ಕೆಡಿ’ ಚಿತ್ರದ ‘ಸರ್ಸೆ ನಿನ್ನಸೆರಗ ಸರ್ಸೆ’ ಹಾಡು ಭಾರೀ ವಿವಾದಕ್ಕೆ ಒಳಗಾಗಿದೆ. ಹಾಡಿನ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
“ಉದ್ದೇಶಪೂರ್ವಕವಾಗಿ ಯಾರೂ ತಪ್ಪು ಮಾಡುವುದಿಲ್ಲ. ನಾನು ಪ್ರತಿ ಸಿನಿಮಾದಲ್ಲೂ ಹಾಡುಗಳನ್ನು ಬರೆದಿದ್ದೇನೆ. ದೇವರ ಬಗ್ಗೆ ಸಾಂಗ್ ಬರೆದಿದ್ದೇನೆ. ತಾಯಿಯ ಬಗ್ಗೆ, ಅಣ್ಣ-ತಮ್ಮ, ಪ್ರೀತಿ ಬಗ್ಗೆ ಹಾಡು ಬರೆದಿದ್ದೇನೆ. ಎಲ್ಲಾ ಸಂದರ್ಭದಲ್ಲೂ ನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹಿಸಿದ್ದೀರಿ.
ಪ್ರೇಮ್ ಸಿನಿಮಾ ಬಂದರೆ ಹಾಡುಗಳನ್ನು ಭರ್ಜರಿಯಾಗಿ ಮಾಡಿರುತ್ತಾನೆ ಅಂದುಕೊಂಡಿರುತ್ತಾರೆ. ಅದಕ್ಕೆಲ್ಲ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ” ಎಂದಿದ್ದಾರೆ.
https://www.instagram.com/reel/DWBrUvck4c2/?igsh=bzJzY2txa3B5NTFt
ಈ ಹಾಡು (ಸರ್ಸೆ ಸೆರಗು) ಬರೆದಾಗ ನಾನು ನನ್ನ ದೃಷ್ಟಿಕೋನದಿಂದ ಬರೆದಿದ್ದೆ. ಒಂದು ಬಾಟಲ್, ಉಪ್ಪಿನ ಕಾಯಿ ಕಂಟೆಂಟ್ ಇಡ್ಕೊಂಡು ಬರೆದಿದ್ದೆ. ಒಂದು ಪದ ತೆಗೆದು ಮೇಲೇ ಹಾಕಬಹುದಿತ್ತು. ಆದರೆ ಕುತೂಹಲ ಇರಲಿ ಅಂತ ಕೊನೆಯಲ್ಲಿ ಬರೆದೆ. ಯಾಕೆ ಅಂದ್ರೆ ಒಬ್ಬ ಸಾಹಿತಿ ಹೀಗೂ ಬರೆಯಬಹುದು ಅಂತ ಬರೆದೆ.
ಹಾಗಂತ ನಾನು ಅ*ಶ್ಲೀಲವಾಗಿ ಆಗಲಿ, ಯಾರಿಗೂ ನೋವು ಮಾಡುವ ಉದ್ದೇಶದಿಂದ ಬರೆಯಲಿಲ್ಲ. ಯಾರಿಗೂ ನೋವಾಗುವಂತೆ ಮುಂದೆ ಮಾಡಲ್ಲ, ಸಾಯುವರೆಗೂ ಮಾಡಲ್ಲ. ಅದರ ಅವಶ್ಯಕತೆನೂ ನನಗಿಲ್ಲ ಎಂದಿದ್ದಾರೆ.
ನನ್ನ ಪ್ರೀತಿ ಮಾಡುವವರಿಗೆ ಈ ಹಾಡು ಕೇಳಿ ಹರ್ಟ್ ಆಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು.
ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅ*ಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ.
ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ರಿಲೀಸ್ ಮಾಡುತ್ತೇನೆ, ನಿಮಗೆ ಹರ್ಟ್ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ.
ಕೆಲವರು ಬೇರೆ ರೀತಿಯಲ್ಲಿ ಇದನ್ನು ಅರ್ಥ ಮಾಡಿಕೊಂಡು, ನನ್ನನ್ನು ನನ್ನ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಲೈಕ್, ಕಮೆಂಟ್‌ಗಾಗಿ ಕೆಲವರು ಮಾತನಾಡುತ್ತಿದ್ದಾರೆ ಅಂತವರಿಗೆಲ್ಲ ಒಳ್ಳೆಯದಾಗಲಿ ಎಂದಿದ್ದಾರೆ.



