ಶಿವಮೊಗ್ಗ, ಜಿಲ್ಲೆಯ ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ. ಶಿವಮೊಗ್ಗ ಈ ಸಹಕಾರಿ ಸಂಘದ 2026-2031ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಆರ್. ಮೋಹನ್ ಕುಮಾರ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘವು ಪ್ರಸಕ್ತ 80 ಕೋಟಿಗೂ ಅಧಿಕ ವಾರ್ಷಿಕ ವಹಿವಾಟನ್ನು ನಡೆಸುತ್ತಿದ್ದು. 30 ಕೋಟಿಗೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ 5 ವರ್ಷವೂ ನಿರಂತರವಾಗಿ 01 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಹೊಂದಿದೆ. ಮೋಹನ್ ಕುಮಾರ್ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸೌಲಭ್ಯಗಳು ಹಾಗೂ ಉಳಿತಾಯ ಯೋಜನೆಗಳನ್ನು ಜಾರಿಗೆ ತರುವ ಅಪೇಕ್ಷೆಯನ್ನು ಹೊಂದಿದ್ದು, ಸಂಘದ ಸದಸ್ಯರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ನೂತನ ಯೋಜನೆಗಳನ್ನು ರೂಪಿಸುವ ಇಚ್ಛೆಯನ್ನು ಹೊಂದಿದ್ದಾರೆ.
ಉಪಾಧ್ಯಕ್ಷರಾಗಿ ಐ.ಬಿ.ಮೋಹನ್ ಕುಮಾರ್, ನಿರ್ದೇಶಕರಾಗಿ ಸಿ.ಎಸ್.ಷಡಾಕ್ಷರಿ, ಎಸ್.ಆರ್.ನರಸಿಂಹಮೂರ್ತಿ, ಡಾ.ಸಿ.ಎ.ಹಿರೇಮಠ, ಎನ್.ಎಂ.ರಂಗನಾಥ, ಡಿ.ವಿ.ಸತೀಶ್, ರಾಜು ಲಿಂಬು ಚವ್ಹಾಣ, ಟಿ.ಕೊಟ್ರೇಶ, ಪಿ.ಎಲ್.ಮಹೇಶ್, ಕೆ.ನರಸಿಂಹ ಜಿ.ಪ್ರವೀಣಕುಮಾರ್, ಎಂ.ಜಯ, ಎಸ್.ಪಿ.ರಾಜು, ಎಸ್.ಶೋಭಿತ್, ಶ್ರೀಮತಿ ರೇಖಾ ಎಸ್ ಹಾಗೂ ಶ್ರೀಮತಿ ಆಶಾ ಕೆ.ಎಂ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.



