ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಿಸಿ ; ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ

ರಾಜಕೀಯ

ಬಾಗಲಕೋಟೆ, ನೀಲನಗರದ ಕಾಂಗ್ರೆಸ್ ಪ್ರಚಾರ ಸಭೆಯುದ್ದೇಶಿಸಿ ಸಿದ್ದರಾಮಯ್ಯ ಭಾಷಣ ಮಾಡಿದರು.ದೇಶದ ಸ್ವತಂತ್ರ ಹೋರಾಟದಲ್ಲಿ ಬಿಜೆಪಿಯವರು ಭಾಗವಹಿಸಲಿಲ್ಲ. ಆದರೆ ಕಾಂಗ್ರೆಸ್ ಅವರು ಭಾಗವಹಿಸಿದ್ದರು ಎಂದರು.

22 ವರ್ಷ ಹೋರಾಟ ನಡೆಸಿದ್ದರು ಯಾವ ಒಬ್ಬ ಮುಖಂಡರು ಭಾಗವಹಿಸಲಿಲ್ಲ ಎಂದು ಕಿಡಿಕಾರಿದರು.

ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕಾಗಿ ಸಂವಿಧಾನ ಕೊಟ್ಟರು. ನಾನು ಎಂದಿಗೂ ಸಾಮಾಜಿಕ ನ್ಯಾಯಕ್ಕಾಗಿ ಇರುತ್ತೇನೆ. ಒಳಮಿಸಲಾತಿಯಲ್ಲಿ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ.

ನೀವು ಯಾರು ಆತಂಕ ಪಡಬೇಕಾಗಿಲ್ಲ,ನಿಮಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು ಎಂದ ಸಿಎಂ ಸಿದ್ದರಾಮಯ್ಯ.

ಮುಂದುವರೆದು ನಾವು ಗ್ಯಾರಂಟಿ ಯೋಜನೆ ನೀಡಿದೆವು ಆದರೆ ಬಿಜೆಪಿ ಇದನ್ನ ವಿರೋಧಿಸಿದರು. ನಮ್ಮ ಸರ್ಕಾರ ಬಡವರು, ದೀನ ದಲಿತರ ಪರವಿದೆ.

ಹಾಗಾಗಿ ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಉಮೇಶ್ ಮೇಟಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಯಾಚನೆ ಮಾಡಿದರು.

Author