲದೆ ಕೆಲಸ ಮಾಡಿದರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಸಾಧ್ಯ ಎಂಬುದನ್ನು ಪುನರುಚ್ಛರಿಸಿದರು.



