ಬಾಗಲಕೋಟೆ ಉಪಚುನಾವಣೆ ರಂಗೇರಿದೆ ಪ್ರಚಾರದ ಅಬ್ಬರ ಜೋರಾಗಿದೆ ಅದರಂತೆ ಉಮೇಶ್ ಮೇಟಿ ಗೆಲುವುಗಾಗಿ ಡಿಸಿಎಂ ಹಾಗೂ ಸುರ್ಜೆವಾಲ ಸುದೀರ್ಘ ಮೂರು ತಾಸು ಸರಣಿ ಸಭೆ ನಡೆಸಿದ್ದಾರೆ.
ಸಭೆಯ ನಂತರ ಖಾಸಗಿ ಹೋಟೆಲ್ ನಲ್ಲಿ ಪ್ರಗತಿಯ ಪಕ್ಷಿ ನೋಟ ಎಂಬ ಪುಸ್ತಕ ಬಿಡುಗಡೆ ಮಾಡಲಾಗಿದೆ.
ದಿ. ಎಚ್. ವೈ ಮೇಟಿ ಅವರ ಅಭಿವೃದ್ಧಿ ಕಾರ್ಯಾಗಳ ಒಳಗಂಡ ಪುಸ್ತಕ ಇದಾಗಿದೆ. ಈ ಪುಸ್ತಕವನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸುರ್ಜೆವಾಲಾ ಪುಸ್ತಕ ಬಿಡುಗಡೆ ಮಾಡಿದರು.
ಇನ್ನು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೆವಾಲ ಕರ್ನಾಟಕದಲ್ಲಿ ಎರಡು ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದಿಂದ ಸಮಾವೇಶಿ ವಿಕಾಸ ಹಾಗೂ ಜನ ಕಲ್ಯಾಣದ ಮೇಲೆ ಚುನಾವಣೆ ನಡೆಯುತ್ತಿದ್ದರೆ, ಬಿಜೆಪಿ ಅವರದ್ದು ವಿನಾಶ, ದ್ವೇಷ,ಒಡೆದು ಅಳುವ ನೀತಿಯ ಚುನಾವಣೆ ಎಂದು ಕಿಡಿ ಕಾರಿದರು. ನಾವು ಜನರ ಸೇವಕರು ಜನರೇ ನಮ್ಮ ಸರ್ಕಾರದ ಮಾಲೀಕರು ಎಂದರು.
ಬಿಜೆಪಿ ಅಜೆಂಡಾ ಏನಿದೆ ಅಂದರೆ ಗ್ಯಾರಂಟಿಗಳನ್ನ ರದ್ದು ಮಾಡಬೇಕು, ಕಮಿಷನ್ ದಂಧೆ ಪ್ರಾರಂಭ ಮಾಡಬೇಕು, ಇಂದು ಏಪ್ರಿಲ್ ಒಂದರಂದು ನಿನ್ನೆ ದಿವಸ ಏಪ್ರಿಲ್ ಫೂಲ್ ಅನ್ನುತ್ತಾರೆ ಆದರೆ ನಾವು ಹಾಗೆ ಕರಿಯಲ್ಲ, ಏಪ್ರಿಲ್ ಒಂದರಂದು ಬಿಜೆಪಿ ಜನರ ಜೇಬು ಕತ್ತರಿಸುವ ಕೆಲಸ ಮಾಡಿದೆ. ರೈಲ್ವೆ ನಿಲ್ದಾಣಗಳಲ್ಲಿ ಬರೆದಿರತ್ತೆ ಅಲ್ಲವೇ ಕಿಸೆ ಕಳ್ಳರಿಂದ ಎಚ್ಚರ ಅಂತ ಹಾಗೆ ಬಿಜೆಪಿ ಕಿಸೆ ಕಳ್ಳತನದಿಂದ ಎಚ್ಚರ ಅಂತ ನಾವು ಹೇಳುತ್ತಿದ್ದೇವೆ ಎಂದರು.ಕಿಸೆ ಕಳ್ಳತನಕ್ಕಾಗಿಯೇ ಬಿಜೆಪಿ ಅವರು ಏಪ್ರಿಲ್ ಒಂದನ್ನ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಬೆಲೆ ಏರಿಕೆ ವಿರುದ್ಧ ಆಕ್ರೋಶ
ಇನ್ನು ಸಿಲಿಂಡರ್ ದರ ಮೂರನೇ ಬಾರಿಗೆ ಏರಿಕೆ ಆಗಿದೆ ನಮ್ಮ ಸರ್ಕಾರವಿದ್ದಾಗ 400₹ ಗೆ ಕೊಡುತ್ತಿದ್ದೆವು. ಇದೆ ಮೊದಲ ಬಾರಿಗೆ 2,000₹ ದಾಟಿದೆ ಎಂದರು.ಮೋದಿ ಸರ್ಕಾರ ಕರ್ನಾಟಕದ ರಸ್ತೆ ಟೋಲ್ ಗಳ ಟ್ಯಾಕ್ಸ್ ಏರಿಕೆ ಮಾಡಿದೆ ಎಂದರು.ಇದರಿಂದ 23 ಸಾವಿರ ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡಿದೆ ಎಂದರು.
ಇನ್ನು ವಿಮಾನ ದರದಲ್ಲಿ 10 ರಿಂದ 15 ರಷ್ಟು ಹೆಚ್ಚಾಗಿದೆ ಎಂದರು ಹವಾಯ್ ಚಪ್ಪಲ್ ಸೆ ಹವಾಯ್ ಜಹಾಜ್ ಪ್ರಯಾಣ ಸಾಧ್ಯವಿಲ್ಲ ಎಂಬಂತೆ ಆಯಿತು ಎಂದು ವ್ಯಂಗ್ಯವಾಡಿದರು.900 ಡ್ರಗ್ಸ್ ಔಷಧಿಗಳ ಬೆಲೆ ಏರಿಕೆ ಆಗಿದೆ, ಅಪಘಾತದಂತ ಸಮಯದಲ್ಲಿ ಮೊರ್ಫ್ ನ್ ಇಂಜೆಕ್ಷನ್ ಬೇಕಾಗತ್ತೆ ಇದರ ಬೆಲೆ ಸಹ ಏರಿಕೆ ಯಾಗಿದೆ ಎಂದರು.ಡಯಬಿಟಿಸ್,ಹೃದಯಘಾತ ಸಂಬಂಧ ಔಷಧಿಗಳ ಬೆಲೆ ಏರಿಕೆಯಾಗಿದೆ ಎಂದರು.
ರೈಲ್ವೆ ಪ್ಯಾಸೆಂಜರ್ ಬೆಲೆ ಏರಿಕೆ ಆಗಿದೆ.ಎಟಿಎಂ ವಿಥ್ ಡ್ರಾ ಹಣ ಕೂಡ ಕಡಿತ ವಾಗಲಿದೆ ಎಂದು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಯದಾಗಿ ಬಿಜೆಪಿ ಹೈ ತೋಹ್ ಮೆಹಂಗಾಯಿ ಹೆ.ಕಾಂಗ್ರೆಸ್ ಇದ್ದರೆ ಜನಸಾಮಾನ್ಯರಿಗೆ ಗ್ಯಾರಂಟಿ ಸುರಕ್ಷೆ ಇರಲಿದೆ ಎಂದರು.
ಇನ್ನು ಸಿಎಂ ಆದಿಯಾಗಿ ಸಚಿವರು ಸೂಟ್ ಕೇಸ್ ತರುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಸುರ್ಜೆವಾಲ ಮಾತನಾಡಿ ಮೊದಲು ಯತ್ನಾಳ್ ವಿರುದ್ದ ವಿಜಯೇಂದ್ರ ಸ್ಪರ್ಧಿಸಿ ಗೆಲ್ಲಲಿ ಎಂದು ತಿರುಗೇಟು ನೀಡಿದರು



