ಚಿತ್ರದುರ್ಗ, ರಾಷ್ಟ್ರೀಯ ಹೆದ್ದಾರಿ-13 ಶಿವಮೊಗ್ಗ-ಚಿತ್ರದುರ್ಗ ರಸ್ತೆ ನಿರ್ಮಾಣದ ಕಿ.ಮೀ.422.00 ರಿಂದ ಕಿ.ಮೀ.523.600 ವರೆಗೆ ಅರೇಹಳ್ಳಿ ಗ್ರಾಮದ ಬಳಿ ಎಲ್.ಸಿ.ನಂ.162 ಹತ್ತಿರ ROB ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿ-13ರ ಬಳಿ ರಾ.ಹೆ.369 ಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಿರ್ಮಾಣ ಅವಶ್ಯಕತೆಯಿದ್ದು, ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ಅಡಚಣೆಯಾಗಲಿದೆ.
ಆದ ಕಾರಣ ಸದರಿ ಕಾಮಗಾರಿಯನ್ನು ನಿರ್ವಹಿಸಲು ದಿ:10-02-2026 ರಿಂದ 11-02-2026 ರವರೆಗೆ ಈ ಭಾಗದಲ್ಲಿ Traffic Diversion ಮಾಡಲು ಅನುಮತಿ ನೀಡುವಂತೆ ಉಲ್ಲೇಖಿತ ಪತ್ರದಲ್ಲಿ ಕೋರಿರುತ್ತಾರೆ.
ಅದರಂತೆ ಉಲ್ಲೇಖ(2)ರಲ್ಲಿ ಪೊಲೀಸ್ ಉಪಾಧೀಕ್ಷಕರು, ಚಿತ್ರದುರ್ಗ ರವರು ರಾಷ್ಟ್ರೀಯ ಹೆದ್ದಾರಿ-13ರ ಬಳಿ ರಾ.ಹೆ.369 ಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಿರ್ಮಾಣ ಅವಶ್ಯಕತೆಯಿದ್ದು, ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ಅಡಚಣೆಯಾಗಲಿದೆ.

ಆದ ಕಾರಣ ಸದರಿ ಕಾಮಗಾರಿಯನ್ನು ನಿರ್ವಹಿಸಲು ಅರೆಹಳ್ಳಿ ಗ್ರಾಮದ ರೈಲ್ವೆ ಗೇಟ್ ಬಳಿ ಮಾರ್ಗಬದಲಾವಣೆಗೆ ಚಿತ್ರದುರ್ಗ ಕಡೆಯಿಂದ ಬರುವ ವಾಹನಗಳು ಅರೇಹಳ್ಳಿ ಗ್ರಾಮದಿಂದ ಮಾಳೇನಹಳ್ಳಿ ಗ್ರಾಮ, ನಂತರ ಅಲ್ಲಿಂದ ಆರ್.ನುಲೇನೂರು ಮತ್ತು ಬಸಾಪುರ ಗೇಟ್ಗೆ ಬಂದು ಅಲ್ಲಿ ಎನ್.ಹೆಚ್.369 ರಸ್ತೆಯನ್ನು ಸೇರುತ್ತವೆ ಅದೇ ರೀತಿ ಶಿವಮೊಗ್ಗ-ಚನ್ನಗಿರಿ ಕಡೆಯಿಂದ ಬರುವ ಲಘು ವಾಹನಗಳು ಮಲ್ಲಾಡಿಹಳ್ಳಿ ಗೇಟ್ ನಿಂದ ಬಂದು ನಂತರ ಶಿವಪುರ, ಕುನಗಲಿ, ಮಲ್ಕಾಪುರ ಮಾರ್ಗವಾಗಿ ಎಸ್.ಹೆಚ್-47 ರಸ್ತೆ (ಹೊಳಲ್ಕೆರೆ ಹಿರೇಕೆರೆ ರಸ್ತೆಗೆ) ಸೇರಿ ಅಲ್ಲಿಂದ ಹೊಳಲ್ಕೆರೆಗೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.
ಅದೇ ರೀತಿ ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಬಾರಿ ವಾಹನಗಳು ಮಲ್ಲಾಡಿಹಳ್ಳಿ, ಶಿವಪುರ, ಹುಲೇಮಳಲಿ, ಹೊಸಳ್ಳಿ, ಕೋಟೆಹಾಳ್ ಕ್ರಾಸ್ ಮೂಲಕ ಚಿಕ್ಕಜಾಜೂರಿಗೆ ಬಂದು ಅಲ್ಲಿಂದ ಹೊಳಲ್ಕೆರೆ ಮುಖಾಂತರವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.

ದಿ:10-02-2026 ರಂದು ಹೊಳೆರೆ ಟೌನ್ನಲ್ಲಿ ರೈತರ ಪ್ರತಿಭಟನೆ ಇರುವ ಪ್ರಯುಕ್ತ ದಿ:20-02-2026 ರಂದು ಒಂದು ದಿನ ಸದರಿ ಮಾರ್ಗದಲ್ಲಿ Traffic Diversion ಕಾರ್ಯವನ್ನು ಕೈಗೊಳ್ಳಬಹುದಾಗಿರುತ್ತದೆಂದು ವರದಿಯನ್ನು ಸಲ್ಲಿಸಿರುತ್ತಾರೆ.
ಉಲ್ಲೇಖ(3)ರಲ್ಲಿ ಉಪವಿಭಾಗಾಧಿಕಾರಿಗಳು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಇವರು ಅರೆಹಳ್ಳಿ ಗ್ರಾಮದ ರೈಲ್ವೆ ಗೇಟ್ ಬಳಿ ಮಾರ್ಗಬದಲಾವಣೆಗೆ ಚಿತ್ರದುರ್ಗ ಕಡೆಯಿ ಕಡೆಯಿಂದ ಬರುವ ವಾಹನಗಳು ಅರೇಹಳ್ಳಿ ಗ್ರಾಮದಿಂದ ಮಾಳೇನಹಳ್ಳಿ ಗ್ರಾಮ. ನಂತರ ಅಲ್ಲಿಂದ ಆರ್.ನುಲೇನೂರು ಮತ್ತು ಬಸಾಪುರ ಗೇಟ್ಗೆ ಬಂದು ಅಲ್ಲಿ ಎನ್.ಹೆಚ್.369 ರಸ್ತೆಯನ್ನು ಸೇರುತ್ತವೆ ಅದೇ ರೀತಿ ಶಿವಮೊಗ್ಗ-ಚನ್ನಗಿರಿ ಕಡೆಯಿಂದ ಬರುವ ಲಘು ವಾಹನಗಳು ಮಲ್ಲಾಡಿಹಳ್ಳಿ ಗೇಟ್ ನಿಂದ ಬಂದು ನಂತರ ಶಿವಪುರ, ಕುನಗಲಿ, ಮಲ್ಕಾಪುರ ಮಾರ್ಗವಾಗಿ ಎಸ್.ಹೆಚ್-47 ರಸ್ತೆ ಸೇರಿ ಅಲ್ಲಿಂದ ಹೊಳಲ್ಕೆರೆಗೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.
ಅದೇ ರೀತಿ ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಬಾರಿ ವಾಹನಗಳು ಮಲ್ಲಾಡಿಹಳ್ಳಿ, ಶಿವಪುರ, ಹುಲೇಮಳಲಿ, ಹೊಸಳ್ಳಿ, ಕೋಟೆಹಾಳ್ ಕ್ರಾಸ್ ಮೂಲಕ ಚಿಕ್ಕಜಾಜೂರಿಗೆ ಬಂದು ಅಲ್ಲಿಂದ ಹೊಳಲ್ಕೆರೆ ಮುಖಾಂತರವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.
ದಿ:10-02-2026 ರಂದು ಹೊಳಲ್ಕೆರೆ ಟೌನ್ನಲ್ಲಿ ರೈತರ ಪ್ರತಿಭಟನೆ ಇರುವ ಪ್ರಯುಕ್ತ ದಿ:20-02-2026 ರಂದು ಒಂದು ದಿನ ಸದರಿ ಮಾರ್ಗದಲ್ಲಿ Traffic Diversion ಕಾರ್ಯವನ್ನು ಕೈಗೊಳ್ಳಬಹುದಾಗಿರುತ್ತದೆಂದು ವರದಿಯನ್ನು ಸಲ್ಲಿಸಿರುತ್ತಾರೆ.
ಆದ್ದರಿಂದ ಉಲ್ಲೇಖ(2)&(3)ರ ಪತ್ರದಲ್ಲಿನ ವರದಿಗಳಲ್ಲಿ ತಿಳಿಸಿರುವಂತೆ ರಾಷ್ಟ್ರೀಯ ಹೆದ್ದಾರಿ-13 ಶಿವಮೊಗ್ಗ-ಚಿತ್ರದುರ್ಗ ರಸ್ತೆ ನಿರ್ಮಾಣದ ಕಿ.ಮೀ.422.00 ರಿಂದ ಕಿ.ಮೀ.523.600 ವರೆಗೆ ಅರೇಹಳ್ಳಿ ಗ್ರಾಮದ ಬಳಿ ಎಲ್.ಸಿ.ನಂ.162 ಹತ್ತಿರ ROB ಕಾಮಗಾರಿಯನ್ನು ಕೈಗೊಳ್ಳಲು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ವೆಂಕಟೇಶ್.ಟಿ., ಭಾ.ಆ.ಸೇ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಆದ ನಾನು ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 31(1) ಮತ್ತು ಮೋಟರ್ ವಾಹನ ಕಾಯ್ದೆ 1988 ರ ಕಲಂ 115 ಮತ್ತು 116 ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ದಿ:20-02-2026 ರಂದು ರಾಷ್ಟ್ರೀಯ ಹೆದ್ದಾರಿ-13 ಶಿವಮೊಗ್ಗ-ಚಿತ್ರದುರ್ಗ ರಸ್ತೆ ನಿರ್ಮಾಣದ ಕಿ.ಮೀ.422.00 ರಿಂದ ಕಿ.ಮೀ.523.600 ವರೆಗೆ ಅರೇಹಳ್ಳಿ ಗ್ರಾಮದ ಬಳಿ ಎಲ್.ಸಿ.ನಂ.162 ಹತ್ತಿರ ROB ಕಾಮಗಾರಿಯನ್ನು ದಿ:20-02-2026 ರಂದು ಈ ಕೆಳಕಂಡಂತೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದೆ.ಹೊಳಲ್ಕೆರೆ ತಾಲ್ಲೂಕು ಅರೆಹಳ್ಳಿ ಗ್ರಾಮದ ರೈಲ್ವೆ ಗೇಟ್ ಬಳಿ ಮಾರ್ಗಬದಲಾವಣೆಗೆ ಚಿತ್ರದುರ್ಗ ಕಡೆಯಿಂದ ಬರುವ ವಾಹನಗಳು ಅರೇಹಳ್ಳಿ ಗ್ರಾಮದಿಂದ ಮಾಳೇನಹಳ್ಳಿ ಗ್ರಾಮ, ನಂತರ ಅಲ್ಲಿಂದ ಆರ್.ನುಲೇನೂರು ಮತ್ತು ಬಸಾಪುರ ಗೇಟ್ಗೆ ಬಂದು ಅಲ್ಲಿ ಎನ್.ಹೆಚ್.369 ರಸ್ತೆಯನ್ನು ಸೇರುತ್ತವೆ.
ಅದೇ ರೀತಿ ಶಿವಮೊಗ್ಗ-ಚನ್ನಗಿರಿ ಕಡೆಯಿಂದ ಬರುವ ಲಘು ವಾಹನಗಳು ಮಲ್ಲಾಡಿಹಳ್ಳಿ ಗೇಟ್ನಿಂದ ಬಂದು ನಂತರ ಶಿವಪುರ, ಕುನಗಲಿ.
ಮಲ್ಕಾಪುರ ಮಾರ್ಗವಾಗಿ ಎಸ್.ಹೆಚ್-47 ರಸ್ತೆ (ಹೊಳಲ್ಕೆರೆ ಹಿರೇಕೆರೆ ರಸ್ತೆಗೆ) ಸೇರಿ ಅಲ್ಲಿಂದ ಹೊಳಲ್ಕೆರೆಗೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.
ಅದೇ ರೀತಿ ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಬಾರಿ ವಾಹನಗಳು ಮಲ್ಲಾಡಿಹಳ್ಳಿ, ಶಿವಪುರ, ಹುಲೇಮಳಲಿ, ಹೊಸಳ್ಳಿ, ಕೋಟೆಹಾಳ್ ಕ್ರಾಸ್ ಮೂಲಕ ಚಿಕ್ಕಜಾಜೂರಿಗೆ ಬಂದು ಅಲ್ಲಿಂದ ಹೊಳಲ್ಕೆರೆ ಮುಖಾಂತರವಾಗಿ ಚಿತ್ರದುರ್ಗಕ್ಕೆ ಹೋಗಬಹುದಾಗಿರುತ್ತದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆ. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಿದೆ.



