ಬಾಗಲಕೋಟೆ,ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಪರ, ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ್ , ಬಿ.ವೈ.ವಿಜಯೇಂದ್ರ ರಾಜ್ಯದ ಮುಖ್ಯಮಂತ್ರಿ ಆಗುವುದು ಶತಃ ಸಿದ್ಧ ಎಂದು ಹೇಳಿದ್ದಾರೆ.
ಸೂರ್ಯ ಉದಯಿಸುವದು ಎಷ್ಟು ಸತ್ಯವೋ, 2028ಕ್ಕೆ ಬಿ.ವೈ ವಿಜಯೇಂದ್ರ ಅವ್ರು ಸಿಎಂ ಆಗುವದು ಅಷ್ಟೇ ಸತ್ಯ ಎಂದು ಬೀಳಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಾಂತಗೌಡ ಪಾಟೀಲ್ ಹೇಳಿದ್ದಾರೆ.
ವಿಬಿ.ಜಿ.ರಾಮ್ ಜಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ್ ನಿರಾಣಿ ಸಮ್ಮುಖದಲ್ಲೇ ವಿಜಯೇಂದ್ರ ಪರ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿದ್ದಾರೆ.
ಈ ರಾಜ್ಯದಲ್ಲಿ ಎಲ್ಲೇ ಹೋದ್ರು, ಜನರು ನಮ್ಮ ಯಡಿಯೂರಪ್ಪನವ್ರು, ನಮ್ಮ ಯಡಿಯೂರಪ್ಪ ನವ್ರ ಮಗ ವಿಜಯೇಂದ್ರ ನಮ್ಮ ಅಧ್ಯಕ್ಷರು ಅಂತಾರೆ. ನಮ್ಮ ಯಡಿಯೂರಪ್ಪ ನವರು ಇಲ್ಲಿಗೆ ಬಂದು ಹೋದ ಮೇಲೆ ಮುಖ್ಯಮಂತ್ರಿ ಆಗಿದ್ರು.
ಈಗ ನೀವು (ವಿಜಯೇಂದ್ರ) ಬಂದಿದ್ದೀರಿ, ನೀವು ಮುಖ್ಯಮಂತ್ರಿ ಆಗ್ತೀರಿ ಅಂತಾ ಪ್ರತೀ ಗ್ರಾಮದಲ್ಲಿ ಹೇಳುತ್ತಿದ್ದಾರೆ.
*ನೀವೆಲ್ಲ ತೋರಿಸುವ ಪ್ರೀತಿಯನ್ನ ನೋಡಿದ್ರೆ, ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, 2028ಕ್ಕೆ ವಿಜಯೇಂದ್ರ ಅವ್ರು ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ ಎಂದು ಶಾಂತಗೌಡ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಮಾತಿಗೆ, ಕೇಕೆ, ಶಿಳ್ಳೆ ಚಪ್ಪಾಳೆ ಹಾಕಿ ಕಾರ್ಯಕರ್ತರು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಬೀಳಗಿ ವಿಧಾನಸಭಾ ಕ್ಷೇತ್ರವು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ವಿಧಾನಸಭಾ ಕ್ಷೇತ್ರ.



