ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ, ಸಿದ್ದರಾಜಯ್ಯ ಎಂಬುವವರು ಸಾಲ ಪಾವತಿಸಿಲ್ಲ ಎಂದು ಊರೆಲ್ಲಾ ಪೋಸ್ಟರ್ ಅಂಟಿಸಿ ಅವಮಾನಿಸಲಾಗಿದೆ.
ಕೃತ್ಯದ ಹಿಂದೆ, ತಮ್ಮಿಂದ ಹಣ ಪಡೆದು ವಂಚಿಸಿದ್ದ ಚಿಟ್ಸ್ ಕಂಪನಿ ಮ್ಯಾನೇಜರ್ ಗೌತಮ್ ರಾಜ್ ಕೈವಾಡವಿದೆ ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ.
ಪೋಸ್ಟರ್ವ್ಯಕ್ತಿಯೊಬ್ಬರು ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯುಳ್ಳ ಪೋಸ್ಟರ್ ಅಂಟಿಸಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ಸಿದ್ದರಾಜಯ್ಯ ಸಾಲದ ಹಣ ಪಾವತಿ ಮಾಡಿಲ್ಲ ಅಂತೇಳಿ ಊರು ತುಂಬಾ ಪೋಸ್ಟರ್ ಅಂಟಿಸಲಾಗಿದೆ.
ಸಿದ್ದರಾಜಯ್ಯ ಅವರು ಕುರಂಕೋಟೆ ಗ್ರಾಮದ ನಿವಾಸಿಯಾಗಿದ್ದಾರೆ. ಸಿದ್ದರಾಜು ಸಾಲಕ್ಕೆ ಜಾಮೀನು ನೀಡಿರುವ ವ್ಯಕ್ತಿಯ ಫೋಟೋ ಸಹ ಪೋಸ್ಟರ್‌ನಲ್ಲಿ ಹಾಕಲಾಗಿದೆ.
ಕೊಡಚಾದ್ರಿ ಚಿಟ್ಸ್ ಕಂಪನಿ ಕುರಂಕೋಟೆ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣ, ಹಾಗೂ ಊರಿನ ಪ್ರಮುಖ ರಸ್ತೆಯಲ್ಲಿ ಪೊಸ್ಟರ್ ಅಂಟಿಸಲಾಗಿದೆ. ಹಣಕಾಸಿನ ಸಂಸ್ಥೆ ಹೆಸರಿನಲ್ಲಿ ಈ ರೀತಿಯ ಪೋಸ್ಟರ್ ಅಂಟಿಸಲಾಗಿದೆ.
ಇನ್ನು ಪೋಸ್ಟರ್ ಕಾಣುತ್ತಿದ್ದಂತೆ ಸಿದ್ದರಾಜಯ್ಯ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಹಣಕಾಸಿನ ಸಂಸ್ಥೆ ಘಟಕಕ್ಕೆ ಬಂದಿದ್ದಾರೆ. ನಾವು ಈ ರೀತಿಯಲ್ಲಿ ಪೋಸ್ಟರ್ ಅಂಟಿಸಲ್ಲ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ ಹಣಕಾಸಿನ ಸಂಸ್ಥೆಯ ಸಿಬ್ಬಂದಿ ಹೇಳಿದ್ದಾರೆ.

ಗೌತಮ್ ರಾಜು ಕೊರನ್ ಕುಂಟೆ ಗ್ರಾಮದ ಸಿದ್ದರಾಜಯ್ಯ ಅವರಿಗೆ ಅದೇ ಗ್ರಾಮದ ಗೌತಮ್ ರಾಜ್ ಎಂಬಾತ ಪರಿಚಯವಾಗಿದ್ದ. ಆತ ತುಮಕೂರಿನ ಬಟವಾಡಿ ಬಳಿಯಿರುವ ಹಣಕಾಸಿನ ಸಂಸ್ಥೆಯಲ್ಲಿ ಬ್ರಾಂಚ್ ಆಗಿ ಮ್ಯಾನೇಜರ್ ಕೆಲಸ ಮಾಡ್ತಿದ್ದ.
2023-24 ರಲ್ಲಿ ತುಮಕೂರು ಬಟವಾಡಿ ಬ್ರಾಂಚ್ ಹಣಕಾಸಿನ ಸಂಸ್ಥೆಯಲ್ಲಿ, ಸಿದ್ದರಾಜಯ್ಯ ಗೆ 5 ಲಕ್ಷ ಸಾಲ ಕೊಡಿಸಿದ್ದನು. ಸಿದ್ದರಾಜಯ್ಯ ಪ್ರತಿ ತಿಂಗಳು ಸಾಲದ ಹಣವನ್ನ ಬ್ರಾಂಚ್ ಮ್ಯಾನೇಜರ್ ಗೌತಮ್ ರಾಜ್‌ಗೆ ಫೋನ್‌ಪೇ ಮಾಡ್ತಿದ್ದರು.
5 ಲಕ್ಷ ಸಾಲ ಒಂದು ವರ್ಷದ ಹಿಂದೆ ಸಿದ್ದರಾಜಯ್ಯ ಅವರಿಗೆ ಆಕ್ಸಿಡೆಂಟ್ ಆಗಿ ಕಾಲು ಮುರಿದಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ಸಾಲದ ಹಣ ಪಾವತಿ ಮಾಡಿರಲಿಲ್ಲ. ಮತ್ತೆ ಎಂದಿನಂತೆ ಪ್ರತಿ ತಿಂಗಳು ಸಾಲದ ಹಣ ಪಾವತಿ ಮಾಡಿಕೊಂಡು ಬರ್ತಿದ್ದರು. ಈ ಮಧ್ಯೆ ಮತ್ತೊಂದು ಬ್ಯಾಂಕ್ ನಿಂದ ಸಿದ್ದರಾಜಯ್ಯಗೆ 5 ಲಕ್ಷ ಸಾಲ ಕೊಡಿಸುತ್ತೇನೆಂದು ಗೌತಮ್ ಹೇಳಿದ್ದನು.
ಸಿದ್ದರಾಜಯ್ಯ ಹಾಗೂ ಆತನ ಅಳಿಯನಿಂದ ತಲಾ 25 ಸಾವಿರದಂತೆ 50 ಸಾವಿರ ಹಣ ಪಡೆದಿದ್ದನು. ಹಲವು ತಿಂಗಳು ಕಳೆದರು ಸಾಲ ಕೊಡಿಸಿರಲಿಲ್ಲ.ಗೌತಮ್ ರಾಜ್ ಮೇಲೆ ಅನುಮಾನ ಈ ವಿಚಾರವಾಗಿ ಗೌತಮ್ ರಾಜ್ ಜೊತೆ ಸಿದ್ದರಾಜಯ್ಯ ಜಗಳ ಮಾಡಿದ್ದರು.
ಕಳೆದ ಒಂದು ತಿಂಗಳ ಹಿಂದೆ ಕೊರಟಗೆರೆ ಪೊಲೀಸ್ ಠಾಣೆಗೆ ಗೌತಮ್ ರಾಜ್ ವಿರುದ್ಧ ದೂರು ನೀಡಿದ್ರು. ಈ ವೇಳೆ ಹಣ ವಾಪಸ್ ಕೊಡೋದಾಗಿ ಹೇಳಿದ್ದ.
ಪೊಲೀಸ್ ಠಾಣೆಗೆ ಹೋಗಿ ನನ್ನ ವಿರುದ್ಧ ದೂರು ಕೊಟ್ಟು ನನ್ನ ಮರ್ಯಾದೆ ತೆಗೆದಿದ್ದೀಯಾ. ನೋಡ್ತಿರು ನಾನು ನಿನ್ನ ಮರ್ಯಾದೆಯನ್ನ ಹೇಗೆ ತೆಗೆಯುತ್ತೇನೆಂದು ಹೇಳಿಕೊಂಡು ಓಡಾಡ್ತಿದ್ದನಂತೆ. ಇದೀಗ ಗೌತಮ್ ರಾಜ್ ಈ ರೀತಿ ಮಾಡಿರಬಹುದು ಎಂದು ಸಿದ್ದರಾಜಯ್ಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.



