ಖಮೇನಿ ಹತ್ಯೆ ಖಂಡನೀಯ, ಕೇಂದ್ರ ಸರ್ಕಾರದ ಮೌನದ ವಿರುದ್ಧ ಸೋನಿಯಾ ಗಾಂಧಿ ಟೀಕೆ

ರಾಜಕೀಯ

ಇರಾನ್ ನಾಯಕ ಖಮೇನಿಯನ್ನು ಇಸ್ರೇಲ್ ದಾಳಿ ನಡೆಸಿ ಹತ್ಯೆ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದರು. ಇಸ್ರೇಲ್ ಕ್ರಮವನ್ನು ಖಂಡಿಸಿದ್ದರು. ಇದೀಗ ಸೋನಿಯಾ ಗಾಂಧಿ ಪತ್ರಿಕಾ ಅಂಕಣದಲ್ಲಿ ಇರಾನ್ ಮತ್ತು ಇಸ್ರೇಲ್ ಸಂಘರ್ಷದ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಟೀಕೆ ಮಾಡಿದ್ದಾರೆ.

ಇಸ್ರೇಲ್ ಮತ್ತು ಇರಾನ್ ದಾಳಿ ಬಗ್ಗೆ ಕೇಂದ್ರ ಸರ್ಕಾರ ಮೌನ ತಟಸ್ಥ ನೀತಿಯನ್ನು ತೋರಿಸುತ್ತಿಲ್ಲ. ಬದಲಾಗಿ ಇದು ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಯತ್ನ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ. ಖಮೇನಿ ಹತ್ಯೆ ಮಾಡಿರುವ ಇಸ್ರೇಲ್ ನಡೆ ಖಂಡನೀಯ ಎಂದಿದ್ದಾರೆ.

ಕೇಂದ್ರ ಸರ್ಕಾರ ಮೌನವಾಗಿ ಇಸ್ರೇಲ್ ಕ್ರಮವನ್ನು ಸಮರ್ಥಿಸಿಕೊಂಡಂತಿದೆ. ಮಾತುಕತೆ ನಡೆಯುತ್ತಿರುವಾಗಲೇ ರಾಷ್ಟ್ರವೊಂದರ ಮುಖ್ಯಸ್ಥರನ್ನು ಕೊಲೆ ಮಾಡಿರುವುದು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಲೋಪವುಂಟು ಮಾಡಿದೆ. ಎಲ್ಲಕ್ಕಿಂತ ಶಾಕಿಂಗ್ ಆಗಿರುವುದು ಭಾರತ ಸರ್ಕಾರದ ಮೌನ ಎಂದಿದ್ದಾರೆ.

ಆರಂಭದಲ್ಲಿ ಅಮೆರಿಕಾ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿ ಬಗ್ಗೆ ಪ್ರಧಾನಿ ಮೋದಿ ಮೌನವಹಿಸುತ್ತಾರೆ.

ಬಳಿಕ ಇದು ಕಳವಳಕಾರಿ, ಶಾಂತಿ, ಸಂಧಾನದ ಮಾತನಾಡುತ್ತಾರೆ. ಇದೆಲ್ಲಾ ನೋಡಿದರೆ ನಮ್ಮ ದೇಶದ ವಿದೇಶಾಂಗ ನೀತಿ ಬಗ್ಗೆಯೇ ಅನುಮಾನವಾಗುತ್ತದೆ’ ಎಂದಿದ್ದಾರೆ.

Author