ದಾವಣಗೆರೆ | ಹಿರೇಕಲ್ಮಠದಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಮತ್ತು ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮ

ದಾವಣಗೆರೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇ ಕಲ್ಮಠದಲ್ಲಿ ದಿನಾಂಕ 27 ಮತ್ತು 28/2/2026 ಹಾಗೂ ಮಾರ್ಚ್ 01/03/26 ಮತ್ತು 02/03/2026 ರಂದು ಹಿರೇಕಲ್ಮಠದಲ್ಲಿ ನಡೆಯುವ ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಪ್ರಯುಕ್ತ ಕೃಷಿ ಮೇಳ ನಡೆಯಲಿದೆ.

ಇದರ ಸದುಪಯೋಗವನ್ನು ತಾಲೂಕಿನ ರೈತರು ಮತ್ತು ವಿವಿಧ ರೀತಿಯ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣ ಮತ್ತು ಆಧುನಿಕ ರೀತಿಯ ಮತ್ತು ಸಾವಯವ ಪದ್ಧತಿಯ ಎಲ್ಲಾ ಮಾರ್ಗದರ್ಶನ ನೀಡುವಂತ ಕಂಪನಿಯವರು ಬಂದು ಈ ಕೃಷಿ ಮೇಳದಲ್ಲಿ ಪಾಲ್ಗೊಂಡು ರೈತರಿಗೆ ಅತಿ ಹೆಚ್ಚು ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದಿದ್ದಾರೆ.

ಈಗಿನ ಕಾಲದಲ್ಲಿ ರೈತರು ಬೆಳೆದ ಬೆಳೆಗೆ ನಿಗದಿತವಾದ ಬೆಲೆ ಇಲ್ಲದೆ ರೈತನು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾನೆ ಆದ್ದರಿಂದ ರೈತನಿಗೆ ದೇಶದ ಬೆನ್ನೆಲುಬು ಎಂದು ಬರಿ ಮಾತಿನಲ್ಲಿ ಕೃತಿಯಲ್ಲಿ ಹೇಳಿದರೆ ಸಾಲದು ಆದ್ದರಿಂದ ರೈತನು ಒಂದು ಉನ್ನತ ಮಟ್ಟಕ್ಕೆ ಏರಲು ಅವನಿಗೆ ಸರ್ಕಾರವು ಉತ್ತಮವಾದ ಬೀಜ ಗೊಬ್ಬರ ಒದಗಿಸಬೇಕು ರೈತನು ತರುವ ಬೀಜ ಗೊಬ್ಬರ ಬೆಲೆ ಗಗನಕೇರಿದೆ ಆದರೆ ಮಾರುವಾಗ ಮಾರುಕಟ್ಟೆ ಬೆಲೆ ಏರುಪೇರು ತಾನು ಬೆಳೆಗೆ ಖರ್ಚು ಮಾಡಿದಂತ ಹಣವು ಸಹ ಅವನಿಗೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ.

ಆದ್ದರಿಂದ ರೈತ ಕುಲದ ಬೆನ್ನೆಲುಬಾಗಿ ನಿಂತು ಸಹಕಾರಿಯಾಗೋಣ ರೈತಫಲವನ್ನು ಉಳಿಸೋಣ ಎಂದು ಡಾಕ್ಟರ್ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು ರೈತರ ಬಗ್ಗೆ ಮಾತನಾಡಿದರು.

Author