ಬೆಂಗಳೂರು, ಅಮುಕು ಡುಮುಕು ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿರಬದು. ಸೋಶಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯು ಸಾಕಷ್ಟು ಜನಪ್ರಿಯತೆ ಪಡೆದರು. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗೂ ತೆರಳಿದ್ದರು.
ಈಗ ಆ ವ್ಯಕ್ತಿ ಮಾಡಿಕೊಂಡ ಒಂದು ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಅವರು ಪೆಟ್ರೋಲ್ ಕುಡಿದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂಬ ವಿಡಿಯೋ ವೈರಲ್ ಆಯಿತು. ಈ ವಿಡಿಯೋದ ಅಸಲಿಯತ್ತು ಹೊರ ಬಂದಿದೆ.
ಅಮುಕು ಡುಮುಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಈ ವ್ಯಕ್ತಿ ಹೆಸರು ಮಂಜು. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹಾಕಿಕೊಂಡು ವೈರಲ್ ಆಗುತ್ತಾ ಇರುತ್ತಾರೆ.
ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒದ್ದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಇತ್ತೀಚೆಗೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ಪ್ರಚಾರಕ್ಕಾಗಿ ಹೇಗೆಲ್ಲಾ ಕೀಳುಮಟ್ಟಕ್ಕಿಳಿಯುತ್ತಿದ್ದಾರೆ ಅನ್ನೋದಕ್ಕೆ ಅಮುಕು ಡುಮುಕು ಮಂಜು ಘಟನೆ ತಾಜಾ ಉದಾಹರಣೆಯಾಗಿದೆ.
ಸೂರಿ ಅಣ್ಣ ಸಿನಿಮಾದ ಪ್ರಚಾರಕ್ಕಾಗಿ ನಕಲಿ ಪೆಟ್ರೋಲ್ ಸೇವಿಸಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ವಿರುದ್ಧ ಕೇಸ್ ದಾಖಲಾಗಿದೆ.

ಸೂರಿ ಅಣ್ಣ ಸಿನಿಮಾಗಾಗಿ ಮಂಜು ʻಅಮುಕು ಡುಮುಕುʼ ಮಂಜು ಪೆಟ್ರೋಲ್ ಕುಡಿದಂತೆ ಡ್ರಾಮಾ ಮಾಡಿ ಅಂಧಾಭಿಮಾನ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೆಜೆಸ್ಟಿಕ್ನ ಥಿಯೇಟರ್ ಒಂದರಲ್ಲಿ ಸೂರಿ ಅಣ್ಣ ಫಿಲ್ಮ್ ಹೀರೊ ಮುಂದೆ ನಕಲಿ ಪೆಟ್ರೋಲ್ ಕುಡಿದು ಮಂಜು ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಂಜು ವಿರುದ್ಧ ಕೇಸ್ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ಆರೋಪದ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನೂ ಮಂಜು ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ತಾನು ಮಾಡಿದ್ದೆಲ್ಲವೂ ಡ್ರಾಮಾ ಎನ್ನುವ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾನೆ.
ನಾನು ಪ್ರಾಂಕ್ ಮಾಡ್ತಿರೋದಾಗಿ ಮೊದಲೇ ಮಾಡಿದ್ದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೇನು ತುಪ್ಪ, ಜೀರಾ ಪಾನಿಯಾ ಮಿಕ್ಸ್ ಮಾಡಿ, ಪೆಟ್ರೋಲ್ ರೀತಿಯಲ್ಲಿ ಕಾಣುವಂತೆ ಪಾನೀಯ ತಯಾರಿಸಿದ್ದ ಅಮುಕು ಡುಮುಕು, ಕೇಸ್ ದಾಖಲಾಗ್ತಿದ್ದಂತೆ ವಿಡಿಯೋ ಹಂಚಿಕೊಂಡಿದ್ದಾನೆ.
ಸಿನಿಮಾ ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಿಗೆ ಇಳಿಯುವಂತ ಸಿನಿಮಾ ತಂಡಕ್ಕೂ ಕೂಡ ಕಾನೂನು ರೀತಿಯ ಎಚ್ಚರಿಕೆ ಅವಶ್ಯಕತೆಯಿದೆ.
ಮುಂದೆಂದೂ ಯಾರನ್ನ ಸಹ ಪ್ರಚೋದಿಸದಂತೆ ಸಂಬಂಧಪಟ್ಟ ಇಲಾಖೆಗಳು ಸಹ ಕಾನೂನು ಕ್ರಮ ಕೈಗೊಳ್ಳವ ಅನಿವಾರ್ಯತೆ ಈ ಮೂಲಕ ಇದೆ.



